ಕರ್ನಾಟಕ

karnataka

ETV Bharat / city

ಮನೆ ಬಿಟ್ಟು ಬಂದಿದ್ದ ಯುವತಿ ಮೇಲೆ ಅತ್ಯಾಚಾರವೆಸಗಿ ಮಾರಾಟ ಮಾಡಲೆತ್ನಿಸಿದ ಆರೋಪಿ ಅರೆಸ್ಟ್!

ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಏರ್‌ಪೋರ್ಟ್‌ ಭದ್ರತಾ ಪಡೆ ಸಿಐಎಸ್ಎಫ್‌ ಸಿಬ್ಬಂದಿ ಯುವತಿಯ ರಕ್ಷಣೆ ಮಾಡಿದ್ದಾರೆ. ಆರೋಪಿ ನಾಗೇಶ್ ಯುವತಿಯನ್ನು ದೆಹಲಿಗೆ ಕರೆದೊಯ್ಯಲು ಯತ್ನಿಸಿದ್ದ ವೇಳೆ ಅನುಮಾನಗೊಂಡು ಸಿಐಎಸ್ಎಫ್‌ ಸಿಬ್ಬಂದಿ ವಿಚಾರಣೆ ನಡೆಸಿದ್ದಾರೆ..

ಯುವತಿ ಮೇಲೆ ಅತ್ಯಾಚಾರವೆಸಗಿ ಮಾರಾಟ ಮಾಡಲು ದೆಹಲಿಗೆ ಹೋಗುತ್ತಿದ್ದ ಆರೋಪಿ ಅರೆಸ್ಟ್
man arrested for raping a woman and trying to sale her in bangalore

By

Published : Feb 11, 2022, 2:52 PM IST

ದೇವನಹಳ್ಳಿ(ಬೆಂಗಳೂರು ಗ್ರಾಮಾಂತರ) :ಮನೆ ಬಿಟ್ಟು ಬಂದಿದ್ದ ಯುವತಿಯನ್ನು ಮಾರಾಟ ಮಾಡಲು ವ್ಯಕ್ತಿಯೋರ್ವ ಯತ್ನಿಸಿದ್ದು, ಆರೋಪಿ ಸಿಕ್ಕಿಬಿದ್ದಿದ್ದಾನೆ. ನಾಗೇಶ್ ಬಂಧಿತ ಆರೋಪಿ.

ಮನೆಯಲ್ಲಿ ಜಗಳ ಮಾಡಿಕೊಂಡು ಮನೆ ಬಿಟ್ಟು ಕೋಲಾರದಿಂದ ಬೆಂಗಳೂರಿಗೆ ಬಂದಿದ್ದ ಯುವತಿಗೆ ಸಹಾಯ ಮಾಡುವುದಾಗಿ ಹೇಳಿ ಆಕೆಯನ್ನು ಮಾರಾಟ ಮಾಡಲು ಯತ್ನಿಸಿದ್ದ ಆರೋಪಿಯನ್ನು ಬಂಧಿಸಲಾಗಿದೆ. ಯುವತಿಯನ್ನು ಏರ್‌ಪೋರ್ಟ್‌ ಭದ್ರತಾ ಪಡೆ ಸಿಐಎಸ್ಎಫ್‌ ಸಿಬ್ಬಂದಿ ರಕ್ಷಣೆ ಮಾಡಿದ್ದಾರೆ.

ಆರೋಪಿ ನಾಗೇಶ್​ನನ್ನು ವಿಚಾರಣೆಗೊಳಪಡಿಸಿದಾಗ ಆಕೆಯನ್ನು ಮಾರಾಟ ಮಾಡಲು ದೆಹಲಿಗೆ ಕರೆದುಕೊಂಡು ಹೋಗುತ್ತಿರೋದಾಗಿ ಬಾಯಿ ಬಿಟ್ಟಿದ್ದಾನೆ. ಕೆಲ ವಿಚಾರಕ್ಕೆ ಮನೆಯಲ್ಲಿ ಜಗಳ ಮಾಡಿಕೊಂಡು ಮನೆ ಬಿಟ್ಟು ಯುವತಿ ಕೋಲಾರದಿಂದ ಬೆಂಗಳೂರಿಗೆ ಬಂದಿದ್ದಳು.

