ಬೆಂಗಳೂರು: ಕನ್ನಡ ಮ್ಯಾಟ್ರಿಮೋನಿಯಲ್ಲಿ ಪರಿಚಯವಾಗಿದ್ದ ಯುವತಿಗೆ ಮದುವೆಯಾಗುವುದಾಗಿ ಭರವಸೆ ನೀಡಿ, ಆಕೆಯೊಂದಿಗೆ ತೆಗೆಸಿಕೊಂಡಿದ್ದ ಸಲುಗೆಯ ಪೋಟೊಗಳನ್ನೇ ಇಟ್ಟುಕೊಂಡು ಬ್ಲ್ಯಾಕ್ ಮೇಲ್ ಮಾಡುತ್ತಿದ್ದ ಆರೋಪಿಯನ್ನು ನಗರ ಈಶಾನ್ಯ ವಿಭಾಗದ ಸಿಇಎನ್ ಪೊಲೀಸರು ಬಂಧಿಸಿದ್ದಾರೆ.
ರಾಜಾಜಿನಗರದ ನಿವಾಸಿ ವಿಜಯ್ ಕುಮಾರ್ ಬಂಧಿತ ಆರೋಪಿ. ಕೆಲ ತಿಂಗಳ ಹಿಂದೆ ಯುವತಿಯು ಕನ್ನಡ ಮ್ಯಾಟ್ರಿಮೋನಿ ವೆಬ್ ಸೈಟಿನಲ್ಲಿ ರಿಜಿಸ್ಟರ್ ಮಾಡಿಕೊಂಡಿದ್ದಳು. ವಂಚಿಸುವ ಉದ್ದೇಶದಿಂದ ಬಂಧಿತ ಆರೋಪಿ ಕೂಡ ನೋಂದಾಯಿಸಿದ್ದ. ಮ್ಯಾಟ್ರಿಮೋನಿ ಮೂಲಕ ಇಬ್ಬರ ಪರಿಚಯವಾಗಿದೆ. ಪರಿಚಯ ಸ್ನೇಹಕ್ಕೆ ತಿರುಗಿದೆ.
ಇದೇ ಸಲುಗೆಯಿಂದ ಇಬ್ಬರು ಆಗಾಗ ಭೇಟಿಯಾಗುತ್ತಿದ್ದರು. ಕೆಲ ದಿನಗಳ ಬಳಿಕ ಮದುವೆಯಾಗುವ ಒಪ್ಪಂದಕ್ಕೆ ಬಂದಿದ್ದರು. ಈ ವೇಳೆ, ಯುವತಿಯೊಂದಿಗೆ ತನ್ನ ಮೊಬೈಲ್ನಲ್ಲಿ ಈತ ಫೋಟೊಗಳನ್ನು ಕ್ಲಿಕ್ಕಿಸಿಕೊಂಡಿದ್ದ. ಬಳಿಕ ಇದೇ ಫೋಟೊಗಳನ್ನು ಇಟ್ಟುಕೊಂಡು ಯುವತಿಗೆ ಹಣ ನೀಡುವಂತೆ ಬ್ಲ್ಯಾಕ್ ಮೇಲ್ ಮಾಡಿದ್ದಾನೆ.