ಕರ್ನಾಟಕ

karnataka

ETV Bharat / city

ಬಿಸಿನೆಸ್ ಮಾತುಕತೆ ನಡೆಸುವ ಸೋಗಿನಲ್ಲಿ ಪರಿಚಯಸ್ಥ ಮಹಿಳೆ ಮೇಲೆ ಅತ್ಯಾಚಾರ ಎಸಗಿದ ಕಾಮುಕ - ಆತ್ಯಾಚಾರ ಪ್ರಕರಣ

ಖಾಸಗಿ ಹೊಟೇಲ್​ನಲ್ಲಿ ರೂಮ್ ಬುಕ್‌ಮಾಡಿ ಮಹಿಳೆಯನ್ನ ಬಿಸಿನೆಸ್ ಮಾತುಕತೆಗೆ ಆಹ್ವಾನಿಸಿದ್ದ ಖದೀಮನೊಬ್ಬ ಆತ್ಯಾಚಾರ ಎಸಗಿ ಬಳಿಕ ಯಾರಿಗೂ ತಿಳಿಸದಂತೆ ಜೀವ ಬೆದರಿಕೆವೊಡ್ಡಿರುವ ಘಟನೆ ಬೆಂಗಳೂರಿನ ಕಬ್ಬನ್ ಪಾರ್ಕ್ ಪೊಲೀಸ್​ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಆತ್ಯಾಚಾರ
rape

By

Published : Aug 13, 2022, 8:48 AM IST

ಬೆಂಗಳೂರು: ನೂತನವಾಗಿ ಆರಂಭವಾಗುವ ಒಟಿಟಿಗೆ ಹಣ ಹೂಡಿಕೆ ಸೋಗಿನಲ್ಲಿ ಖಾಸಗಿ ಹೋಟೆಲ್​ಗೆ ಕರೆಯಿಸಿ ಪರಿಚಯಸ್ಥ ಮಹಿಳೆ ಮೇಲೆ ಆತ್ಯಾಚಾರ ಎಸಗಿರುವ ಆರೋಪದಡಿ ಪ್ರಕರಣ ದಾಖಲಿಸಿಕೊಂಡಿರುವ ಕಬ್ಬನ್ ಪಾರ್ಕ್ ಪೊಲೀಸರು ತಂದೆ ವಯಸ್ಸಿನ ಆರೋಪಿಗಾಗಿ ಶೋಧ ನಡೆಸುತ್ತಿದ್ದಾರೆ.

ಸಂತ್ರಸ್ತೆ ನೀಡಿದ ದೂರು ಆಧರಿಸಿ ಆರೋಪಿ ವಿರುದ್ಧ ಅತ್ಯಾಚಾರ ಪ್ರಕರಣ ದಾಖಲಿಸಿಕೊಂಡು ತಮಿಳುನಾಡು ಮೂಲದ ರಮೇಶ್ (54) ಗಾಗಿ ಪೊಲೀಸರು ಬಲೆ ಬೀಸಿದ್ದಾರೆ. ಬೆಂಗಳೂರು ಮೂಲದ ಸಂತ್ರಸ್ತೆಗೆ ಆರೋಪಿ ಚಿಕ್ಕವಯಸ್ಸಿನಿಂದ ಪರಿಚಯವಿತ್ತು‌. ತಂದೆ ಸಮಾನನಾಗಿದ್ದ ಆರೋಪಿಯು ತಮಿಳುನಾಡಿನಲ್ಲಿ ನೆಲೆಸಿದ್ದ.

ಸಂತ್ರಸ್ತೆ ಕೆಲಸ ಮಾಡುತ್ತಿದ್ದ ಖಾಸಗಿ ಕಂಪನಿಯು ಒಟಿಟಿ ಆರಂಭಿಸಲು‌ ಮುಂದಾಗಿತ್ತು. ಇದಕ್ಕಾಗಿ ಹಣ ಹೂಡುವವರನ್ನು ಹುಡುಕಾಟ ನಡೆಸುತಿತ್ತು. ಮಹಿಳೆಗೆ ಸಹ ಹೂಡಿಕೆದಾರರಿದ್ದರೆ ತಿಳಿಸುವಂತೆ ಕಂಪನಿ ಸೂಚಿಸಿತ್ತು. ಈ ವೇಳೆ, ಆರೋಪಿಗೆ ಮಹಿಳೆಯು ಕಂಪನಿಯಲ್ಲಿ 3 ಕೋಟಿ ಹಣ ಹೂಡುವಂತೆ ಕೇಳಿಕೊಂಡಿದ್ದರು.

ಪ್ರಕರಣ ಕುರಿತು ಪ್ರತಿಕ್ರಿಯೆ ನೀಡಿರುವ ಕೇಂದ್ರ ವಿಭಾಗದ ಡಿಸಿಪಿ‌ ಶ್ರೀನಿವಾಸ್ ಗೌಡ

ಸಂತ್ರಸ್ತೆಯ ಪ್ರಸ್ತಾಪಕ್ಕೆ ಒಪ್ಪಿಕೊಂಡ ರಮೇಶ್, ಹಣ ಹೂಡುವುದಾಗಿ ಮುಂದೆ ಬಂದಿದ್ದ. ವ್ಯವಹಾರ ಬಗ್ಗೆ ಮಾತನಾಡಲು ಇದೇ ತಿಂಗಳು 6 ರಂದು ಬೆಂಗಳೂರಿಗೆ ಬಂದಿದ್ದ. ಖಾಸಗಿ ಹೊಟೇಲ್​ನಲ್ಲಿ ರೂಮ್ ಬುಕ್‌ಮಾಡಿ ಮಹಿಳೆಯನ್ನ ಬಿಸಿನೆಸ್ ಮಾತುಕತೆಗೆ ಆಹ್ವಾನಿಸಿದ್ದ. ಈ ವೇಳೆ, ಆರೋಪಿ ತಮ್ಮ ಮೇಲೆ ಆತ್ಯಾಚಾರ ಎಸಗಿದ್ದಾನೆ ಎಂದು ಮಹಿಳೆ ದೂರು ನೀಡಿದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ಕಬ್ಬನ್ ಪಾರ್ಕ್ ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ.

ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಕೇಂದ್ರ ವಿಭಾಗದ ಡಿಸಿಪಿ‌ ಶ್ರೀನಿವಾಸ್ ಗೌಡ, ಪರಿಚಯಸ್ಥರಾಗಿದ್ದ ವ್ಯಕ್ತಿಯೊಬ್ಬರು ಬಿಸಿನೆಸ್ ಮಾತುಕತೆಗಾಗಿ ಖಾಸಗಿ ಹೊಟೇಲ್​ಗೆ ಕರೆಯಿಸಿಕೊಂಡು ನನ್ನ ಮೇಲೆ ಆತ್ಯಾಚಾರ ಎಸಗಿದ್ದಾನೆ. ಕೃತ್ಯ ನಡೆದ ಬಳಿಕ ಯಾರಿಗೂ ತಿಳಿಸದಂತೆ ಜೀವ ಬೆದರಿಕೆವೊಡ್ಡಿದ್ದಾನೆ ಎಂದು ಮಹಿಳೆ ನೀಡಿದ ಮೇರೆಗೆ ತನಿಖೆ ಕೈಗೊಳ್ಳಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ:10ನೇ ತರಗತಿಯ ಮೂವರು ಬಾಲಕಿಯರ ಮೇಲೆ ಅತ್ಯಾಚಾರ: ಮದುವೆ ನೆಪದಲ್ಲಿ ಮಾರಾಟ ಯತ್ನ

ABOUT THE AUTHOR

...view details