ಬೆಂಗಳೂರು :ಸರ್ಕಾರ ಮೊಂಡಾಟ ಮಾಡಿದರೆ ಜನ ತಕ್ಕ ಪಾಠ ಕಲಿಸುತ್ತಾರೆ. ಮಕ್ಕಳಿಗೆ ಜ್ಞಾನ ವಿಕಾಸ, ಮನೋವೈಜ್ಞಾನಿಕ ಮನೋಭಾವ ಬೆಳೆಸಬೇಕು. ಸ್ವಾತಂತ್ರ್ಯ ಹೋರಾಟಗಾರರ ಬಗ್ಗೆ ತಿಳಿಸಬೇಕು. ಅವರ ಬಗ್ಗೆ ಸ್ಪೂರ್ತಿ ಬೆಳೆಸುವ ಕೆಲಸ ಆಗಬೇಕು. ಅದನ್ನು ಬಿಟ್ಟು ಹೆಡ್ಗೆವಾರ್ ಅವರು ಆರ್ಎಸ್ಎಸ್ನವರಿಗೆ ಮಾಡಿದ ಭಾಷಣ ಪಠ್ಯದ್ಲಲಿ ಬೇಕಾ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಅವರು, ಅಂಬೇಡ್ಕರ್ ಬಗ್ಗೆ ಸಂವಿಧಾನ ಶಿಲ್ಪಿ ಎಂದು ತೆಗೆದಿರುವ ವಿಚಾರವಾಗಿ, ನನ್ನ ಪ್ರಕಾರ ಪರಿಷ್ಕರಣೆ ಮಾಡಿರುವುದನ್ನು ಕೈಬಿಡಬೇಕು. ಹಳೆಯದ್ದನ್ನೆ ಮುಂದುವರೆಸಬೇಕು. ಹೊಸ ಕಮಿಟಿ ಮಾಡಿ ಅಗತ್ಯ ಇದ್ದರೆ ಪರಿಷ್ಕರಣೆ ಮಾಡಬೇಕು ಎಂದರು.
ಸಿದ್ದರಾಮಯ್ಯ ಬುದ್ದಿ ಭ್ರಮಣೆಗೆ ಒಳಗಾಗಿದ್ದಾರೆ ಎಂಬ ಅರುಣ್ ಸಿಂಗ್ ಹೇಳಿಕೆ ವಿಚಾರ ಮಾತನಾಡಿ, ಬಿಜೆಪಿಯವರಿಗೆ ಕೋಮುವಾದಿ ನಶೆ ತಲೆಗೆ ಹತ್ತಿದೆ. ಅದರಿಂದ ಹೊರಗೆ ಬರಬೇಕು. ಸಂವಿಧಾನ ವಿರುದ್ದವಾಗಿದ್ದವರಿಗೆ ಅಧಿಕಾರ ಕೊಟ್ಟಿದ್ದೇ ತಪ್ಪು ಎಂದ ಅವರು, ತಮ್ಮನ್ನು ಹುಚ್ಚ ಎಂಬ ಈಶ್ವರಪ್ಪ ಹೇಳಿಕೆಗೆ ಪ್ರತಿಕ್ರಿಯೆ ನೀಡಿ, ಈಶ್ವರಪ್ಪ ಯಾಕೆ ಮಂತ್ರಿ ಸ್ಥಾನ ಕಳೆದುಕೊಂಡರು? ಭ್ರಷ್ಟಾಚಾರ ಮಾಡಿ ಸ್ಥಾನ ಕಳೆದುಕೊಂಡಿದ್ದಾರೆ. ಅವರಿಂದ ನಾನು ಪಾಠ ಕಲಿಬೇಕಾ? ಎಂದರು. ಚಡ್ಡಿ ಸುಡುವ ವಿಚಾರಕ್ಕೆ ಟೀಕೆ ಕೇಳಿ ಬಂದಿದ್ದಕ್ಕೆ ಪ್ರತಿಕ್ರಿಯೆ ನೀಡಿ, ಟೀಕೆ ಮಾಡೇ ಮಾಡ್ತಾರೆ. ಅವರು ಚಡ್ಡಿ ಇನ್ನೇನು ಮಾಡ್ತಾರೆ ಎಂದರು.
ಇದನ್ನೂ ಓದಿ:ಪರಿಷ್ಕೃತ ಪಠ್ಯಕ್ರಮವನ್ನು ಕಸದ ಬುಟ್ಟಿಗೆ ಎಸೆಯಿರಿ: ಸಿದ್ದರಾಮಯ್ಯ