ಕರ್ನಾಟಕ

karnataka

ETV Bharat / city

ಮಹಿಳೆಯರಿಗಾಗಿ ಟೆಲಿ ಕನ್ಸಲ್ಟೇಷನ್ ಆರಂಭಿಸಿದ ಮಣಿಪಾಲ್ ಆಸ್ಪತ್ರೆ - Tele Consultation For Women

ಮಹಿಳೆಯರ ಮೌನವನ್ನು ಮುರಿಯುವ ಹಾಗೂ ಆಕೆ ಎದುರಿಸುತ್ತಿರುವ ದೈಹಿಕ ಮತ್ತು ಮಾನಸಿಕ ಸವಾಲುಗಳನ್ನು ಪತ್ತೆ ಹಚ್ಚಿ ಪರಿಹರಿಸುವ ಕಾರ್ಯಕ್ಕೆ ಮಣಿಪಾಲ್ ಹಾಸ್ಪಿಟಲ್ಸ್ ಮುಂದಾಗಿದೆ

Manipal Hospital Tele Consultation
ಮಣಿಪಾಲ್ ಆಸ್ಪತ್ರೆ ಟೆಲಿ ಕನ್ಸಲ್ಟೇಷನ್

By

Published : Feb 15, 2022, 11:21 AM IST

ಬೆಂಗಳೂರು: ಸಾಮಾನ್ಯವಾಗಿ ಮಹಿಳೆಯರು ತಮಗೇನೇ ಅನಾರೋಗ್ಯ ಸಮಸ್ಯೆ ಇದ್ದರೂ ತಮ್ಮೊಳಗಿನ ಸಂಕೋಚ ಸ್ವಭಾವದಿಂದಾಗಿ ಅದನ್ನು ಹೆಚ್ಚಾಗಿ ಯಾರಲ್ಲೂ ಹೇಳಿಕೊಳ್ಳುವುದಿಲ್ಲ. ಹಾಗಾಗಿ ಮಹಿಳೆಯರ ಮೌನವನ್ನು ಮುರಿಯುವ ಹಾಗೂ ಆಕೆ ಎದುರಿಸುತ್ತಿರುವ ದೈಹಿಕ ಮತ್ತು ಮಾನಸಿಕ ಸವಾಲುಗಳನ್ನು ಪತ್ತೆ ಹಚ್ಚಿ ಪರಿಹರಿಸುವ ಕಾರ್ಯಕ್ಕೆ ಮಣಿಪಾಲ್ ಹಾಸ್ಪಿಟಲ್ಸ್ ಮುಂದಾಗಿದೆ. ‘ಫಾರ್ ವುಮನ್, ಬೈ ವುಮನ್’ ಎಂಬ ವಿಡಿಯೋ ಕನ್ಸಲ್ಟೇಷನ್ ವೇದಿಕೆಯನ್ನು ಮಣಿಪಾಲ್ ಆಸ್ಪತ್ರೆ ಆರಂಭಿಸಿದೆ.

ಇಲ್ಲಿ ಮಹಿಳೆಯರು ಯಾವುದೇ ಸಂಕೋಚ, ಆತಂಕವಿಲ್ಲದೇ ತಮ್ಮ ಆರೋಗ್ಯ ಸಮಸ್ಯೆಗಳು, ಪರಿಹಾರಗಳ ಕುರಿತು ಮಹಿಳಾ ವೈದ್ಯರ ಜೊತೆ ಮುಕ್ತವಾಗಿ ಚರ್ಚಿಸಬಹುದಾಗಿದೆ.


ಕಂಕುಳಲ್ಲಿ ಗಡ್ಡೆಯಾಗುವುದು ಅಥವಾ ಬಾವು (ಊತ), ಅಸ್ವಸ್ಥತೆ, ಮಾನಸಿಕ ಆಯಾಸ, ಸುಸ್ತು, ತೂಕ ಕಡಿಮೆ ಆಗುವಿಕೆ, ಋತುಚಕ್ರ ತಪ್ಪುವಿಕೆ, ತಲೆ ನೋವು, ಮಾನಸಿಕ-ಭಾವನಾತ್ಮಕ ಸಮಸ್ಯೆಗಳು ಸೇರಿದಂತೆ ಹೀಗೆ ಯಾವುದೇ ರೀತಿಯ ಆರೋಗ್ಯ ಸಂಬಂಧಿ ಸಮಸ್ಯೆಗಳ ಕುರಿತಂತೆ ಮಹಿಳೆಯರು ಈ ವೇದಿಕೆ ಮೂಲಕ ಪರಿಹಾರ ಕಂಡುಕೊಳ್ಳಬಹುದಾಗಿದೆ. ಇಲ್ಲಿ ಚರ್ಚಿತವಾಗುವ ವಿಷಯಗಳು ಶೇ.100ರಷ್ಟು ಗೌಪ್ಯವಾಗಿರುತ್ತವೆ.

+91 8951146852, +91 9731122666 ಫೋನ್ ನಂಬರ್​ಗಳ ಮೂಲಕ ವಿಡಿಯೋ ಕನ್ಸಲ್ಟೇಷನ್ ಸೌಲಭ್ಯ ಪಡೆಯಬಹುದಾಗಿದೆ. ಇದಕ್ಕೆ 250 ರೂಪಾಯಿ ಶುಲ್ಕವಿರುತ್ತದೆ. ಜಗತ್ತಿನ ಯಾವುದೇ ಮೂಲೆಯಲ್ಲಿರುವ ಮಹಿಳೆಯರು ಈ ಸೌಲಭ್ಯ ಬಳಸಿಕೊಂಡು ತಮ್ಮ ಅನಾರೋಗ್ಯ ಸಮಸ್ಯೆಗಳಿಗೆ ಪರಿಹಾರ ಪಡೆಯಬಹುದಾಗಿದೆ.

ಈ ಕುರಿತು ಮಣಿಪಾಲ್ ಹಾಸ್ಪಿಟಲ್ಸ್​​ ಸಿಒಒ ಕಾರ್ತಿಕ್ ರಾಜಗೋಪಾಲ್ ಮಾತನಾಡಿ, 'ಮಹಿಳೆಯರು ಎದುರಿಸುತ್ತಿರುವ ಸವಾಲುಗಳನ್ನು ನಾವು ಅರ್ಥ ಮಾಡಿಕೊಂಡಿದ್ದು, ಅವರಿಗೆ ಅಗತ್ಯ ವೈದ್ಯಕೀಯ ನೆರವು ನೀಡುವ ಉದ್ದೇಶದಿಂದ ಅವರನ್ನು ತಲುಪುವ ವ್ಯವಸ್ಥೆಯನ್ನು ಸುಲಭವಾಗಿಸಿದ್ದೇವೆ. ಎಲ್ಲಾ ಮಹಿಳೆಯರು ತಮ್ಮ ಮೌನ ಮುರಿದು ತಾವು ಅನುಭವಿಸುವ ನೋವಿನಿಂದ ಹೊರಬರಬೇಕಿದೆ. ಮಹಿಳೆಯರು ಮುಂದೆ ಬಂದು ತಮ್ಮ ಆರೋಗ್ಯ ಸಂಬಂಧಿ ಸಮಸ್ಯೆ ಬಗ್ಗೆ ಹೇಳಿಕೊಳ್ಳಲು ಇದ್ದ ಎಲ್ಲಾ ಅಡೆತಡೆಗಳನ್ನು ಮಣಿಪಾಲ್ ಹಾಸ್ಪಿಟಲ್ಸ್ ತೆಗೆದುಹಾಕಿದೆ.

ಇದನ್ನೂ ಓದಿ:ಬೆಳಗಾವಿ: ರೈಲು ಹಳಿಗೆ ಬಿದ್ದ ಬಾಲಕಿಯನ್ನು ರಕ್ಷಿಸಿದ ಲೋಕೋ ಪೈಲೆಟ್

ಪ್ರತಿ ಮಹಿಳೆಯೂ ತಮ್ಮ ಸಮಸ್ಯೆಗಳನ್ನು ಹೇಳಿಕೊಳ್ಳುವ ಮೂಲಕ ನೆಮ್ಮದಿ ಕಂಡುಕೊಳ್ಳುತ್ತಾರೆ ಎಂಬ ಅಂಶವನ್ನು ಮಣಿಪಾಲ್ ಹಾಸ್ಪಿಟಲ್ಸ್ ಅರ್ಥ ಮಾಡಿಕೊಂಡಿದೆ. ಈ ಸೇವೆಯನ್ನು ಸೂಕ್ತ ಸಮಯದಲ್ಲಿ ಮತ್ತು ಪರಿಣಾಮಕಾರಿ ವೆಚ್ಚದಲ್ಲಿ ಒದಗಿಸಲು ಪ್ರಯತ್ನಿಸಲಿದ್ದೇವೆ' ಎಂದು ಹೇಳಿದರು.

ABOUT THE AUTHOR

...view details