ಬೆಂಗಳೂರು: ಪ್ರಯಾಣಿಕರೊಬ್ಬರ ಮೇಲೆ ವಾಂತಿ ಮಾಡುವಂತೆ ನಟಿಸಿದ ಕಳ್ಳನೊಬ್ಬ 50 ಸಾವಿರ ರೂ. ಲಪಟಾಯಿಸಿರುವ ಪ್ರಕರಣ ಬೆಳಕಿಗೆ ಬಂದಿದೆ. ಕೆಂಗೇರಿ ನಿವಾಸಿ ಚಂದ್ರಮೋಹನ್ (50) ಹಣ ಕಳೆದುಕೊಂಡಿರುವವರು ಎನ್ನುವ ಮಾಹಿತಿ ದೊರೆತಿದೆ.
ಖಾಸಗಿ ಕಂಪನಿಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಚಂದ್ರಮೋಹನ್ ಜುಲೈ 6ರಂದು ವಸಂತನಗರದಲ್ಲಿರುವ ಕೆನರಾ ಬ್ಯಾಂಕ್‌ಗೆ ಹೋಗಲು ನಾಯಂಡಹಳ್ಳಿ ಮೆಟ್ರೋ ಸ್ಟೇಷನ್‌ಗೆ ಬಂದಿದ್ದರು.ಇವರು ಯಲಹಂಕಕ್ಕೆ ತೆರಳುವ ಬಿಎಂಟಿಸಿ ಬಸ್ ಹತ್ತಿ ಸೀಟ್‌ನಲ್ಲಿ ಕುಳಿತುಕೊಂಡಿದ್ದರು. ಆ ವೇಳೆ ಸಹ ಪ್ರಯಾಣಿಕನೊಬ್ಬ ಕುಳಿತು ವಾಂತಿ ಮಾಡುವಂತೆ ನಟಿಸಿದ್ದಾನೆ. ನಿಜವಾಗಿಯೂ ಸಮಸ್ಯೆ ಆಗಿರಬಹುದು ಎಂದುಕೊಂಡು ಚಂದ್ರಮೋಹನ್ ಸೀಟಿನಿಂದ ಎದ್ದು ನಿಂತುಕೊಂಡಿದ್ದಾರೆ.