ಬೆಂಗಳೂರು : ವಿಶ್ವಾಸ ಮತಯಾಚನೆಯ ಚರ್ಚೆ ಸಂದರ್ಭದಲ್ಲಿ ಸದನದಲ್ಲಿ ಗದ್ದಲ-ಗಲಾಟೆ ಮಾಡಿದ ಪರಿಣಾಮ ಕಲಾಪವನ್ನು ಮುಂದೂಡಿರುವ ಸ್ಪೀಕರ್, ಇಂದು ರಾತ್ರಿ 9 ಗಂಟೆ ವೇಳೆಗೆ ವಿಶ್ವಾಸಮತ ಸಾಬೀತು ಮಾಡಬೇಕೆಂದು ಸಿಎಂಗೆ ಖಡಕ್ ಸೂಚನೆ ಕೊಟ್ಟಿದ್ದಾರೆ ಎನ್ನಲಾಗಿದೆ.
ವಿಶ್ವಾಸಮತ ಸಾಬೀತುಪಡಿಸಿ, ಇಲ್ಲದಿದ್ದರೆ ನಾನೇ ರಾಜೀನಾಮೆ ನೀಡುವೆ: ಸ್ಪೀಕರ್ ರಮೇಶ್ಕುಮಾರ್ - undefined
ಸದನದಲ್ಲಿ ಗದ್ದಲ- ಗಲಾಟೆ ಮಾಡಿದ ಪರಿಣಾಮ ಕಲಾಪವನ್ನು ಸ್ಪೀಕರ್ ಮುಂದೂಡಿದ್ದಾರೆ. ಇತ್ತ ಕಳೆದ ಒಂದು ಗಂಟೆಯಿಂದಲೂ ಸಿಎಂ ಕುಮಾರಸ್ವಾಮಿ, ಡಿಸಿಎಂ ಡಾ. ಜಿ. ಪರಮೇಶ್ವರ್, ಮಾಜಿ ಸಿಎಂ ಸಿದ್ದರಾಮಯ್ಯ, ಸಚಿವರಾದ ಹೆಚ್. ಡಿ. ರೇವಣ್ಣ, ಸಾ. ರಾ. ಮಹೇಶ್, ಕೃಷ್ಣಬೈರೇಗೌಡ ಅವರು ಸ್ಪೀಕರ್ ಕಚೇರಿಯಲ್ಲಿ, ರಮೇಶ್ ಕುಮಾರ್ ಅವರ ಮನವೊಲಿಕೆಗೆ ಭಾರಿ ಕಸರತ್ತು ನಡೆಸುತ್ತಿದ್ದಾರೆ.
![ವಿಶ್ವಾಸಮತ ಸಾಬೀತುಪಡಿಸಿ, ಇಲ್ಲದಿದ್ದರೆ ನಾನೇ ರಾಜೀನಾಮೆ ನೀಡುವೆ: ಸ್ಪೀಕರ್ ರಮೇಶ್ಕುಮಾರ್](https://etvbharatimages.akamaized.net/etvbharat/prod-images/768-512-3916436-thumbnail-3x2-jay.jpg)
ಸ್ಪೀಕರ್ ಮನವೊಲಿಕೆಗೆ ಮೈತ್ರಿ ತಂತ್ರ
ಒಂದೆರಡು ದಿನ ಕಾಲಾವಕಾಶ ನೀಡುವಂತೆ ಸಿಎಂ ಮನವಿಗೆ ಬೇಸರಗೊಂಡಿರುವ ಸ್ಪೀಕರ್ ರಮೇಶ್ ಕುಮಾರ್, ವಿಶ್ವಾಸ ಮತ ಸಾಬೀತು ಪಡಿಸಿ, ಇಲ್ಲದಿದ್ದರೆ ನಾನೇ ಸ್ಪೀಕರ್ ಹುದ್ದೆಗೆ ರಾಜೀನಾಮೆ ಕೊಡುತ್ತೇನೆ ಎಂದು ಸಿಎಂಗೆ ಎಚ್ಚರಿಕೆ ನೀಡಿದ್ದಾರೆ ಎಂದು ಹೇಳಲಾಗುತ್ತಿದೆ.
ಇತ್ತ ಕಳೆದ ಒಂದು ಗಂಟೆಯಿಂದಲೂ ಸಿಎಂ ಕುಮಾರಸ್ವಾಮಿ, ಡಿಸಿಎಂ ಡಾ. ಜಿ. ಪರಮೇಶ್ವರ್, ಮಾಜಿ ಸಿಎಂ ಸಿದ್ದರಾಮಯ್ಯ, ಸಚಿವರಾದ ಹೆಚ್. ಡಿ. ರೇವಣ್ಣ, ಸಾ. ರಾ. ಮಹೇಶ್, ಕೃಷ್ಣಬೈರೇಗೌಡ ಅವರು ಸ್ಪೀಕರ್ ಕಚೇರಿಯಲ್ಲಿ ರಮೇಶ್ ಕುಮಾರ್ ಅವರ ಮನವೊಲಿಕೆಗೆ ಭಾರಿ ಕಸರತ್ತು ನಡೆಸುತ್ತಿದ್ದಾರೆ.
Last Updated : Jul 22, 2019, 8:39 PM IST