ಕರ್ನಾಟಕ

karnataka

ETV Bharat / city

ಪುನೀತ್ ಬ್ಯಾನರ್ ಪಿ.ಆರ್.ಕೆಯ ಮ್ಯಾನ್ ಆಫ್ ದಿ ಮ್ಯಾಚ್ ಚಿತ್ರದ ಟ್ರೈಲರ್ ಬಿಡುಗಡೆ - Man of the match Movie

ಸಿನಿಮಾದ ಕಥೆಯನ್ನು ಪುನೀತ್​ ರಾಜ್​ಕುಮಾರ್​ ಅವರ ಜೊತೆ ಹಂಚಿಕೊಂಡಾಗ, ಇದೊಂದು ಒಳ್ಳೆಯ ಯಡಿಯಾ ಎಂದು ಮೆಚ್ಚಿದ್ದರು. ಹೊಸ ತಲೆಮಾರಿನ ಸಿನಿಮಾ ನಿರ್ಮಾಣ ಮಾಡಬೇಕು ಎಂದು ಹೇಳಿದ್ದರು ಎಂದು ನಿರ್ದೇಶಕ ಡಿ.ಸತ್ಯ ಪ್ರಕಾಶ್​ ಸ್ಮರಿಸಿದ್ದಾರೆ.

Ashvini and Puneeth Rajkumar
ಅಶ್ವಿನಿ ಹಾಗೂ ಪುನೀತ್​ ರಾಜ್​ಕುಮಾರ್​

By

Published : May 2, 2022, 5:09 PM IST

ದಿವಂಗತ ಪುನೀತ್‌ ರಾಜ್‌ಕುಮಾರ್‌ ಅವರ ಪಿಆರ್‌ಕೆ ಪ್ರೊಡಕ್ಷನ್ಸ್‌ ನಿರ್ಮಾಣದ ಹಾಗು ರಾಷ್ಟ್ರೀಯ ಪ್ರಶಸ್ತಿ ಪುರಸ್ಕೃತ ನಿರ್ದೇಶಕ ಡಿ.ಸತ್ಯ ಪ್ರಕಾಶ್‌ ನಿರ್ದೇಶಕನದ, ಕನ್ನಡದ ವಿಡಂಬನೆ ಲಘುಹಾಸ್ಯದ ಮ್ಯಾನ್‌ ಆಫ್ ದಿ ಮ್ಯಾಚ್ ಟ್ರೇಲರ್ ಅಮೆಜಾನ್ ಪ್ರೈಮ್‌ನಲ್ಲಿ ಬಿಡುಗಡೆ ಆಗಿದೆ. ನಟರಾಜ್‌ ಎಸ್‌. ಭಟ್‌, ಧರ್ಮಣ್ಣ ಕಡೂರು, ವೀಣಾ ಸುಂದರ್‌, ಅಥರ್ವ ಪ್ರಕಾಶ್ ಮತ್ತು ವಾಸುಕಿ ವೈಭವ್‌ ಮುಖ್ಯ ಪಾತ್ರದಲ್ಲಿ ನಟಿಸಿರುವ ಸಿನಿಮಾ, ಕಾಮಿಡಿ ಜೊತೆಗೆ ಥ್ರಿಲ್ಲಿಂಗ್ ಆಗಿದೆ.

ಅತ್ಯಂತ ಕುತೂಹಲಕರ ಕನ್ನಡ ಕಾಮಿಡಿ ಹಾಗು ವಿಡಂಬನೆ ಮ್ಯಾನ್‌ ಆಫ್‌ ದಿ ಮ್ಯಾಚ್‌ ಸಿನಿಮಾದಲ್ಲಿ, ನಟರಾಜ್‌ ಎಸ್‌.ಭಟ್‌, ಧರ್ಮಣ್ಣ ಕಡೂರು, ವೀಣಾ ಸುಂದರ್‌, ಅಥರ್ವ ಪ್ರಕಾಶ್ ಮತ್ತು ವಾಸುಕಿ ವೈಭವ್‌ ಅಭಿನಯಿಸಿದ್ದಾರೆ. ಈ ಸಿನಿಮಾ ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗಿದೆ. ಅಮೆಜಾನ್ ಪ್ರೈಮ್​ನಲ್ಲಿ, ಭಾರತ ಮತ್ತು 240 ದೇಶಗಳಲ್ಲಿ ಮೇ 5 ರಿಂದ ಬಿಡುಗಡೆಯಾಗಲಿದೆ.

