ಕರ್ನಾಟಕ

karnataka

ETV Bharat / city

ಕರ್ತವ್ಯಕ್ಕೆ ಹಾಜರಾಗುವ ಕೆಎಸ್​ಆರ್​ಟಿಸಿ ಸಿಬ್ಬಂದಿಗೆ ಮೆಡಿಕಲ್ ಸರ್ಟಿಫಿಕೇಟ್ ಕಡ್ಡಾಯ - ಕೆಎಸ್​ಆರ್​ಟಿಸಿ ಲಾಕ್​ಡೌನ್​ ಸುದ್ದಿ

ರಾಜ್ಯದಲ್ಲಿ ಕೊರೊನಾ ಭೀತಿಯಿಂದ ಬಸ್​ ಸಂಚಾರ ಸ್ಥಗಿತಗೊಳಿಸಿದ್ದ ಕೆಎಸ್​ಆರ್​ಟಿಸಿ ಸದ್ಯ ಸಂಚಾರ ಪುನಾರಂಭ ಮಾಡಲಿದ್ದು, ಕರ್ತವ್ಯಕ್ಕೆ ಹಾಜರಾಗುವ ಸಿಬ್ಬಂದಿ ವೈದ್ಯಾಧಿಕಾರಿಗಳಿಂದ ಆರೋಗ್ಯ ತಪಾಸಣಾ ಪ್ರಮಾಣ ಪತ್ರವನ್ನು ಕಡ್ಡಾಯವಾಗಿ ತರಬೇಕಿದೆ.

medical-certificate-compulsory-for-duty-attending-ksrtc-staff
ಕೆಎಸ್​ಆರ್​ಟಿಸಿ

By

Published : Apr 25, 2020, 2:57 PM IST

Updated : Apr 25, 2020, 3:03 PM IST

ಬೆಂಗಳೂರು: ಕೊರೊನಾ ಭೀತಿ ಹಿನ್ನೆಲೆ ಕೆಎಸ್ಆರ್​ಟಿಸಿ ಅಲರ್ಟ್ ಆಗಿದ್ದು, ತನ್ನ ಸಿಬ್ಬಂದಿಗೆ ಮೆಡಿಕಲ್ ಸರ್ಟಿಫಿಕೇಟ್ ಕಡ್ಡಾಯಗೊಳಿಸಿದೆ. ಕರ್ತವ್ಯಕ್ಕೆ ಹಾಜಾರಾಗುವ ಸಿಬ್ಬಂದಿ ಆರೋಗ್ಯ ತಪಾಸಣೆ ಮಾಡಿಸಿಕೊಂಡು ಆರೋಗ್ಯಾಧಿಕಾರಿಗಳಿಂದ ಅಧಿಕೃತ ಪ್ರಮಾಣ ಪತ್ರವನ್ನು ಕಡ್ಡಾಯವಾಗಿ ತರಬೇಕೆಂದು ಸೂಚನೆ ನೀಡಿದೆ.

ಕರ್ತವ್ಯ ಹಾಜಾರಾಗುವ ಕೆಎಸ್​ಆರ್​ಟಿಸಿ ಸಿಬ್ಬಂದಿಗೆ ಮೆಡಿಕಲ್ ಸರ್ಟಿಫಿಕೇಟ್ ಕಡ್ಡಾಯ

ಮೆಡಿಕಲ್ ಸರ್ಟಿಫಿಕೇಟ್ ಇಲ್ಲ ಅಂದ್ರೆ ಕರ್ತವ್ಯಕ್ಕೆ ಹಾಜರಾಗುವಂತಿಲ್ಲ. ಇನ್ನು ಮೇ 3ಕ್ಕೆ‌ ಲಾಕ್ ಡೌನ್ ಮುಗಿಯುವ‌ ಹಿನ್ನೆಲೆ‌ ಒಪ್ಪಂದದ ಮೇರೆಗೆ ಬಸ್ ಓಡಿಸಲು ಕೆಎಸ್​ಆರ್​ಟಿಸಿ ಸಜ್ಜಾಗಿದೆ. ಸಾಂದರ್ಭಿಕ ಒಪ್ಪಂದದ ಬಸ್ಸುಗಳಿಗೆ ಬೇಡಿಕೆ ಬಂದರೆ ಬಸ್ ಒದಗಿಸಲು ತೀರ್ಮಾನ ಮಾಡಿದೆ. ‌ರಾಜ್ಯ ಸರ್ಕಾರ ಅನುಮತಿಸಿರೋ ಅಗತ್ಯ ಸೇವೆಗಳಿಗೆ ಬಸ್​ಗಳನ್ನ ನೀಡೋದಾಗಿ ಕೆಎಸ್ಆರ್​ಟಿಸಿ ಪ್ರಕಟಣೆ ಹೊರಡಿಸಿದೆ.

