ಬೆಂಗಳೂರು: ಇಂದು ಮುಂಜಾನೆ ಕಾಮಾಕ್ಷಿಪಾಳ್ಯದಲ್ಲಿ ಸಿಮೆಂಟ್ ಕಲ್ಲನ್ನು ತಲೆ ಮೇಲೆ ಎತ್ತಿ ಹಾಕಿ ಕೊಲೆ ಮಾಡಿರುವ ಸ್ಥಿತಿಯಲ್ಲಿ ವ್ಯಕ್ತಿಯೋರ್ವರ ಶವ ಪತ್ತೆಯಾಗಿದೆ. ಮೃತಪಟ್ಟವರನ್ನು ಸತೀಶ್(40) ಎಂದು ಗುರುತಿಸಲಾಗಿದೆ.
ಕಾಮಾಕ್ಷಿಪಾಳ್ಯ ಶ್ರೀನಿವಾಸ ಬಾರ್ ಪಕ್ಕದಲ್ಲಿ ವ್ಯಕ್ತಿಯ ಶವ ದೊರೆತಿದ್ದು, ಪೊಲೀಸರು ಪರಿಶೀಲಿಸಿದ್ದಾರೆ. ಮೃತನ ಜೇಬಿನಲ್ಲಿ ಆಧಾರ್ ಕಾರ್ಡ್ ಸಿಕ್ಕಿದೆ.
ಬೆಂಗಳೂರಿನಲ್ಲಿ ವ್ಯಕ್ತಿಯ ಕೊಲೆ ಆಧಾರ್ ಕಾರ್ಡ್ ಸಹಾಯದಿಂದ ಮೃತಪಟ್ಟವರನ್ನು ಕಾಮಾಕ್ಷಿಪಾಳ್ಯದ ಸತೀಶ್ ಎಂದು ಗುರುತಿಸಲಾಗಿದೆ. ಆದ್ರೆ, ಆಧಾರ್ ಕಾರ್ಡ್‌ನಲ್ಲಿರುವ ವಿಳಾಸಕ್ಕೆ ಹೋಗಿ ನೋಡಿದಾಗ ಮೃತ ವ್ಯಕ್ತಿ ಅಲ್ಲಿ ವಾಸವಾಗಿರಲಿಲ್ಲ ಎಂದು ಗೊತ್ತಾಗಿದೆ.
ಇದನ್ನೂ ಓದಿ:ಸಂಕೇಶ್ವರದಲ್ಲಿ ಒಂದೇ ಬೈಕ್ ಮೇಲೆ ನಾಲ್ವರ ಸವಾರಿ: ನಿಯಂತ್ರಣ ತಪ್ಪಿ ಬಿದ್ದು ನಾಲ್ವರೂ ಸಾವು
ಸದ್ಯ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ ಎಂದು ಪಶ್ಚಿಮ ವಿಭಾಗದ ಡಿಸಿಪಿ ಸಂಜೀವ ಪಾಟೀಲ್ ತಿಳಿಸಿದ್ದಾರೆ.