ಕರ್ನಾಟಕ

karnataka

ETV Bharat / city

ಚಿಕಿತ್ಸೆಗೆ ಸಿಎಂ ಉತ್ತಮ ಸ್ಪಂದನೆ.. ಮಣಿಪಾಲ್ ಆಸ್ಪತ್ರೆಯಿಂದ ಹೆಲ್ತ್ ಬುಲೆಟಿನ್ ಬಿಡುಗಡೆ.. - ಮಣಿಪಾಲ್​​​ ಆಸ್ಪತ್ರೆ ಯಡಿಯೂರಪ್ಪ ಆರೋಗ್ಯ ವರದಿ ಬಿಡುಗಡೆ

ನಾಳೆ ರಾಜ್ಯಪಾಲ ವಜುಭಾಯ್ ವಾಲಾ ಅಧ್ಯಕ್ಷತೆಯಲ್ಲಿ ಸರ್ವಪಕ್ಷ ನಾಯಕರ ಸಭೆ ಕರೆಯಲಾಗಿದೆ. ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪನವರು ವಿಡಿಯೋ ಸಂವಾದದ ಮೂಲಕ ಭಾಗಿಯಾಗಲಿದ್ದಾರೆ..

manipal-hospital-released-cm-health-bulletin
ಮಣಿಪಾಲ್ ಆಸ್ಪತ್ರೆ

By

Published : Apr 19, 2021, 8:14 PM IST

ಬೆಂಗಳೂರು :ಕೊರೊನಾ ಸೋಂಕಿನಿಂದ ಆಸ್ಪತ್ರೆಗೆ ದಾಖಲಾಗಿರುವ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪನವರು ಚಿಕಿತ್ಸೆಗೆ ಉತ್ತಮವಾಗಿ ಸ್ಪಂದಿಸುತ್ತಿದ್ದಾರೆ ಎಂದು ಮಣಿಪಾಲ್ ಆಸ್ಪತ್ರೆ ಮಾಹಿತಿ ನೀಡಿದೆ.

ಕೋವಿಡ್-19 ಕಾಯಿಲೆಯಿಂದ ಏಪ್ರಿಲ್‌16ರಂದು ಆಸ್ಪತ್ರೆಗೆ ದಾಖಲಾಗಿದ್ದ ಸಿಎಂ ಬಿಎಸ್​ವೈ ಅವರು ಚಿಕಿತ್ಸೆಗೆ ಉತ್ತಮವಾಗಿ ಸ್ಪಂದಿಸುತ್ತಿದ್ದಾರೆ. ವೈದ್ಯಕೀಯ ತಂಡ ಚಿಕಿತ್ಸೆ ಮುಂದುವರೆಸಿದ್ದು, ಅವರ ಆರೋಗ್ಯ ಸ್ಥಿರವಾಗಿದೆ. ಕೊರೊನಾ ಪ್ರೋಟೋಕಾಲ್ ರೀತಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಮಣಿಪಾಲ್ ಆಸ್ಪತ್ರೆ ಹೆಲ್ತ್ ಬುಲೆಟಿನ್ ಬಿಡುಗಡೆ ಮಾಡಿದೆ.

ಕೋವಿಡ್ ಸೋಂಕಿನಿಂದ ಆಸ್ಪತ್ರೆಗೆ ದಾಖಲಾಗಿದ್ದರೂ ಇಂದು ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ನಡೆದ ಬೆಂಗಳೂರು ಸಚಿವರು, ಶಾಸಕರು, ಸಂಸದರ ಸಭೆಯಲ್ಲಿ ಆಸ್ಪತ್ರೆಯಿಂದಲೇ ವಿಡಿಯೋ ಸಂವಾದದ ಮೂಲಕ ಭಾಗಿಯಾದರು.

ನಾಳೆ ರಾಜ್ಯಪಾಲ ವಜುಭಾಯ್ ವಾಲಾ ಅಧ್ಯಕ್ಷತೆಯಲ್ಲಿ ಸರ್ವಪಕ್ಷ ನಾಯಕರ ಸಭೆ ಕರೆಯಲಾಗಿದೆ. ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪನವರು ವಿಡಿಯೋ ಸಂವಾದದ ಮೂಲಕ ಭಾಗಿಯಾಗಲಿದ್ದಾರೆ.

ABOUT THE AUTHOR

...view details