ಬೆಂಗಳೂರು: ಕಾರಿನ ಮೇಲೆ ನಾಯಿ ಮೂತ್ರ ವಿಸರ್ಜನೆ ಮಾಡಿದ್ದರಿಂದ ಕೆರಳಿದ ಕಾರಿನ ಮಾಲೀಕ ವೃದ್ಧರೊಬ್ಬರ ಮೇಲೆ ಕಲ್ಲಿನಿಂದ ಹೊಡೆದು ಹಲ್ಲೆ (Attack on Dog Owner) ನಡೆಸಿರುವ ಘಟನೆ ಬಾಣಸವಾಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಹಲ್ಲೆಗೊಳಗಾದ ಗೇರಿ ರೋಜಾರಿಯೊ ಹೆಚ್ಎಎಲ್ ನಿವೃತ್ತ ಉದ್ಯೋಗಿ ಗೇರಿ ರೋಜಾರಿಯೊ ನೀಡಿದ ದೂರಿನ ಮೇರೆಗೆ ಕಾರು ಮಾಲೀಕ ಚಾರ್ಲ್ಸ್ ಎಂಬಾತನ ವಿರುದ್ಧ ಪೊಲೀಸರು ಪ್ರಕರಣ ದಾಖಲಿ ಸಿಕೊಂಡಿದ್ದಾರೆ. ಘಟನೆ ಬಳಿಕ ಮಾಲೀಕ ನಾಪತ್ತೆಯಾಗಿದ್ದಾನೆ.
ಗೇರಿ ರೋಜಾರಿಯೋ ತಮ್ಮ ನಾಯಿಯನ್ನು ಕಳೆದ ಭಾನುವಾರ ರಾತ್ರಿ 11 ಗಂಟೆಗೆ ಹೊರಗಡೆ ಬಿಟ್ಟಿದ್ದರು. ಈ ವೇಳೆ ನಾಯಿ ಎದುರುಗಡೆ ರಸ್ತೆಯ ಚಾರ್ಲ್ಸ್ ಮನೆಯ ಮುಂದೆ ನಿಲ್ಲಿಸಿದ್ದ ಕಾರಿನ ಮೇಲೆ ಮೂತ್ರ ವಿಸರ್ಜನೆ ಮಾಡಿದೆ. ಈ ವಿಚಾರವಾಗಿ ಎರಡು ಮನೆಯವರ ಮಧ್ಯೆ ಮಾತಿನ ಚಕಮಕಿ ನಡೆದಿದೆ. ಇಷ್ಟಕ್ಕೆ ರೊಚ್ಚಿಗೆದ್ದ ಕಾರು ಮಾಲೀಕ ಚಾರ್ಲ್ಸ್ ಎರಡನೇ ಮಹಡಿಯಿಂದ ಕಲ್ಲು ತೆಗೆದು ವೃದ್ಧ ಗೇರಿ ರೋಜಾರಿಯೋ ಮುಖಕ್ಕೆ ಹೊಡೆದಿದ್ದಾನೆ.
ಹಲ್ಲೆಗೊಳಗಾದ ಗೇರಿ ರೋಜಾರಿಯೊ ಗಂಭೀರ ಗಾಯಗೊಂಡ ಗೇರಿ ರೋಜಾರಿಯೋ ಸ್ಥಳದಲ್ಲಿಯೇ ಕುಸಿದು ಬಿದ್ದಿದ್ದಾರೆ. ಕಲ್ಲು ಬಿದ್ದ ರಭಸಕ್ಕೆ ರೋಜಾರಿಯೊ ಬಾಯಿಂದ ರಕ್ತಸಾವ್ರವಾಗಿ ಎರಡ ಹಲ್ಲುಗಳು ಉದುರಿದೆ. ಕಣ್ಣುಗಳು ಮಂಜಾಗಿ ಕಾಣುತ್ತಿವೆ. ಚಿಕಿತ್ಸೆ ಪಡೆದುಕೊಂಡ ಬಳಿಕ ಬಾಣಸವಾಡಿ ಠಾಣೆಗೆ ದೂರು ನೀಡಿದ್ದು, ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಪ್ರಕರಣ ದಾಖಲಾಗುತ್ತಿದ್ದಂತೆಯೇ ಚಾರ್ಲ್ಸ್ ತಲೆ ಮರೆಸಿಕೊಂಡಿದ್ದು, ಆತನಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ.
ಇದನ್ನೂ ಓದಿ: Funeral of Sanganabasava Swamiji : ಇಂದು ಹಾಲಕೆರೆ ಅನ್ನದಾನೇಶ್ವರ ಸ್ವಾಮೀಜಿಗಳ ಅಂತ್ಯಕ್ರಿಯೆ..