ಬೆಂಗಳೂರು: ರಾಜ್ಯದಲ್ಲಿ ಇಂದಿನಿಂದ ಅನ್ಲಾಕ್ 3.0 ಜಾರಿಯಾಗಿದ್ದು, ವಿನೂತನ ವಿದ್ಯಮಾನಕ್ಕೆ ಸಿಲಿಕಾನ್ ಸಿಟಿ ಮಂದಿ ಸಾಕ್ಷಿಯಾಗಿದ್ದಾರೆ. ಇಷ್ಟುದಿನ ನಾವು ದಂಡ ಹಾಕುವ ಮಾರ್ಷಲ್ಗಳನ್ನು ಮಾತ್ರ ನೋಡುತ್ತಿದ್ದೆವು. ಆದರೆ, ಇಂದು ಬೆಳಗ್ಗೆಯಿಂದಲೇ ಕೆಲ ಮಾರ್ಷಲ್ಗಳು ವಿಭಿನ್ನ ರೀತಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.
ಫೈನ್ ಹಾಕುವುದು ಮಾತ್ರ ನಮ್ಮ ಕೆಲಸ ಅಲ್ಲ. ಕೊರೊನಾ ವಿರುದ್ಧ ಹೋರಾಡೋದು ಕೂಡ ನಮ್ಮ ಕೆಲಸ ಎಂಬ ಮನೋಭಾವ ಹೊಂದಿರುವ ಕೆಲ ಮಾರ್ಷಲ್ಗಳು, ಮಾಸ್ಕ್ ಇಲ್ಲದೇ ಓಡಾಡುವವರಿಗೆ ಮಾಸ್ಕ್ಗಳನ್ನು ನೀಡುತ್ತಿದ್ದಾರೆ.