ಬೆಂಗಳೂರು: ಸಿಸಿಟಿವಿ ದೃಶ್ಯಾವಳಿಯಲ್ಲಿ ಸಮಾಜಘಾತಕ ಶಕ್ತಿಗಳು ಪ್ರತಿಭಟನೆ ದುರುಪಯೋಗ ಪಡಿಸಿಕೊಂಡಿರುವುದು ಸ್ಪಷ್ಟವಾಗಿದ್ದು, ಸತ್ಯಾಂಶ ಹೊರಬರಲಿದೆ. ಇನ್ನಾದರೂ ಸರ್ಕಾರವನ್ನು ದೂರುವ ಬದಲು ಶಾಂತಿ ಕಾಪಾಡಲು ಪ್ರತಿಪಕ್ಷಗಳು ಸಹಕಾರ ನೀಡಬೇಕೆಂದು ಬಿಜೆಪಿ ಯುವ ಮೋರ್ಚಾ ಕಾರ್ಯದರ್ಶಿ ಬಿ.ವೈ ವಿಜಯೇಂದ್ರ ಹೇಳಿದ್ದಾರೆ.
ಮಂಗಳೂರು ಗಲಭೆ: ಈಗಲಾದರೂ ದೂರುವ ಕೆಲಸ ಬಿಡಿ.. ಪ್ರತಿಪಕ್ಷಗಳಿಗೆ ವಿಜಯೇಂದ್ರ ಕರೆ - ಬಿಜೆಪಿ ಯುವ ಮೋರ್ಚಾ ಕಾರ್ಯದರ್ಶಿ ಬಿ.ವೈ ವಿಜಯೇಂದ್ರ
ಸಿಸಿಟಿವಿ ದೃಶ್ಯಾವಳಿಯಲ್ಲಿ ಸಮಾಜಘಾತಕ ಶಕ್ತಿಗಳು ಪ್ರತಿಭಟನೆಯನ್ನ ದುರುಪಯೋಗ ಪಡಿಸಿಕೊಂಡಿರುವುದು ಸ್ಪಷ್ಟವಾಗಿದ್ದು, ಸತ್ಯಾಂಶ ಹೊರಬರಲಿದೆ. ಇನ್ನಾದರೂ ಸರ್ಕಾರವನ್ನು ದೂರುವ ಬದಲು ಶಾಂತಿ ಕಾಪಾಡಲು ಪ್ರತಿಪಕ್ಷಗಳು ಸಹಕಾರ ನೀಡಬೇಕೆಂದು ಬಿಜೆಪಿ ಯುವ ಮೋರ್ಚಾ ಕಾರ್ಯದರ್ಶಿ ಬಿ.ವೈ ವಿಜಯೇಂದ್ರ ಹೇಳಿದ್ದಾರೆ.
![ಮಂಗಳೂರು ಗಲಭೆ: ಈಗಲಾದರೂ ದೂರುವ ಕೆಲಸ ಬಿಡಿ.. ಪ್ರತಿಪಕ್ಷಗಳಿಗೆ ವಿಜಯೇಂದ್ರ ಕರೆ KN_BNG_03_BY_VIJAYENDRA_REACTION_SCRIPT_9021933](https://etvbharatimages.akamaized.net/etvbharat/prod-images/768-512-5478542-thumbnail-3x2-jay.jpg)
ಮಂಗಳೂರು ಘಟನೆಗೆ ಪ್ರತಿ ಪಕ್ಷಗಳು, ರಾಜ್ಯ ಸರ್ಕಾರ ಮತ್ತು ಗೃಹ ಇಲಾಖೆಯನ್ನು ದೂರುವ ಕೆಲಸ ಮಾಡಿದ್ದಾರೆ. ಆದರೆ, ಇವತ್ತಿನ ವೀಡಿಯೋ ನೋಡಿದರೆ ಸ್ಪಷ್ಟವಾಗಿ ಗೊತ್ತಾಗಲಿದೆ, ಸಿಸಿಟಿವಿಯ ದಿಕ್ಕು ಬದಲಿಸಿದ್ದು, ಆಟೋದಲ್ಲಿ ಕಲ್ಲಿನ ರಾಶಿ ತಂದು ಹಾಕುವುದು, ಪ್ರತಿಭಟನೆ ದುರುಪಯೋಗ ಪಡಿಸಕೊಂಡು ಸಮಾಜಘಾತಕ ಶಕ್ತಿಗಳು ಅಶಾಂತಿ ಸೃಷ್ಟಿಸಲು ಯತ್ನಿಸಿದ್ದಾರೆ ಇದು ಸಿಸಿಟಿವಿ ದೃಶ್ಯಾವಳಿಯಲ್ಲಿ ಸ್ಪಷ್ಟವಾಗಿ ಕಂಡುಬರುತ್ತಿದೆ ಎಂದರು.
ಪೌರತ್ವ ಕಾಯಿದೆಯಿಂದ ಯಾವುದೇ ಧರ್ಮದ ಪ್ರಜೆಗೆ ಅನ್ಯಾಯವಾಗಲ್ಲ, ವಿರೋಧ ಪಕ್ಷ - ಬುದ್ದಿ ಜೀವಿಗಳು ದುರುಪಯೋಗೊಡಿಸಿಕೊಂಡು ಅಲ್ಪಸಂಖ್ಯಾತರಿಗೆ, ದಲಿತರಿಗೆ ಅನ್ಯಾಯ ಎಂದು ಗಲಾಟೆ ಮಾಡುತ್ತಿರುವುದು ಶೋಭೆ ತರುವುದಿಲ್ಲ. ಇನ್ನೂದರೂ ಅರ್ಥ ಮಾಡಿಕೊಂಡು ಸಹಕಾರ ನೀಡಲಿ ಎಂದು ಮನವಿ ಮಾಡಿದರು.
ತನಿಖೆ ಮೂಲಕ ಗಲಭೆ ಕೋರರು ಹೊರ ರಾಜ್ಯದಿಂದ ಬಂದವರೋ ಅಥವಾ ಇಲ್ಲಿಯವರೇ ಎನ್ನುವ ಸತ್ಯಾಂಶ ಮುಂದಿನ ದಿನಗಳಲ್ಲಿ ಹೊರಬರಲಿದೆ ಎಂದರು.