ಬೆಂಗಳೂರು: ಕೊರೊನಾ ವೈರಸ್ ರಾಜ್ಯದಲ್ಲಿ ವ್ಯಾಪಿಸುತ್ತಿರುವ ಹಿನ್ನೆಲೆ, ಕಳೆದ 23 ದಿನಗಳಿಂದ ನಗರದ ಕೂಲಿ ಕಾರ್ಮಿಕರು, ಬಡವರು, ಹೊರರಾಜ್ಯದಿಂದ ಬಂದಿರುವ ಕಾರ್ಮಿಕರಿಗೆ ದಿನನಿತ್ಯ ಆಹಾರ ವಿತರಿಸುವ ಕಾರ್ಯವನ್ನ ಕಾಂಗ್ರೆಸ್ ನಾಯಕರು ಮಾಡುತ್ತಿದ್ದಾರೆ.
ಕಾಂಗ್ರೆಸ್ ಪ್ರಚಾರ ಸಮಿತಿಯಿಂದ ನಿತ್ಯ ಬಡವರು, ಕೂಲಿ ಕಾರ್ಮಿಕರಿಗೆ ಊಟೋಪಚಾರ - KPCC President DK Shivakumar
ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಸೂಚನೆ ಹಿನ್ನೆಲೆ, ಇಂದು ಕೂಡ ಬೆಂಗಳೂರು ನಗರ ಕಾಂಗ್ರೆಸ್ ಪ್ರಚಾರ ಸಮಿತಿ ವತಿಯಿಂದ ಬಡವರಿಗೆ ಉಪಾಹಾರ ಹಾಗೂ ಅಗತ್ಯ ವಸ್ತುಗಳನ್ನು ವಿತರಿಸಲಾಯಿತು.
ಕಾಂಗ್ರೆಸ್ ಪ್ರಚಾರ ಸಮಿತಿ ವತಿಯಿಂದ ನಿತ್ಯ ಬಡವರು,ಕೂಲಿ ಕಾರ್ಮಿಕರಿಗೆ ಊಟೋಪಚಾರ
ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಸೂಚನೆ ಹಿನ್ನೆಲೆ, ಬೆಂಗಳೂರಿನ ವಿವಿಧೆಡೆ ಆಹಾರ ಸಾಮಗ್ರಿ ಕಿಟ್, ಊಟ-ಉಪಹಾರ ವಿತರಣೆ ಮಾಡುವ ಕಾರ್ಯ ನಿರಂತರವಾಗಿ ಪ್ರಗತಿಯಲ್ಲಿದೆ. ಅದರಂತೆ ಇಂದು ಬೆಂಗಳೂರು ನಗರ ಕಾಂಗ್ರೆಸ್ ಪ್ರಚಾರ ಸಮಿತಿಯಿಂದ ಬಡವರಿಗೆ ಉಪಾಹಾರ ಹಾಗೂ ಅಗತ್ಯ ವಸ್ತುಗಳನ್ನು ವಿತರಿಸಲಾಯಿತು.
ದಿನಕ್ಕೊಂದು ಭಾಗಕ್ಕೆ ತೆರಳಿ ಅಲ್ಲಿರುವ ಅಸಹಾಯಕರು, ಕಾರ್ಮಿಕರು ಹಾಗೂ ಬಡವರ್ಗದವರಿಗೆ ಊಟ-ಉಪಹಾರ ನೀಡಲಾಗುತ್ತಿದೆ.