ಕೆಲಸವನ್ನರಸಿಕೊಂಡು ಬಂದು ಮೆಜೆಸ್ಟಿಕ್​ನಲ್ಲಿ ಕೂತಿದ್ದಳು. ಈ ವೇಳೆ ಟ್ರಾವೆಲ್ ಏಜೆನ್ಸಿಯಲ್ಲಿ ಕೆಲಸ ಮಾಡ್ತಿದ್ದ ನಾಗೇಶ್ ಯುವತಿಯ ಬಳಿ ಬಂದು ಆಕೆಯನ್ನು ವಿಚಾರಿಸಿದ್ದಾನೆ. ಆಗ ಆಕೆ ಎಲ್ಲಾ ವಿಷಯವನ್ನು ಹಂಚಿಕೊಂಡಿದ್ದಾಳೆ.

ಬಳಿಕ ಕೆಲಸ ಕೊಡಿಸುವುದಾಗಿ ನಂಬಿಸಿ ದೇವನಹಳ್ಳಿಗೆ ಕರೆದುಕೊಂಡು ಬಂದು ಯುವತಿ ಮೇಲೆ ಅತ್ಯಾಚಾರವೆಸಗಿ ನಂತರ ವೇಶ್ಯಾವಾಟಿಕೆ ಅಡ್ಡೆಗೆ ಮಾರಾಟ ಮಾಡಲು ದೆಹಲಿಗೆ ಕರೆದುಕೊಂಡು ಹೋಗುವಾಗ ಏರ್‌ಪೋರ್ಟ್‌​​​ನಲ್ಲಿ ಸಿಕ್ಕಿ ಬಿದ್ದಿದ್ದಾನೆ. ಆರೋಪಿ ನಾಗೇಶ್ ಮೇಲೆ ಕೆಂಪೇಗೌಡ ಏರ್‌ಪೋರ್ಟ್‌ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ:ವಿಜಯಪುರ : ಕಬ್ಬಿನ ಗದ್ದೆಯಲ್ಲಿ ಅಕ್ರಮವಾಗಿ ಬಂಧಿಸಿಟ್ಟಿದ್ದ 35 ಕಾರ್ಮಿಕರ ರಕ್ಷಣೆ

ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಏರ್‌ಪೋರ್ಟ್‌ ಭದ್ರತಾ ಪಡೆ ಸಿಐಎಸ್ಎಫ್‌ ಸಿಬ್ಬಂದಿ ಯುವತಿಯ ರಕ್ಷಣೆ ಮಾಡಿದ್ದಾರೆ. ಆರೋಪಿ ನಾಗೇಶ್ ಯುವತಿಯನ್ನು ದೆಹಲಿಗೆ ಕರೆದೊಯ್ಯಲು ಯತ್ನಿಸಿದ್ದ ವೇಳೆ ಅನುಮಾನಗೊಂಡು ಸಿಐಎಸ್ಎಫ್‌ ಸಿಬ್ಬಂದಿ ವಿಚಾರಣೆ ನಡೆಸಿದ್ದಾರೆ.

ವಿಚಾರಣೆ ವೇಳೆ ಅಸಲಿ ವಿಷಯ ಬೆಳಕಿಗೆ ಬಂದಿದೆ. 10 ಸಾವಿರ ರೂಪಾಯಿಗೆ ಮಾರಾಟ ಮಾಡಲು ಯುವತಿಯನ್ನು ದೆಹಲಿಗೆ ಕರೆದೊಯ್ಯುತ್ತಿರೋದಾಗಿ ಬಾಯಿ ಬಿಟ್ಟಿದ್ದಾನೆ. ಆರೋಪಿ ನಾಗೇಶ್ ಈ ಹಿಂದೆಯೂ ಇದೇ ರೀತಿ ಕೆಲ ಯುವತಿಯರನ್ನು ನಂಬಿಸಿ ಮಾರಾಟ ಮಾಡಿದ್ದ ಎನ್ನಲಾಗಿದೆ. ಸದ್ಯ ಏರ್‌ಪೋರ್ಟ್‌ ಪೊಲೀಸರಿಂದ ಆರೋಪಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ.

ABOUT THE AUTHOR

...view details