ಬೆಂಗಳೂರು: ಸಿಂದಗಿ ಕ್ಷೇತ್ರದಿಂದ ಸತತ ಏಳು ಬಾರಿ ಸ್ಪರ್ಧಿಸಿದ್ದ ಎಂ.ಸಿ.ಮನಗೂಳಿ ಅವರು ಎರಡು ಬಾರಿ ಶಾಸಕರಾಗಿದ್ದರು.
ಮಾಜಿ ಸಚಿವ, ಸಿಂದಗಿ ಕ್ಷೇತ್ರದ ಜೆಡಿಎಸ್ ಶಾಸಕ ಎಂ.ಸಿ.ಮನಗೂಳಿ (85) ಅನಾರೋಗ್ಯದಿಂದ ನಿಧನರಾಗಿದ್ದಾರೆ. ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದ ಅವರನ್ನು ಕಳೆದ ಶನಿವಾರ ಬೆಂಗಳೂರಿನ ಅಪೊಲೋ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಇಂದು ಚಿಕಿತ್ಸೆ ಫಲಕಾರಿಯಾಗದೇ ಕೊನೆ ಉಸಿರೆಳೆದಿದ್ದಾರೆ. ಸಿಂದಗಿ ಕ್ಷೇತ್ರದಿಂದ ಸತತ ಏಳು ಬಾರಿ ಸ್ಪರ್ಧಿಸಿದ್ದ ಎಂ.ಸಿ.ಮನಗೂಳಿ ಅವರು ಎರಡು ಬಾರಿ ಶಾಸಕರಾಗಿದ್ದರು.
ಮಾಜಿ ಪ್ರಧಾನಿ, ಜೆಡಿಎಸ್ ವರಿಷ್ಠ ಹೆಚ್.ಡಿ.ದೇವೇಗೌಡರ ಕಟ್ಟಾ ಬೆಂಬಲಿಗರಾಗಿದ್ದ ಅವರು, ಸತತ ಐದು ಬಾರಿ ಸೋತರೂ ಜೆಡಿಎಸ್ ಬಿಡದೇ ಗೌಡರ ಜೊತೆಗಿನ ಸಖ್ಯ ಮುಂದುವರೆಸಿಕೊಂಡು ಬಂದಿದ್ದರು. ಪಕ್ಷ ನಿಷ್ಠೆ ಹಾಗೂ ಸತತ ಸೋಲಿನ ಅನುಕಂಪದ ನಡುವೆ ಈ ಬಾರಿಯ ಚುನಾವಣೆಯಲ್ಲಿ ಗೆದ್ದಿದ್ದರು. ಕಾಂಗ್ರೆಸ್- ಜೆಡಿಎಸ್ ಮೈತ್ರಿ ಸರ್ಕಾರದಲ್ಲಿ 14 ತಿಂಗಳು ತೋಟಗಾರಿಕಾ ಸಚಿವರಾಗಿ ಕೆಲಸ ಮಾಡಿದ್ದು, ವಿಜಯಪುರ ಜಿಲ್ಲಾ ಉಸ್ತುವಾರಿಯೂ ಆಗಿದ್ದರು.
ಓದಿ:ಸಿಂದಗಿ ಶಾಸಕ ಎಂ.ಸಿ.ಮನಗೂಳಿ ವಿಧಿವಶ
ಪಕ್ಷ ಬಿಡುವ ವದಂತಿ: ಮನಗೂಳಿ ಅವರು, ಮಕ್ಕಳ ರಾಜಕೀಯ ಭವಿಷ್ಯದ ಕಡೆ ಗಮನಹರಿಸಿದ್ದರು ಎಂಬ ಮಾತುಗಳು ಕೇಳಿ ಬಂದಿದ್ದವು. ಮಕ್ಕಳಾದ ಶಾಂತವೀರ ಹಾಗೂ ಅಶೋಕ್ ರಾಜಕೀಯದಲ್ಲಿ ಸಕ್ರಿಯರಾಗಿದ್ದಾರೆ. ಎರಡು ಬಾರಿ ಶಾಸಕರಾಗಿ, ಸಚಿವರೂ ಆಗಿದ್ದ ಅವರನ್ನು ಬಿಜೆಪಿ ಪಕ್ಷ ತನ್ನೆಡೆಗೆ ಸೆಳೆದಿತ್ತು. ಆಗ ಪಕ್ಷ ನಿಷ್ಠೆ ತೋರಿದ ಮನಗೂಳಿ ಅವರು, ಜೆಡಿಎಸ್ ತೊರೆಯುವುದಿಲ್ಲವೆಂದು ಸ್ಪಷ್ಟಪಡಿಸಿದ್ದರು.
ಗುತ್ತಿ ಬಸವಣ್ಣ ಏತನೀರಾವರಿ ಯೋಜನೆ ಹರಿಕಾರ: