ಕರ್ನಾಟಕ

karnataka

ETV Bharat / city

ಮೈಸೂರು ಮಹಾರಾಣಿ ಕಾಲೇಜಿನಲ್ಲಿ ಕ್ಲರ್ಕ್ ಕೆಲಸದ ಫೇಕ್ ಆಫರ್ ಲೆಟರ್ ನೀಡಿ ವಂಚಿಸಿದವ ಅರೆಸ್ಟ್! - fake job offer letter

ಕೆಲಸ ಕೊಡಿಸಲು ಆರು ಲಕ್ಷ ರೂ. ಹಣ ಬೇಕು ಎಂದು ಯುವತಿಗೆ ಹೇಳಿ ಬಳಿಕ ಬೇರೊಂದು ಡಿಟಿಪಿ ಸೆಂಟರ್​ನಲ್ಲಿ ಸರ್ಕಾರದ ಲೆಟರ್ ಬಳಸಿ ಯುವತಿಗೆ ಮಹಾರಾಣಿ ಕಾಲೇಜಿನಲ್ಲಿ ಎಫ್‌ಡಿಎ ಎಂದು ನಮೂದಿಸಿರುವ ಆಫರ್ ಲೆಟರ್ ಕೊಟ್ಟಿದ್ದ. ಆಫರ್ ಲೆಟರ್ ಸಹಿತ ಎಂ.ಎಸ್ ಬಿಲ್ಡಿಂಗ್​ನ ಶಿಕ್ಷಣ ಇಲಾಖೆಗೆ ದಾಖಲೆ ಪರಿಶೀಲನೆಗೆ ಯುವತಿ ತೆರಳಿದಾಗ ಸತ್ಯ ಬಯಲಿಗೆ ಬಂದಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ..

man Arrest who gave fake job offer offer letter
ಫೇಕ್ ಆಫರ್ ಲೆಟರ್ ನೀಡಿ ವಂಚಿಸಿದವ ಅರೆಸ್ಟ್

By

Published : Oct 15, 2021, 3:43 PM IST

ಬೆಂಗಳೂರು: ಮೈಸೂರಿನ ಮಹಾರಾಣಿ ಕಾಲೇಜಿನಲ್ಲಿ ಕೆಲಸ ಕೊಡಿಸುತ್ತೇನೆ ಎಂದು ವಂಚಿಸಿದ್ದ ಪ್ರಾಧ್ಯಾಪಕನೊಬ್ಬರನ್ನು ನಗರದ ವಿಧಾನಸೌಧ ಠಾಣೆಯ ಪೊಲೀಸರು ಬಂಧಿಸಿದ್ದಾರೆ. ಸುರೇಶ್ ಅಲಿಯಾಸ್ ನಾಗರಾಜ್ ಬಂಧಿತ ಆರೋಪಿ.

ಮೈಸೂರಿನ ಖಾಸಗಿ ಕಾಲೇಜೊಂದರಲ್ಲಿ ಲೆಕ್ಚರರ್ ಆಗಿದ್ದ ಸುರೇಶ್ ಮೈಸೂರಿನ ಡಿಟಿಪಿ ಸೆಂಟರ್ ಒಂದರಲ್ಲಿ ಟೈಪಿಸ್ಟ್ ಕೆಲಸ ಮಾಡುತ್ತಿದ್ದ ಯುವತಿಗೆ ಶಿಕ್ಷಣ ಇಲಾಖೆಯಲ್ಲಿ ಪ್ರಥಮ ದರ್ಜೆ ಸಹಾಯಕಿ ಕೆಲಸ ಕೊಡಿಸುತ್ತೇನೆಂದು ಹೇಳಿ ವಂಚಿಸಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಕ್ಲರ್ಕ್ ಕೆಲಸದ ಫೇಕ್ ಆಫರ್ ಲೆಟರ್

ಡಿಟಿಪಿ ಸೆಂಟರ್​ಗೆ ಲೆಟರ್ ಒಂದನ್ನು ಟೈಪ್ ಮಾಡಿಸಲು ತೆರಳಿದ್ದ ಆರೋಪಿ ಸುರೇಶ್​​ಗೆ, ತನಗೆ ಎಲ್ಲಾದರೂ ಒಂದು ಒಳ್ಳೆಯ ಕೆಲಸ ಇದ್ದರೆ ಹೇಳಿ ಸರ್ ಎಂದು ಯುವತಿ ಮನವಿ ಮಾಡಿದ್ದಳು. ಬಳಿಕ ಎಲ್ಲಾದರೂ ಯಾಕೆ ಸರ್ಕಾರಿ ಕೆಲಸ ಕೊಡಿಸೋಣ ಎಂದು ಸುರೇಶ್ ಹೇಳಿದ್ದ. ನಂತರ ಮೈಸೂರಿನ ಮಹಾರಾಣಿ ಕಾಲೇಜಿನಲ್ಲಿ ಪ್ರಥಮ ದರ್ಜೆ ಸಹಾಯಕಿ ಕೆಲಸ ಇದೆ ಎಂದು ಸುಳ್ಳು ಹೇಳಿದ್ದ.

ಕೆಲಸ ಕೊಡಿಸಲು ಆರು ಲಕ್ಷ ರೂ. ಹಣ ಬೇಕು ಎಂದು ಯುವತಿಗೆ ಹೇಳಿ ಬಳಿಕ ಬೇರೊಂದು ಡಿಟಿಪಿ ಸೆಂಟರ್​ನಲ್ಲಿ ಸರ್ಕಾರದ ಲೆಟರ್ ಬಳಸಿ ಯುವತಿಗೆ ಮಹಾರಾಣಿ ಕಾಲೇಜಿನಲ್ಲಿ ಎಫ್‌ಡಿಎ ಎಂದು ನಮೂದಿಸಿರುವ ಆಫರ್ ಲೆಟರ್ ಕೊಟ್ಟಿದ್ದ. ಆಫರ್ ಲೆಟರ್ ಸಹಿತ ಎಂ.ಎಸ್ ಬಿಲ್ಡಿಂಗ್​ನ ಶಿಕ್ಷಣ ಇಲಾಖೆಗೆ ದಾಖಲೆ ಪರಿಶೀಲನೆಗೆ ಯುವತಿ ತೆರಳಿದಾಗ ಸತ್ಯ ಬಯಲಿಗೆ ಬಂದಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ:ರಾಜಕೀಯವಾಗಿ ಆತನಿಗೆ ಜಾಗ ಇಲ್ಲ.. ಹೀಗಾಗಿ ಮಾತನಾಡ್ತಿದಾನೆ.. ಸೊಗಡು ಶಿವಣ್ಣ ವಿರುದ್ಧ ಡಿಕೆಶಿ ವಾಗ್ದಾಳಿ

ನಂತರ ಶಿಕ್ಷಣ ಇಲಾಖೆಯಿಂದಲೇ ಪೊಲೀಸ್ ಠಾಣೆಗೆ ದೂರು ನೀಡಲಾಗಿದ್ದರಿಂದ ಸದ್ಯ ವಿಧಾನಸೌಧ ಪೊಲೀರು ಆರೋಪಿಯನ್ನು ಬಂಧಿಸಿದ್ದಾರೆ.

ABOUT THE AUTHOR

...view details