ಇದು ನಟರಾಜ್ ಎಸ್‌. ಭಟ್‌ ಸಿನಿಮಾದಲ್ಲಿ ನಿರ್ದೇಶಕನ ಪಾತ್ರದ ಪಯಣವನ್ನು ಅನಾವರಣಗೊಳಿಸುತ್ತದೆ. ತನ್ನ ಮುಂಬರುವ ಮ್ಯಾನ್ ಆಫ್ ದಿ ಮ್ಯಾಚ್‌ ಎಂಬ ಸಿನಿಮಾಗೆ ಇವರು ಆಡಿಶನ್‌ ನಡೆಸುತ್ತಿರುತ್ತಾರೆ. ಜನರು ಪ್ರಾಜೆಕ್ಟ್‌ನ ಭಾಗವಾಗಲು ಒಪ್ಪಿದಾಗ, ನಟಿಸಲು ವಿಭಿನ್ನ ಸನ್ನಿವೇಶಗಳನ್ನು ನೀಡುತ್ತಾರೆ. ಆಗ, ಅವರ ಮಧ್ಯೆ ಸಂಘರ್ಷ ಶುರುವಾಗುತ್ತದೆ. ಕುತೂಹಲವನ್ನು ಹೆಚ್ಚಿಸುವ ಟ್ರೇಲರ್‌, ಈ ವಿಶಿಷ್ಟ ಸಿನಿಮಾವನ್ನು ಹೇಗೆ ರೂಪಿಸಲಾಗಿದೆ ಮತ್ತು ಮೇಕಿಂಗ್ ಸಮಯದಲ್ಲಿ ನಿರ್ದೇಶಕರು ಎದುರಿಸಿದ ಸಮಸ್ಯೆಗಳ ಬಗ್ಗೆ ವಿಭಿನ್ನ ದೃಷ್ಟಿಕೋನವನ್ನು ನೀಡುತ್ತದೆ.

ಮ್ಯಾನ್‌ ಆಫ್‌ ದಿ ಮ್ಯಾಚ್ ಎಂಬುದು ನನ್ನ ಹೃದಯಕ್ಕೆ ಹತ್ತಿರವಾದ ಸಿನಿಮಾ ಮತ್ತು ಅದು ಎಂದಿಗೂ ನನ್ನ ಹೃದಯಕ್ಕೆ ಸೀಮಿತವಾಗಿಯೇ ಇರುತ್ತದೆ. ನಾನು ಒಂದು ದಿನ ಪುನೀತ್‌ ಸರ್ ಜೊತೆಗೆ ಮಾತನಾಡುತ್ತಿದ್ದೆ. ಮೊದಲ ಲಾಕ್‌ಡೌನ್‌ನ ವೇಳೆ ಒಂದು ದಿನ, ಮ್ಯಾನ್ ಆಫ್ ದಿ ಮ್ಯಾಚ್‌ ಕಥೆಯನ್ನು ನಾನು ಹಂಚಿಕೊಂಡೆ. ಅವರಿಗೆ ತಕ್ಷಣ ಇಷ್ಟವಾಯಿತು. ಇದು ಒಂದು ಉತ್ತಮ ಐಡಿಯಾ ಎಂದು ಅವರು ಹೇಳಿದ್ದರು. ಅದೇ ಸಮಯದಲ್ಲಿ, ಇದನ್ನು ಜಾರಿಗೆ ತರುವುದು ಕಷ್ಟ. ಆದರೆ ಇಂಥ ಹೊಸ ಹೆಜ್ಜೆಗಳನ್ನು ನಾವು ಇಡಬೇಕು ಮತ್ತು ಹೊಸ ತಲೆಮಾರಿನ ಸಿನಿಮಾ ನಿರ್ಮಾಣ ಮಾಡಬೇಕು ಎಂದು ಅವರು ಇದನ್ನು ಬೆಂಬಲಿಸಲು ಒಪ್ಪಿದರು ಎಂದು ನಿರ್ದೇಶಕ ಡಿ.ಸತ್ಯ ಪ್ರಕಾಶ್ ಸ್ಮರಿಸಿದರು.

