ಕರ್ನಾಟಕ

karnataka

ETV Bharat / city

ಚಾಕುವಿನಿಂದ ಇರಿದು ವ್ಯಕ್ತಿಯ ಬರ್ಬರ ಕೊಲೆ: ಪತ್ನಿ, ಮಕ್ಕಳು ಮನೆಯಲ್ಲಿರುವಾಗಲೇ ಕೃತ್ಯ! - Bengaluru latest crime news

ಯಶವಂತಪುರದ ಎಂ.ಕೆ ನಗರದಲ್ಲಿ ಅಕೌಂಟೆಂಟ್ ಒಬ್ಬರನ್ನು ದುಷ್ಕರ್ಮಿಗಳು ಚಾಕುವಿನಿಂದ ಇರಿದು ಬರ್ಬರವಾಗಿ ಕೊಲೆ ಮಾಡಿದ್ದಾರೆ.

Man murdered in Bengaluru
ಶಂಕರ್ ರೆಡ್ಡಿ ಕೊಲೆಯಾದವರು

By

Published : Apr 30, 2022, 7:22 AM IST

ಬೆಂಗಳೂರು: ಖಾಸಗಿ ಸಂಸ್ಥೆಯಲ್ಲಿ ಕೆಲಸ ನಿರ್ವಹಿಸುತ್ತಿದ್ದ ಅಕೌಂಟೆಂಟ್ ಒಬ್ಬರನ್ನು ದುಷ್ಕರ್ಮಿಗಳು ಚಾಕುವಿನಿಂದ ಇರಿದು ಬರ್ಬರವಾಗಿ ಕೊಲೆ ಮಾಡಿರುವ ಘಟನೆ ಯಶವಂತಪುರದ ಎಂ.ಕೆ ನಗರದಲ್ಲಿ ನಿನ್ನೆ(ಶುಕ್ರವಾರ) ಮಧ್ಯ ರಾತ್ರಿ ನಡೆದಿದೆ. ಶಂಕರ್ ರೆಡ್ಡಿ (35) ಕೊಲೆಯಾದವರು.

ಪತ್ನಿ, ಮಕ್ಕಳು ಮನೆಯಲ್ಲಿರುವಾಗಲೇ ಪತಿಯ ಬರ್ಬರ ಹತ್ಯೆ..

ಈತ ಎಂ.ಕೆ ನಗರದ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ. ನಿನ್ನೆ(ಶುಕ್ರವಾರ) ಕೆಲಸ ಮುಗಿಸಿಕೊಂಡು ಮನೆಗೆ ಬಂದಿದ್ದವನನ್ನು ತಡರಾತ್ರಿ ಚಾಕುವಿನಿಂದ ಇರಿದು ಕೊಲೆ ಮಾಡಲಾಗಿದೆ ಎಂದು ಉತ್ತರ ವಿಭಾಗದ ಡಿಸಿಪಿ ವಿನಾಯಕ ಪಾಟೀಲ್ ತಿಳಿಸಿದ್ದಾರೆ. ಮನೆಯಲ್ಲಿ ಪತ್ನಿ ಹಾಗೂ 5 ವರ್ಷದ ಇಬ್ಬರು ಮಕ್ಕಳಿದ್ದಾಗಲೇ ಈತನ ಕೊಲೆಯಾಗಿರುವುದು ಹಲವು ಅನುಮಾನಕ್ಕೆ ಎಡೆ ಮಾಡಿ ಕೊಟ್ಟಿದೆ.

ಅಕ್ಕ ಪಕ್ಕದ ಮನೆಯವರಿಂದ ಕೊಲೆ ಕೃತ್ಯ ಬೆಳಕಿಗೆ: ಅಕ್ಕಪಕ್ಕದ ಮನೆಯವರಿಂದ ಕೊಲೆ ಕೃತ್ಯ ಬೆಳಕಿಗೆ ಬಂದಿದೆ. ಮಾಹಿತಿ ತಿಳಿದು ಸ್ಥಳಕ್ಕೆ ತೆರಳಿದ ಯಶವಂತಪುರ ಪೊಲೀಸ್ ಠಾಣೆಯ ಸಿಬ್ಬಂದಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಕೊಂಡಿದ್ದಾರೆ. ಈ ಬಗ್ಗೆ ಹೆಚ್ಚಿನ ತನಿಖೆ ಕೈಗೊಂಡಿದ್ದಾರೆ ಎಂದು ಡಿಸಿಪಿ ವಿನಾಯಕ ಪಾಟೀಲ್ ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ:ತೆಲಂಗಾಣ: ಎರಡಂತಸ್ತಿನ ಕಟ್ಟಡ ಕುಸಿದು ನಾಲ್ವರು ದುರ್ಮರಣ

ABOUT THE AUTHOR

...view details