ಬೆಂಗಳೂರು:ಮುಖ್ಯಮಂತ್ರಿಗಳ ಬಗ್ಗೆ ಹಗುರವಾಗಿ ಮಾತನಾಡಬೇಡಿ ಎಂದಿದ್ದೇನೆಯೇ ಹೊರತು ಬೇರೆ ಏನೂ ಇಲ್ಲ. ಹೆಚ್.ವಿಶ್ವನಾಥ್ ಹತಾಶರಾಗಿ ಆರೋಪಗಳನ್ನು ಮಾಡುತ್ತಿದ್ದಾರೆ ಎಂದು ಸಿಎಂ ರಾಜಕೀಯ ಕಾರ್ಯದರ್ಶಿ ಎಂ.ಪಿ ರೇಣುಕಾಚಾರ್ಯ ಹೇಳಿದ್ದಾರೆ.
ಸಿಎಂ ನಿವಾಸ ಕಾವೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಿಶ್ವನಾಥ್ ಮುಖ್ಯಮಂತ್ರಿಗಳ ವಿರುದ್ಧವಾಗಿ ಮಾತಾಡಿದ್ದರು. ಅದಕ್ಕೆ ಹಗುರವಾಗಿ ಮಾತಾಡಬೇಡಿ ಎಂದು ನಾವು ಮಾತಾಡಿದ್ದೆವು ಅಷ್ಟೇ. ಅವರ ಆಡಿಯೋ, ವಿಡಿಯೋ ನನ್ನ ಬಳಿ ಇದೆ. ಅದರಲ್ಲೇ ಅವರ ನಾಲಿಗೆ, ಸಂಸ್ಕೃತಿ ಹೇಗಿದೆ ಅಂತಾ ಗೊತ್ತಾಗುತ್ತೆ. ವಿಶ್ವನಾಥ್ ವಯಸ್ಸಿನಲ್ಲಿ ಹಿರಿಯರು. ಆದರೂ ಅವರ ಬಾಯಲ್ಲಿ ಬರುವ ಆ ರೀತಿಯ ಶಬ್ದ ಮಾತ್ರ ಅಸಂಬದ್ಧ. ಅವರ ಬಗ್ಗೆ ಮಾತಾಡಿದ್ರೆ, ನನ್ನ ನಾಲಿಗೆಯೇ ಹೊಲಸಾಗುತ್ತದೆ ಎಂದು ತಿರುಗೇಟು ನೀಡಿದರು.