ಕರ್ನಾಟಕ

karnataka

ETV Bharat / city

ಸೋಮವಾರ ನವೀನ್ ಮೃತದೇಹ ತಾಯ್ನಾಡಿಗೆ: ಸಿಎಂ ಬೊಮ್ಮಾಯಿ

ಉಕ್ರೇನ್​ನಲ್ಲಿ ಮೃತಪಟ್ಟಿರುವ ವೈದ್ಯಕೀಯ ವಿದ್ಯಾರ್ಥಿ ನವೀನ್ ಮೃತದೇಹ ಸೋಮವಾರ ಬೆಳಗ್ಗೆ ಬೆಂಗಳೂರಿಗೆ ಆಗಮಿಸಲಿದ್ದು, ತದನಂತರ ಹಾವೇರಿಗೆ ತೆಗೆದುಕೊಂಡು ಹೋಗಲಾಗುತ್ತದೆ ಎಂದು ಸಿಎಂ ಇಂದು ತಿಳಿಸಿದರು.

Medical Student Naveen body
Medical Student Naveen body

By

Published : Mar 18, 2022, 6:30 PM IST

Updated : Mar 18, 2022, 7:46 PM IST

ಬೆಂಗಳೂರು:ಉಕ್ರೇನ್‌ನ ಖಾರ್ಕಿವ್‌ನಲ್ಲಿ ಸಾವಿಗೀಡಾದ ಹಾವೇರಿ ವಿದ್ಯಾರ್ಥಿ ನವೀನ್‌ ಗ್ಯಾನಗೌಡರ್‌ ಮೃತದೇಹ ಸೋಮವಾರ ಕರ್ನಾಟಕಕ್ಕೆ ಆಗಮಿಸಲಿದೆ. ಇಂದು ವಿಧಾನಸೌಧದಲ್ಲಿ ನಡೆದ ಸರ್ವಪಕ್ಷಗಳ ಸಭೆ ಬಳಿಕ ಸುದ್ದಿಗೋಷ್ಟಿಯಲ್ಲಿ ಭಾಗಿಯಾದ ಸಿಎಂ ಬೊಮ್ಮಾಯಿ ಈ ಮಾಹಿತಿ ಹಂಚಿಕೊಂಡಿದ್ದಾರೆ.

ಭಾನುವಾರ ನವೀನ್ ಮೃತದೇಹ ತಾಯ್ನಾಡಿಗೆ... ಸಿಎಂ ಬೊಮ್ಮಾಯಿ ಮಾಹಿತಿ

ರಷ್ಯಾ-ಉಕ್ರೇನ್​ ಸಂಘರ್ಷದ ಮಧ್ಯೆ ಮಾರ್ಚ್​​ 1ರಂದು ರಷ್ಯಾ ನಡೆಸಿದ್ದ ಶೆಲ್​ ದಾಳಿಯಲ್ಲಿ ನವೀನ್ ಗ್ಯಾನಗೌಡರ್ ಮೃತಪಟ್ಟಿದ್ದರು. ಹಾವೇರಿ ಜಿಲ್ಲೆಯ ಚಳಗೇರಿಯಿಂದ ವೈದ್ಯಕೀಯ ವ್ಯಾಸಂಗಕ್ಕಾಗಿ ನವೀನ್‌ ಉಕ್ರೇನ್‌ಗೆ ತೆರಳಿದ್ದರು. ಈ ಯುವಕ ಮೃತಪಟ್ಟು 21 ದಿನಗಳಾದ ಬಳಿಕ ಮೃತದೇಹ ತಾಯ್ನಾಡಿಗೆ ಬರುತ್ತಿದೆ. ಸೋಮವಾರ ಸಂಜೆ ಹಾವೇರಿಯಲ್ಲಿ ಅಂತ್ಯಕ್ರಿಯೆ ನಡೆಯಲಿದೆ ಎಂದು ತಿಳಿದು ಬಂದಿದೆ.

ನವೀನ್‌ ಮೃತದೇಹ ಭಾರತಕ್ಕೆ ತರಲು ಕೇಂದ್ರ ಸರ್ಕಾರ ಇನ್ನಿಲ್ಲದ ಪ್ರಯತ್ನ ನಡೆಸುತ್ತಿತ್ತು. ಉಕ್ರೇನ್‌ ಅಧಿಕಾರಿಗಳ ಜೊತೆ ನಿರಂತರ ಸಂಪರ್ಕದಲ್ಲಿತ್ತು. ಇದರ ಫಲವಾಗಿ ಮೃತದೇಹ ಇದೀಗ ಭಾರತಕ್ಕೆ ವಾಪಸ್​ ಆಗುತ್ತಿದೆ.

ಇದೇ ವಿಷಯವಾಗಿ ರಾಜ್ಯಸಭೆಯಲ್ಲಿ ಮಾರ್ಚ್​ 15ರಂದು ಮಾಹಿತಿ ನೀಡಿದ್ದ ವಿದೇಶಾಂಗ ಸಚಿವ ಎಸ್​. ಜೈಶಂಕರ್, ನವೀನ್ ಮೃತದೇಹವನ್ನು ಸುರಕ್ಷಿತವಾಗಿ ಭಾರತಕ್ಕೆ ತರುವ ಎಲ್ಲ ಪ್ರಯತ್ನಗಳು ಮುಂದುವರೆದಿದ್ದು, ಅದಕ್ಕಾಗಿ ಉಕ್ರೇನ್​​​ನಲ್ಲಿರುವ ನಮ್ಮ ರಾಯಭಾರ ಕಚೇರಿ ಕೆಲಸ ಮಾಡ್ತಿದೆ ಎಂದಿದ್ದರು.

Last Updated : Mar 18, 2022, 7:46 PM IST

ABOUT THE AUTHOR

...view details