ಕರ್ನಾಟಕ

karnataka

ETV Bharat / city

ಲಸಿಕೆ ಹಾಕಿಸಿಕೊಳ್ಳಲು ಹೋಗ್ತಾ ಇದ್ದೇನೆ: ಬೈಕ್ ಮುಂದೆ ಬೋರ್ಡ್ ಹಾಕಿಕೊಂಡ ಸವಾರ - ಬೆಂಗಳೂರು ಲಾಕ್​ಡೌನ್​

ಸುಳ್ಳು ಹೇಳುತ್ತಿದ್ದಾನೆ ಎಂದು ಬೈಕ್ ಸೀಜ್ ಮಾಡಬಹುದು. ಅಲ್ಲದೇ ಬಾಯಿ ಮಾತಲ್ಲಿ ವ್ಯಾಕ್ಸಿನೇಷನ್ ಎಂದು ಹೇಳಿದರೆ ಪೊಲೀಸರು ನಂಬುವುದಿಲ್ಲ. ಹೀಗಾಗಿ ಗಾಡಿ ಮೇಲೆಯೇ ಬೋರ್ಡ್ ಹಾಕಿದ್ದಾರೆ.

Bike rider put board to get vaccine in bengaluru
ಬೈಕ್ ಮುಂದೆ ಬೋರ್ಡ್ ಹಾಕಿಕೊಂಡ ಸವಾರ

By

Published : May 12, 2021, 10:07 PM IST

Updated : May 13, 2021, 8:01 AM IST

ಬೆಂಗಳೂರು: ಲಾಕ್ ಡೌನ್ ವೇಳೆ ಹೆಜ್ಜೆ ಹೆಜ್ಜೆಗೂ ವಾಹನ ತಪಾಸಣೆ ನಡೆಸುತ್ತಿರುವ ಪೊಲೀಸರಿಗೆ ಸಬೂಬು ಹೇಳಿ ಸಾಕಾಗಿರುವ ಸವಾರರೊಬ್ಬರು ಬೈಕ್​ಗೆ ಲಸಿಕೆ ಹಾಕಿಸಿಕೊಳ್ಳಲು ಹೋಗ್ತಾ ಇದ್ದೇನೆ ಎಂದು ಬೋರ್ಡ್ ಹಾಕಿದ್ದಾರೆ.

ಅನಾವಶ್ಯಕವಾಗಿ ಓಡಾಡೋಕೆ ಪೊಲೀಸರು ಬಿಡುವುದಿಲ್ಲ. ಪ್ರತಿಯೊಬ್ಬರಿಗೆ ಸಬೂಬು ಹೇಳಿಕೊಂಡು ಓಡಾಡಬೇಕು. ಸುಳ್ಳು ಹೇಳುತ್ತಿದ್ದಾನೆ ಎಂದು ಬೈಕ್ ಸೀಜ್ ಮಾಡಬಹುದು. ಅಲ್ಲದೇ ಬಾಯಿ ಮಾತಲ್ಲಿ ವ್ಯಾಕ್ಸಿನೇಷನ್ ಎಂದು ಹೇಳಿದರೆ ಪೊಲೀಸರು ನಂಬುವುದಿಲ್ಲ. ಹೀಗಾಗಿ ಗಾಡಿ ಮೇಲೆಯೇ ಬೋರ್ಡ್ ಹಾಕಿದ್ದಾರೆ.

ಲಸಿಕೆ ಹಾಕಿಸಿಕೊಳ್ಳಲು ಎಂಎಸ್ ರಾಮಯ್ಯ ಹಾಸ್ಪಿಟಲ್​ಗೆ ಹೋಗುತ್ತಿದ್ದೇನೆ. ಕೆಲವೊಮ್ಮೆ ವ್ಯಾಕ್ಸಿನ್ ಸಿಗುವುದಿಲ್ಲ. ಹೀಗಾಗಿ ಮತ್ತೆ ಮತ್ತೆ ಆಸ್ಪತ್ರೆಗೆ ತೆರಳಬೇಕಾಗುತ್ತೆ ಅಥವಾ ಕುಟುಂಬದವರಿಗೆ ನಿತ್ಯ ಒಬ್ಬರಂತೆ ಆಸ್ಪತ್ರೆಗೆ ಕರೆದೊಯ್ಯಬೇಕಾಗುತ್ತೆ. ಹೀಗಾಗಿ ಗಾಡಿಗೆ ಬೋರ್ಡ್ ಹಾಕಿ ವ್ಯಾಕ್ಸಿನ್ ಗೆ ತೆರಳುತ್ತಿರುವುದಾಗಿ ತಿಳಿಸಿದ್ದಾರೆ.

Last Updated : May 13, 2021, 8:01 AM IST

ABOUT THE AUTHOR

...view details