ಕರ್ನಾಟಕ

karnataka

ETV Bharat / city

ಸರ್ಕಾರಿ ಡಯಾಗ್ನೋಸ್ಟಿಕ್ ಸೇವೆಗಳಿಗೆ ಮೇಜರ್ ಸರ್ಜರಿ : ಕೋವಿಡ್​​​ನಿಂದ ಆಸ್ಪತ್ರೆ ಸ್ಥಿತಿಗತಿ ಬದಲು! - ಕೆ.ಸಿ.ಜನರಲ್ ಆಸ್ಪತ್ರೆ

ಖಾಸಗಿ ಲ್ಯಾಬ್​ಗಳಿಗೆ ಹೆಚ್ಚಿನ ಹಣ ತಗುಲುವ ಕಾರಣ, ಜನ ಸಾಮಾನ್ಯರು ಸರ್ಕಾರಿ ಆಸ್ಪತ್ರೆಯ ಡಯಾಗ್ನೋಸ್ಟಿಕ್ ಲ್ಯಾಬ್​ನಲ್ಲಿ ಪರೀಕ್ಷೆಗಾಗಿ ಹೆಚ್ಚು ಅವಲಂಬಿತರಾಗುತ್ತಾರೆ.‌ ಕೋವಿಡ್ ಬಂದ ಮೇಲಂತೂ ಲ್ಯಾಬ್​ಗಳ ಸಂಖ್ಯೆಯು ಹೆಚ್ಚಿದೆ..

diagnostic-services
ಡಯಾಗ್ನೋಸ್ಟಿಕ್ ಸೇವೆ

By

Published : Feb 3, 2021, 8:54 PM IST

ಬೆಂಗಳೂರು :ಕೋವಿಡ್ ಕಾರಣಕ್ಕೆ ರಾಜ್ಯದ ಸರ್ಕಾರಿ ಆಸ್ಪತ್ರೆಗಳಿಗೆ ಮೇಜರ್ ಸರ್ಜರಿಯಾಗಿದೆ. ಸರ್ಕಾರಿ ಆಸ್ಪತ್ರೆಯಲ್ಲಿ ಡಯಾಗ್ನೋಸ್ಟಿಕ್ ಸೇವೆಗಳು ಸದ್ಯ ಸುಧಾರಿಸಿವೆ. ಹೀಗಾಗಿ, ಖಾಸಗಿ ಡಯಾಗ್ನೋಸ್ಟಿಕ್ ಕೇಂದ್ರಗಳಿಗೆ ಶಿಫಾರಸು ಮಾಡುವ ಕೆಲಸ ಕೊಂಚ ಕಡಿಮೆಯಾಗಿದೆ. ಎಕ್ಸ್​​ರೇ, ಇಸಿಜಿ, ಅಲ್ಟ್ರಾಸೌಂಡ್ ಸ್ಕ್ಯಾನಿಂಗ್ ರೇಡಿಯೋಲಾಜಿ ಸೇವೆಗಳು ಸಾರ್ವಜನಿಕರಿಗೆ ಲಭ್ಯವಾಗಿವೆ.

ಈ ಬಗ್ಗೆ ಮಾತನಾಡಿರುವ ಬೆಂಗಳೂರು ಡಿಹೆಚ್​ಒ ಡಾ.ಗೋಳೂರು ಶ್ರೀನಿವಾಸ್, ನಗರ ಜಿಲ್ಲೆಯಲ್ಲಿ 3 ತಾಲೂಕು ಆಸ್ಪತ್ರೆ, 20 ಜಿಲ್ಲಾಸ್ಪತ್ರೆಗಳಿವೆ. ಕೋವಿಡ್ ನಂತರ ಎಲ್ಲ ಆಸ್ಪತ್ರೆಗಳಲ್ಲೂ ಕೋವಿಡ್ ಚಿಕಿತ್ಸೆ ಹೊರತುಪಡಿಸಿ ಎಲ್ಲ ಪ್ರಕರಣಗಳಿಗೂ ಚಿಕಿತ್ಸೆ ನೀಡಲಾಗುತ್ತಿದೆ.

