ಮಂಗಳೂರು ಗಲಭೆಗೆ ಕಾಂಗ್ರೆಸ್ ಕಾರಣ: ಕಟೀಲ್ ಆರೋಪ - ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಆರೋಪ
ಮಂಗಳೂರು ಗಲಭೆಗೆ ಕಾಂಗ್ರೆಸ್ ಹಾಗೂ ಖಾದರ್ ನೇರ ಕಾರಣ ಎಂದು ಆರೋಪಿಸಿದ ಕಟೀಲ್. ಈ ಕುರಿತು ಉತ್ತರಿಸುವಂತೆ ಆಗ್ರಹ.
ಬೆಂಗಳೂರು: ಮಂಗಳೂರು ಗಲಭೆ ಪೂರ್ವನಿಯೋಜಿತ ಅಂತಾ ಹೇಳಿದ್ದೆ. ಅದು ಇಂದು ನಿಜವಾಗಿದೆ. ಕಾಂಗ್ರೆಸ್ ಗಲಭೆಗೆ ನೇರ ಕಾರಣ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಆರೋಪಿಸಿದ್ದಾರೆ.
ಬಿಜೆಪಿ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಗಲಭೆ ಮಾಡಲು ಕೇರಳದಿಂದ ಬಂದಿದ್ರು ಅಂತಾ ಹೇಳಿದ್ವಿ ಈಗ ಮಾಧ್ಯಮಗಳಲ್ಲಿ ದೃಶ್ಯಾವಳಿಗಳನ್ನ ನೋಡ್ತಿದ್ದೇವೆ. ಕಾಂಗ್ರೆಸ್ನವರು, ಮಾಜಿ ಸಚಿವರೊಬ್ಬರು ಪೂರ್ವ ತಯಾರಿ ನಡೆಸಿದ್ದರಿಂದಲೇ ಹೇಳಿಕೆ ಕೊಟ್ಟಿದ್ದರು. ಅವರು ಪ್ರತಿಭಟನೆ ಮಾಡಲು ಬಂದಿರಲಿಲ್ಲ, ದಾಂಧಲೆ ಮಾಡಲು ಬಂದಿದ್ದರು. ಮುಖ ಮುಚ್ಚಿಕೊಂಡು ಕಲ್ಲು ಹೊಡೆದವರು ಯಾರು? ಅಮಾಯಕರಾ? ಗೂಂಡಾಗಳಾ? ಗೊತ್ತಾಗಬೇಕಿದೆ ಎಂದರು.