ಕರ್ನಾಟಕ

karnataka

ETV Bharat / city

ಅಕ್ರಮ ಹಣ ವರ್ಗಾವಣೆ ಪ್ರಕರಣ: ಇಡಿ ವಿಚಾರಣೆಗೆ ಹಾಜರಾದ ಮಂತ್ರಿ ಡೆವಲಪರ್ಸ್ ಎಂಡಿ - ಮಂತ್ರಿ ಡೆವಲಪರ್ಸ್ ಎಂಡಿ ಸುಶೀಲ್ ಪಾಂಡುರಂಗ ಮಂತ್ರಿ

ಅಕ್ರಮ ಹಣ ವರ್ಗಾವಣೆ ವ್ಯವಹಾರಕ್ಕೆ ಸಂಬಂಧಿಸಿದಂತೆ ಇಡಿ ಮುಂದೆ ವಿಚಾರಣೆಗೆ ಹಾಜರಾಗುವಂತೆ ಮಂತ್ರಿ ಡೆವಲಪರ್ಸ್ ಚೇರಮನ್ ಮತ್ತು ವ್ಯವಸ್ಥಾಪಕ ನಿರ್ದೇಶಕರಾದ ಸುಶೀಲ್ ಪಾಂಡುರಂಗ ಮಂತ್ರಿ ಅವರಿಗೆ ಸಮನ್ಸ್ ನೀಡಲಾಗಿತ್ತು.

Sushil Panduranga Mantri
ಸುಶೀಲ್ ಪಾಂಡುರಂಗ ಮಂತ್ರಿ

By

Published : Jun 24, 2022, 2:18 PM IST

ಬೆಂಗಳೂರು:ದಕ್ಷಿಣ ಭಾರತದ ಪ್ರಸಿದ್ಧ ರಿಯಲ್ ಎಸ್ಟೇಟ್ ಉದ್ಯಮಿ, ಮಂತ್ರಿ ಡೆವಲಪರ್ಸ್​ ಚೇರ​ಮನ್ ಹಾಗೂ ವ್ಯವಸ್ಥಾಪಕ ನಿರ್ದೇಶಕ ಸುಶೀಲ್ ಪಾಂಡುರಂಗ ಮಂತ್ರಿ ಅವರಿಗೆ ಜಾರಿ ನಿರ್ದೇಶನಾಲಯ (ಇಡಿ) ವಿಚಾರಣೆಗೆ ಬರುವಂತೆ ನೋಟಿಸ್​​ ನೀಡಿತ್ತು. ಈ ಹಿನ್ನೆಲೆ ಅವರು ಇಂದು ಬೆಳಗ್ಗೆ ತನಿಖಾಧಿಕಾರಿಗಳ‌ ಮುಂದೆ ಹಾಜರಾಗಿದ್ದಾರೆ.

ಅಕ್ರಮ ಹಣ ವರ್ಗಾವಣೆ ವ್ಯವಹಾರಕ್ಕೆ ಸಂಬಂಧಿಸಿದಂತೆ ಇಡಿ ಮುಂದೆ ವಿಚಾರಣೆಗೆ ಹಾಜರಾಗುವಂತೆ ಪಾಂಡುರಂಗ ಮಂತ್ರಿ ಅವರಿಗೆ ಸಮನ್ಸ್ ನೀಡಲಾಗಿತ್ತು. ಇಡಿ ಮುಂದೆ ಖುದ್ದಾಗಿ ವಿಚಾರಣೆಗೆ ಹಾಜರಾಗಿ ಅಕ್ರಮ ಹಣ ವರ್ಗಾವಣೆ ಪ್ರಕರಣದ ಬಗ್ಗೆ ವಿವರ ನೀಡುವಂತೆ ಇಡಿ ಸಮನ್ಸ್​ ನೀಡಿತ್ತು.

ಇದನ್ನೂ ಓದಿ:ಪ್ರಸಿದ್ಧ ರಿಯಲ್ ಎಸ್ಟೇಟ್ ಉದ್ಯಮಿ ಮಂತ್ರಿ ಡೆವಲಪರ್ಸ್ ಎಂಡಿಗೆ ಇಡಿ ಸಮನ್ಸ್

ABOUT THE AUTHOR

...view details