ಬೆಂಗಳೂರು: ವಿಧಾನಸೌಧ ಹಾಗೂ ವಿಕಾಸೌಧ ಅಕ್ಕಪಕ್ಕ 4-5 ಸಾರ್ವಜನಿಕ ಶೌಚಾಲಯ ನಿರ್ಮಿಸಲು ಕ್ರಮ ಕೈಗೊಳ್ಳುತ್ತೇವೆ ಎಂದು ಸಿಎಂ ಬಿ.ಎಸ್.ಯಡಿಯೂರಪ್ಪ ಹೇಳಿದ್ದಾರೆ.
ಶಕ್ತಿಕೇಂದ್ರದ ಸುತ್ತಮುತ್ತ ನಾಲ್ಕೈದು ಸಾರ್ವಜನಿಕ ಶೌಚಾಲಯ ನಿರ್ಮಾಣಕ್ಕೆ ಕ್ರಮ: ಸಿಎಂ - ವಿಧಾನ ಪರಿಷತ್ ಕಲಾಪ ಶೌಚಾಲಯ ನಿರ್ಮಾಣ ಹೇಳಿಕೆ
ವಿಧಾನಸೌಧ, ವಿಕಾಸಸೌಧ, ಕಬ್ಬನ್ ಪಾರ್ಕ್ ನೋಡಲು ನಿತ್ಯ ಸಾವಿರಾರು ಪ್ರವಾಸಿಗರು ಬರ್ತಾರೆ. ಆದರೆ ಸುತ್ತಮುತ್ತ ಶೌಚಾಲಯಗಳು ಇಲ್ಲ. ಈ ಬಗ್ಗೆ ಸರ್ಕಾರ ಗಮನ ಹರಿಸಬೇಕು ಎಂಬ ಪರಿಷತ್ ಸದಸ್ಯ ವೆಂಕಟೇಶ್ ಅವರ ಪ್ರಶ್ನೆಗೆ ಸಿಎಂ ಬಿ.ಎಸ್.ಯಡಿಯೂರಪ್ಪ ಉತ್ತರಿಸಿ, 4-5 ಶೌಚಾಲಯ ನಿರ್ಮಿಸುವುದಾಗಿ ಉತ್ತರ ನೀಡಿದರು.

ಪರಿಷತ್ ಸದಸ್ಯ ವೆಂಕಟೇಶರ ವಿಧಾನ ಪರಿಷತ್ನಲ್ಲಿ ಪ್ರಶ್ನೋತ್ತರ ಅವಧಿಯಲ್ಲಿ ಮಾತನಾಡಿ, ವಿಧಾನಸೌಧ, ವಿಕಾಸಸೌಧ, ಕಬ್ಬನ್ ಪಾರ್ಕ್ ನೋಡಲು ನಿತ್ಯ ಸಾವಿರಾರು ಪ್ರವಾಸಿಗರು ಬರ್ತಾರೆ. ಆದರೆ ಸುತ್ತಮುತ್ತ ಶೌಚಾಲಯಗಳು ಇಲ್ಲ. ಈ ಬಗ್ಗೆ ಸರ್ಕಾರ ಗಮನ ಹರಿಸಬೇಕು ಎಂದಾಗ ಇದಕ್ಕೆ ಸಿಎಂ, 27 ತಾಣಗಳನ್ನು ಗುರುತಿಸಲಾಗಿದೆ. ತಕ್ಷಣ ವಿಧಾನಸೌಧ, ಕಬ್ಬನ್ ಪಾರ್ಕ್ ಸುತ್ತಮುತ್ತ 4-5 ಶೌಚಾಲಯ ನಿರ್ಮಾಣಕ್ಕೆ ಆದ್ಯತೆ ನೀಡಲಾಗುವುದು ಎಂದರು.
ಪ್ರಶ್ನೋತ್ತರ ಅವಧಿ ನಂತರ ಶೂನ್ಯ ವೇಳೆ ಚರ್ಚೆ ನಡೆಯಿತು. ಹಿರಿಯ ಸದಸ್ಯರಾದ ಐವಾನ್ ಡಿಸೋಜಾ ಹಕ್ಕಿಜ್ವರ ಹಾಗೂ ಕೊರೊನಾ ಸಮಸ್ಯೆ ಬಗ್ಗೆ ಸರ್ಕಾರ ಕೈಗೊಂಡ ಕ್ರಮದ ಕುರಿತು ಪ್ರಸ್ತಾಪಿಸಿದರು. ಇದಕ್ಕೆ ಸಚಿವ ಪ್ರಭು ಚೌವ್ಹಾಣ್ ಸುದೀರ್ಘವಾಗಿ ಉತ್ತರಿಸಿದರು. ಸದಸ್ಯ ಹೆಚ್.ಎಂ.ರೇವಣ್ಣ ಕೇಳಿದ ಪ್ರಶ್ನೆಗೆ ಸಭಾ ನಾಯಕರು ಉತ್ತರ ನೀಡುವುದಾಗಿ ಭರವಸೆ ನೀಡಿದರು.
TAGGED:
ವಿಧಾನಸೌಧ ಪಕ್ಕ ಶೌಚಾಲಯ ನಿರ್ಮಾಣ