ಯಾವುದೇ ಖಾಸಗಿ ಆಸ್ಪತ್ರೆಗೆ ಶಿಫಾರಸು ಮಾಡುತ್ತಿಲ್ಲ.‌ ಸ್ಕ್ಯಾನಿಂಗ್​​ನಿಂದ ಹಿಡಿದು ರಕ್ತ ಪರೀಕ್ಷೆವರೆಗೆ ಉಚಿತವಾಗಿಯೇ ಮಾಡಲಾಗುತ್ತಿದೆ ಎಂದರು.‌

ಇದನ್ನೂ ಓದಿ...ಬೆಣ್ಣೆನಗರಿ ಸರ್ಕಾರಿ ಆಸ್ಪತ್ರೆಗಳಲ್ಲಿ ಬೇಕಿದೆ ಡಯಾಗ್ನಾಸ್ಟಿಕ್ ಸೇವೆ

ಜೊತೆಗೆ ಹಲವು ಆಸ್ಪತ್ರೆಗಳಲ್ಲಿ ಲ್ಯಾಬ್​ಗಳನ್ನು ತೆರೆಯಲಾಗಿದ್ದು, ಕೋವಿಡ್​ಗೆ ಸಂಬಂಧಿಸಿದ ಆರ್​ಟಿಪಿಸಿಆರ್ ಪರೀಕ್ಷೆ ಮಾಡಲಾಗುತ್ತಿದೆ. ಡಯಾಗ್ನೋಸ್ಟಿಕ್ ಸೇವೆ, ಐಸಿಯು ಬೆಡ್ ಸಮಸ್ಯೆ ಮತ್ತು ತಜ್ಞ ವೈದ್ಯರ, ಸಿಬ್ಬಂದಿ ಕೊರತೆ ಸದ್ಯಕ್ಕಿಲ್ಲ. ಕೆ.ಸಿ.ಜನರಲ್ ಆಸ್ಪತ್ರೆಯಲ್ಲೂ ದಿನದ 24 ಗಂಟೆಯೂ ಕಾರ್ಯನಿರ್ವಹಿಸುವ ಲ್ಯಾಬ್ ಇದ್ದು, ಕೈಗಟುಕುವ ದರದಲ್ಲಿ ಸೇವೆ‌ ನೀಡುತ್ತಿದೆ.‌

ಸಿ.ವಿರಾಮನ್ ನಗರ ಸಾರ್ವಜನಿಕ ಆಸ್ಪತ್ರೆ, ಜಯನಗರ ಸಾರ್ವಜನಿಕ ಆಸ್ಪತ್ರೆಯಲ್ಲಿ ಲ್ಯಾಬ್ ಸೌಲಭ್ಯವಿದೆ. ಕೆ.ಆರ್.ಪುರಂನಲ್ಲೂ ಲ್ಯಾಬ್ ವ್ಯವಸ್ಥೆ ಮಾಡಲಾಗುತ್ತಿದೆ ಎಂದರು.

ಬೆಂಗಳೂರು ಡಿಹೆಚ್​ಒ ಡಾ.ಗೋಳೂರು ಶ್ರೀನಿವಾಸ್

ಖಾಸಗಿ ಲ್ಯಾಬ್​ಗಳಿಗೆ ಹೆಚ್ಚಿನ ಹಣ ತಗುಲುವ ಕಾರಣ, ಜನ ಸಾಮಾನ್ಯರು ಸರ್ಕಾರಿ ಆಸ್ಪತ್ರೆಯ ಡಯಾಗ್ನೋಸ್ಟಿಕ್ ಲ್ಯಾಬ್​ನಲ್ಲಿ ಪರೀಕ್ಷೆಗಾಗಿ ಹೆಚ್ಚು ಅವಲಂಬಿತರಾಗುತ್ತಾರೆ.‌ ಕೋವಿಡ್ ಬಂದ ಮೇಲಂತೂ ಲ್ಯಾಬ್​ಗಳ ಸಂಖ್ಯೆಯು ಹೆಚ್ಚಿದೆ. ಹೀಗಾಗಿ, ಸಿಬ್ಬಂದಿ ಕೊರತೆ ಉಂಟಾಗದಂತೆ ನೋಡಿಕೊಳ್ಳಬೇಕಿದೆ.

ABOUT THE AUTHOR

...view details