ಬೆಂಗಳೂರು:ನಗರದಲ್ಲಿ ಲಾಕ್ಡೌನ್ ಇದ್ದರೂ ಜನರ ಓಡಾಟ ಹೆಚ್ಚಾದ ಕಾರಣ ಪೊಲೀಸರು ಅಲರ್ಟ್ ಆಗಿದ್ದಾರೆ. ಐಡಿ ಕಾರ್ಡ್, ಡಿಎಲ್ ಪರಿಶೀಲನೆ ಮಾಡಿ, ಕಟ್ಟುನಿಟ್ಟಾಗಿ ವಾಹನಗಳ ತಪಾಸಣೆ ನಡೆಸುತ್ತಿದ್ದಾರೆ. ಆ ಬಳಿಕವೇ ಟ್ರಾಫಿಕ್ ಪೊಲೀಸರು ವಾಹನಗಳನ್ನು ಮುಂದೆ ಬಿಡುತ್ತಿದ್ದಾರೆ.
ವಾಪಸ್ ಹೋಗ್ತೀನಿ ಸರ್ ದಯವಿಟ್ಟು ಕ್ಷಮಿಸಿ: ಕೈ ಮುಗಿದ ಬೇಡಿಕೊಂಡ ವಾಹನ ಸವಾರ - ವಿಡಿಯೋ ವೈರಲ್
ಟೌನ್ ಹಾಲ್ ಬಳಿ ಅನಾವಶ್ಯಕವಾಗಿ ಬಂದ ವ್ಯಕ್ತಿಯನ್ನು ಪೊಲೀಸರು ತಡೆದು ಬೈಕ್ ವಶಪಡಿಸಿಕೊಳ್ಳಲು ಮುಂದಾಗಿದ್ದರು. ಈ ವೇಳೆ, ಬೈಕ್ ಸವಾರ ಗಾಡಿ ಸೀಜ್ ಮಾಡಬೇಡಿ ಎಂದು ಪೊಲೀಸರನ್ನು ಕೈ ಮುಗಿದು ಬೇಡಿ ಕೊಂಡಿದ್ದಾನೆ. ಈ ವಿಡಿಯೋ ಈಗ ವೈರಲ್ ಆಗಿದೆ.
ಬೆಂಗಳೂರು ಲಾಕ್ಡೌನ್
ಟೌನ್ ಹಾಲ್ ಬಳಿ ಅನಾವಶ್ಯಕವಾಗಿ ಬೈಕ್ನಲ್ಲಿ ಬಂದ ವ್ಯಕ್ತಿಯೊಬ್ಬನನ್ನು ಪೊಲೀಸರು ತಡೆದಿದ್ದಾರೆ. ಆತನ ಬಳಿ ಐಡಿ ಕಾರ್ಡ್, ಡಿಎಲ್ ಇಲ್ಲದ ಕಾರಣ ಗಾಡಿ ಸೀಜ್ ಮಾಡಲು ಮುಂದಾಗಿದ್ದಾರೆ. ಈ ವೇಳೆ, ಬೈಕ್ ಸವಾರನು ಸರ್ ವಾಪಸ್ ಹೋಗಿ ಬಿಡ್ತೀನಿ. ದಯವಿಟ್ಟು ಕ್ಷಮಿಸಿ. ಇನ್ನು ಮುಂದೆ ಹೊರಗೆ ಬರಲ್ಲ, ಇಲ್ಲೇ ಮನೆ ಇದೆ. ಗಾಡಿ ಸೀಜ್ ಮಾಡಬೇಡಿ ಎಂದು ಕೈ ಮುಗಿದು ಬೇಡಿ ಕೊಂಡಿದ್ದಾನೆ.
ಪೊಲೀಸರು ಆವಾಜ್ ಹಾಕಿ ಅನಾವಶ್ಯಕವಾಗಿ ಓಡಾಟ ಮಾಡಬೇಡಿ ಎಂದು ವಾಪಸ್ ಕಳುಹಿಸಿದ್ದಾರೆ. ಸದ್ಯ ಈ ದೃಶ್ಯದ ವಿಡಿಯೋ ವೈರಲ್ ಆಗ್ತಿದೆ.