ಹೊಸಕೋಟೆ :ಲಾಕ್‌ಡೌನ್‌ನಿಂದ ಉತ್ತರಭಾರತ ಮೂಲದ ಕಾರ್ಮಿಕರ ಪರದಾಟ ಹಿನ್ನೆಲೆ ಕೂಲಿ ಕಾರ್ಮಿಕರಿಗೆ ಭರ್ಜರಿ ಬಿರಿಯಾನಿ ಊಟ ನೀಡಿರುವ ಘಟನೆ ಹೊಸಕೋಟೆ ತಿರುಮಶೆಟ್ಟಹಳ್ಳಿ ಗ್ರಾಮದಲ್ಲಿ ನಡೆದಿದೆ.
ಲಾಕ್‌ಡೌನ್ ಎಫೆಕ್ಟ್.. ಕೂಲಿ ಕಾರ್ಮಿಕರಿಗೆ ಬಿರಿಯಾನಿ ಬಾಡೂಟ ನೀಡಿದ ಗ್ರಾಮಸ್ಥರು.. - ಹೊಸಕೋಟೆ ತಿರುಮಶೆಟ್ಟಹಳ್ಳಿ ಗ್ರಾಮ
ಇಂದು ಭಾನುವಾರ ಆದ ಕಾರಣ 130 ಕೆಜಿ ಚಿಕನ್ ಬಿರಿಯಾನಿ ಬಾಡೂಟ ನೀಡಿದ್ದಾರೆ. ತಿರುಮಶೆಟ್ಟಹಳ್ಳಿ ಗ್ರಾಮಸ್ಥರಿಂದ ಈ ಒಳ್ಳೆಯ ಕೆಲಸಕ್ಕೆ ಬೇರೆ ಅಕ್ಕಪಕ್ಕದ ಗ್ರಾಮಸ್ಥರು ಹಾಗೂ ರೈತರು ತಮ್ಮ ತೋಟದಲ್ಲಿ ಬೆಳೆಯುವ ತರಕಾರಿಗಳು ಅಕ್ಕಿ, ದಿನಸಿ ಸಾಮಾಗ್ರಿಗಳನ್ನು ತಂದು ಕೊಟ್ಟು ನೂರಾರು ಜನ ಹಸಿವನ್ನು ನೀಗಿಸಲು ಮುಂದಾಗಿದ್ದಾರೆ.
ಕಾರ್ಖಾನೆಗಳಲ್ಲಿ ಕೂಲಿ ಕೆಲಸ ಮಾಡುವ 500ಕ್ಕೂ ಹೆಚ್ಚು ಕಾರ್ಮಿಕರು ಒಂದು ಹೊತ್ತಿನ ಊಟಕ್ಕೆ ಪರದಾಡುತ್ತಿದ್ದರು. ಇದನ್ನು ಗಮನಿಸಿದ ಗ್ರಾಮದ ಯುವಕರು ತಮ್ಮ ಸ್ವಂತ ಹಣದಿಂದ ಸಹಾಯ ಮಾಡಲು ಮುಂದಾಗಿದ್ದಾರೆ. ಕಳೆದ ಹದಿಮೂರು ದಿನಗಳಿಂದ ಮುಂಜಾನೆ ಉಪಹಾರ ಮತ್ತು ರಾತ್ರಿ ಊಟದ ವ್ಯವಸ್ಥೆ ಮಾಡುವ ಮೂಲಕ ಮಾನವೀಯತೆ ಮೆರೆದಿದ್ದಾರೆ.