ಕರ್ತವ್ಯ ಹಾಜಾರಾಗುವ ಕೆಎಸ್​ಆರ್​ಟಿಸಿ ಸಿಬ್ಬಂದಿಗೆ ಮೆಡಿಕಲ್ ಸರ್ಟಿಫಿಕೇಟ್ ಕಡ್ಡಾಯ

‌ಕೈಗಾರಿಕೆಗಳು, ಸರ್ಕಾರಿ ಮತ್ತು ಖಾಸಗಿ ಸಂಸ್ಥೆಗಳು, ಐಟಿಬಿಟಿ ವಲಯಗಳಿಗೆ ಬಸ್ ಬಾಡಿಗೆಗೆ ಸಿಗಲಿವೆ. ಸಾಮಾನ್ಯ ಬಸ್ ಮತ್ತು ರಾಜಹಂಸ ಬಸ್ಸುಗಳನ್ನು ಬಾಡಿಗೆಗೆ ನೀಡಲು ಕೆಎಸ್ಆರ್​ಟಿಸಿ ನಿರ್ಧರಿಸಿದೆ. ಕರ್ನಾಟಕ ಸಾರಿಗೆ ಬಸ್ ಪ್ರತಿ ಕಿ.ಲೋ ಮೀಟರ್ ಗೆ 40 ರೂ, 12 ಗಂಟೆ ಅವಧಿಗೆ 8 ಸಾವಿರ,‌ 24 ಗಂಟೆ ಅವಧಿಗೆ 10 ಸಾವಿರ ರೂ. ಬಾಡಿಗೆ ನಿಗದಿ ಮಾಡಿದೆ.

ಕರ್ತವ್ಯ ಹಾಜಾರಾಗುವ ಕೆಎಸ್​ಆರ್​ಟಿಸಿ ಸಿಬ್ಬಂದಿಗೆ ಮೆಡಿಕಲ್ ಸರ್ಟಿಫಿಕೇಟ್ ಕಡ್ಡಾಯ

ಕರ್ನಾಟಕ ಸಾರಿಗೆ ಬಸ್​ನಲ್ಲಿ 20 ಅಥವಾ 30 ಮಂದಿಗೆ ಮಾತ್ರ ಅವಕಾಶ ಕಲ್ಪಿಸಲಾಗಿದೆ. ರಾಜಹಂಸ ಬಸ್ ಪ್ರತಿ‌ ಕಿ. ಮೀಟರ್ ಗೆ 45 ರೂ, 12 ಗಂಟೆ ಅವಧಿಗೆ 9 ಸಾವಿರ ರೂ, 24 ಗಂಟೆ ಅವಧಿಗೆ 11,250 ರೂ ನಿಗದಿ ಮಾಡಲಾಗಿದೆ. ‌ಈ ಬಸ್​ನಲ್ಲಿ 16 ಮಂದಿ ಪ್ರಯಾಣಿಸಲು ಅವಕಾಶ ಇದ್ದು, ‌ಷರತ್ತುಗಳನ್ವಯದ ಮೇಲೆ ಬಾಡಿಗೆಗೆ ನೀಡೋದಾಗಿ ಕೆಎಸ್ಆರ್​ಸಿ ಸುತ್ತೋಲೆ ಹೊರಡಿಸಿದೆ.

Last Updated : Apr 25, 2020, 3:03 PM IST

ABOUT THE AUTHOR

...view details