ಕರ್ನಾಟಕ

karnataka

ETV Bharat / city

ಲಾಕ್‌ಡೌನ್‌ ಎಫೆಕ್ಟ್.. ಸಿಬ್ಬಂದಿ ಕೊರತೆ, ಮನೆ ಮನೆಗೂ ಸಿಲಿಂಡರ್ ವಿತರಣೆಯಲ್ಲಿ ವ್ಯತ್ಯಯ.. - ಕೊರತೆ ಗ್ರಾಹಕರ ಮನೆ ಮನೆಗೂ ಸಿಲಿಂಡರ್

ಬೈಕ್ ಆಥವಾ ಇನ್ನಿತರ ವಾಹನ ಇರುವವರು ಖುದ್ದು ಏಜೆನ್ಸಿಗಳಿಗೆ ತೆರಳಿ ಸಿಲಿಂಡರ್ ತೆಗೆದುಕೊಂಡು ಬರುತ್ತಾರೆ. ಆದರೆ, ಯಾವುದೇ ವಾಹನ ಇಲ್ಲದವರು ಸಿಲಿಂಡರ್ ತೆಗೆದುಕೊಂಡು ಬರುವುದಾದರೂ ಹೇಗೆ? ಎಂದು ನಾಗರಿಕರು ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ‌‌.

louck-down-effect-variation-in-cylinder-distribution-for-house-to-house
ಲಾಕ್‌ ಡೌನ್‌ ಎಫೆಕ್ಟ್:‌ ಸಿಬ್ಬಂದಿಗಳ ಕೊರತೆ, ಮನೆ ಮನೆಗೂ ಸಿಲಿಂಡರ್ ವಿತರಣೆಯಲ್ಲಿ ವ್ಯತ್ಯಯ..!

By

Published : Apr 12, 2020, 6:18 PM IST

ಬೆಂಗಳೂರು :ಲಾಕ್‌ಡೌನ್ ಎಫೆಕ್ಟ್‌ನಿಂದ ಸಿಬ್ಬಂದಿ ಕೊರತೆ ಗ್ರಾಹಕರ ಮನೆ ಮನೆಗೂ ಸಿಲಿಂಡರ್ ವಿತರಣೆಯಲ್ಲಿ ವ್ಯತ್ಯಯ ಕಂಡು ಬಂದಿದೆ.

ಕೊರೊನಾಘಾತದಿಂದ ಸಿಲಿಂಡರ್ ವಿತರಿಸುವ ಸಿಬ್ಬಂದಿ ಗೈರಾದ ಪರಿಣಾಮ ಗ್ರಾಹಕರೇ ಗ್ಯಾಸ್ ಏಜೆನ್ಸಿ‌ ಆಫೀಸ್‌ಗೆ ತೆರಳಿ ಸಿಲಿಂಡರ್ ಸಂಗ್ರಹಿಸುವ ಅನಿವಾರ್ಯ ಸೃಷ್ಟಿಯಾಗಿದೆ. ಅಲ್ಲದೇ 2ನೇ ಹಂತದ ಲಾಕ್‌ಡೌನ್ ಘೋಷಣೆಯಿಂದ ನಾಗರಿಕರು ತತ್ತರಿಸಿದ್ದಾರೆ. ಬಡ ಹಾಗೂ ಮಧ್ಯಮ ವರ್ಗದ ಜನರ ಮನೆಯ ಆರ್ಥಿಕ ಶೋಚನೀಯವಾಗಿದೆ‌.‌

ಸಿಲಿಂಡರ್ ಖಾಲಿಯಾದರೆ ಹೇಗೋ ಹಣ ಹೊಂದಿಸಿಕೊಂಡು ಗ್ಯಾಸ್ ಕಂಪನಿಗಳಿಗೆ ಬುಕ್‌ ಮಾಡುತ್ತಾರೆ. ಆದರೆ, ಇದೀಗ ಕೊರೊನಾ ಎಫೆಕ್ಟ್‌ನಿಂದಾಗಿ ಬಾಗಿಲಿಗೆ ಸಿಬ್ಬಂದಿ ಬರುವುದಿರಲಿ ಕೆಲಸಕ್ಕೆ ಹಾಜರಾಗದೆ ಊರು ಸೇರಿದ್ದಾರೆ. ಇಂಡಿಯನ್, ಭಾರತ್ ಹಾಗೂ ಹೆಚ್‌ ಪಿ ಗ್ಯಾಸ್ ಕಂಪನಿಗಳ ಸಿಲಿಂಡರ್ ಪೂರೈಕೆಯಲ್ಲಿ ಯಾವುದೇ ವ್ಯತ್ಯಯ ಕಂಡು ಬಂದಿಲ್ಲವಾದರೂ ಗ್ರಾಹಕರೇ‌ ಖುದ್ದು ತೆರಳಿ ಸಿಲಿಂಡರ್ ಸಂಗ್ರಹಿಸಬೇಕಾಗಿದೆ.

ಬೈಕ್ ಆಥವಾ ಇನ್ನಿತರ ವಾಹನ ಇರುವವರು ಖುದ್ದು ಏಜೆನ್ಸಿಗಳಿಗೆ ತೆರಳಿ ಸಿಲಿಂಡರ್ ತೆಗೆದುಕೊಂಡು ಬರುತ್ತಾರೆ. ಆದರೆ, ಯಾವುದೇ ವಾಹನ ಇಲ್ಲದವರು ಸಿಲಿಂಡರ್ ತೆಗೆದುಕೊಂಡು ಬರುವುದಾದರೂ ಹೇಗೆ? ಎಂದು ನಾಗರಿಕರು ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ‌‌.

ABOUT THE AUTHOR

...view details