ಬೆಂಗಳೂರು: ನೈಋತ್ಯ ರೈಲ್ವೆಯ ಬೆಂಗಳೂರು ವಿಭಾಗವು ಯಶವಂತಪುರ, ಬೆಂಗಳೂರು ದಂಡು ಮತ್ತು ಕೃಷ್ಣರಾಜಪುರಂ ರೈಲು ನಿಲ್ದಾಣಗಳಲ್ಲಿ ತಲಾ ಒಂದರಂತೆ 3 ಪ್ಲಾಸ್ಟಿಕ್ ಬಾಟಲ್(PET ಬಾಟಲ್) ಪುಡಿ ಮಾಡುವ ಯಂತ್ರಗಳನ್ನು ಸ್ಥಾಪಿಸಿದೆ. ಕಾರ್ಪೊರೇಟ್ ಸಾಮಾಜಿಕ ಜವಾಬ್ದಾರಿ (CSR) ಅಡಿ ಈ ಯಂತ್ರಗಳನ್ನು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಪ್ರಾಯೋಜಿಸಿದೆ.
ಪ್ರತಿ ಯಂತ್ರವು ಗಂಟೆಗೆ 500 ಬಾಟಲಿಗಳನ್ನು ಕತ್ತರಿಸಲಿದ್ದು, 12 ರಿಂದ 16 ಸೆ.ಮೀ ಗಾತ್ರದ ಸಣ್ಣ ತುಣುಕುಗಳಾಗಿ ಪರಿವರ್ತಿಸುತ್ತದೆ. ಈ ತುಣುಕುಗಳನ್ನು ಮರುಬಳಕೆ ಮಾಡಬಹುದು. 2 ಲೀಟರ್ ವರೆಗಿನ ಗಾತ್ರದ ಬಾಟಲಿಗಳನ್ನು ಯಂತ್ರಗಳಿಗೆ ನೀಡಬಹುದು.