ಇದರಲ್ಲಿ ಅದ್ಭುತ ಪಂಚಿಂಗ್​ ಡೈಲಾಗ್‌ಗಳಿವೆ. ಆಕರ್ಷಕ ಕಥೆ ಮತ್ತು ಹಾಸ್ಯ ಇದೆ. ಅಲ್ಲದೆ, ಚಿಂತನೆಗೆ ವಿಷಯವೂ ಇದೆ. ಪಿಆರ್‌ಕೆ ಪ್ರೊಡಕ್ಷನ್ಸ್‌ ಕಾರಣದಿಂದ ನಾನು ಈ ಸಿನಿಮಾದ ಭಾಗವಾಗಿದ್ದೇನೆ. ಇದು ವಿಶಿಷ್ಟ ಪರಿಕಲ್ಪನೆಯನ್ನು ಹೊಂದಿದೆ. ಅಲ್ಲದೆ, ಆಕರ್ಷಕ ನಟರ ವರ್ಗ ಮತ್ತು ಪ್ರಶಸ್ತಿ ವಿಜೇತ ನಿರ್ದೇಶಕ ಡಿ. ಸತ್ಯ ಪ್ರಕಾಶ್ ಇದರಲ್ಲಿದ್ದಾರೆ ಎಂಬ ಕಾರಣಕ್ಕೆ ಇದು ನನಗೆ ಕುತೂಹಲ ಮೂಡಿಸಿತು.

ಈ ಸಿನಿಮಾ ಶೂಟಿಂಗ್‌ ಮಾಡುವ ಸಮಯದ ಅನುಭವ ವಿಶಿಷ್ಟವಾಗಿತ್ತು. ನನ್ನ ಪಾತ್ರ ಮತ್ತು ಕಥೆಗೆ ನಾನು ಬೇಗ ಹೊಂದಿಕೊಂಡೆ. ಪರ್ಫಾರ್ಮೆನ್ಸ್‌ ಮತ್ತು ಹೊಸ ದೃಶ್ಯದ ವಿಧಾನ ನನಗೆ ಸವಾಲಿನದಾಗಿತ್ತು. ಮ್ಯಾನ್ ಆಫ್‌ ದಿ ಮ್ಯಾಚ್‌ ತಯಾರಿಸುವ ಸಮಯದಲ್ಲಿ ನಾವು ಅನುಭವಿಸಿದ ಖುಷಿ ಪ್ರೇಕ್ಷಕರಿಗೂ ಅನುಭವಕ್ಕೆ ಬರುತ್ತದೆ ಮತ್ತು ಅವರು ಇದನ್ನು ಇಷ್ಟಪಡುತ್ತಾರೆ ಎಂದು ನಾನು ಭಾವಿಸುತ್ತೇನೆ ಎಂದು ಚಿತ್ರದ ಮುಖ್ಯ ಪಾತ್ರದಲ್ಲಿ ನಟಿಸಿದ ನಟರಾಜ್‌ ಎಸ್‌. ಭಟ್‌ ಹೇಳಿದ್ದಾರೆ. ಪುನೀತ್ ರಾಜ್‍ಕುಮಾರ್ ಪಿ.ಆರ್.ಕೆ ಬ್ಯಾನರ್​ನಲ್ಲಿ ಅಶ್ವಿನಿ ಪುನೀತ್ ರಾಜ್‍ಕುಮಾರ್ ಸಿನಿಮಾ ನಿರ್ಮಾಣ ಮಾಡಿದ್ದಾರೆ‌.

ಇದನ್ನೂ ಓದಿ:ಕೆಜಿಎಫ್​​ 2 ಅಬ್ಬರದ ನಡುವೆ ಮಕಾಡೆ ಮಲಗಿದ ಹಿಂದಿಯ ರನ್​ವೇ 34, ಹೀರೋಪಂತಿ 2!

ABOUT THE AUTHOR

...view details