ಕರ್ನಾಟಕ

karnataka

ETV Bharat / city

ಆ.10ರಿಂದ ಲಾರಿ ಸಂಚಾರ ಸಂಪೂರ್ಣ ಬಂದ್:  ಸರ್ಕಾರಕ್ಕೆ ಲಾರಿ ಮಾಲೀಕರ ಎಚ್ಚರಿಕೆ - bengaluru news

ಸೆಪ್ಟೆಂಬರ್​ವರೆಗೆ ತೆರಿಗೆ ವಿನಾಯಿತಿ ನೀಡುವಂತೆ ಲಾರಿ ಮಾಲೀಕರು ಒತ್ತಾಯಿಸಿದ್ದು, ರಾಜ್ಯ ಹೆದ್ದಾರಿಗಳಲ್ಲಿ 2021ವರೆಗೂ ಹೆದ್ದಾರಿ ಟೋಲ್ ರದ್ದು ಮಾಡಬೇಕು. ಲಾರಿ ಚಾಲಕರಿಗೆ ಹೆಲ್ತ್ ಇನ್ಶೂರೆನ್ಸ್ ಜಾರಿ ಮಾಡಬೇಕೆಂದು ಆಗ್ರಹಿಸಿದ್ದಾರೆ. ಆಗಸ್ಟ್ 3 ರವರೆಗೆ ಸರ್ಕಾರ ಕ್ಕೆ ಡೆಡ್​ಲೈನ್ ನೀಡುತ್ತೇವೆ.‌ ಬೇಡಿಕೆ ಈಡೇರಿಕೆ ಮಾಡಿಲ್ಲವಾದರೆ ರಾಜ್ಯಾದ್ಯಂತ ಅನಿರ್ಧಿಷ್ಟಾವಧಿ ಮುಷ್ಕರ ಮಾಡುವುದಾಗಿ ರಾಜ್ಯ ಲಾರಿ ಮಾಲೀಕರ ಸಂಘದ ಅಧ್ಯಕ್ಷ ಜಿ ಆರ್ ಷಣ್ಮುಗಪ್ಪ ಎಚ್ಚರಿಸಿದ್ದಾರೆ.

Lorry owners strike from August 10th
ಲಾರಿ ಸಂಚಾರ ಸಂಪೂರ್ಣ ಬಂದ್

By

Published : Jul 27, 2020, 2:04 PM IST

ಬೆಂಗಳೂರು:ವಿವಿಧ ಬೇಡಿಕೆಗಳ ಈಡೇರಿಕೆ ಆಗ್ರಹಿಸಿ ಮುಷ್ಕರ ನಡೆಸಲು ಲಾರಿ ಮಾಲೀಕರು ಮುಂದಾಗಿದ್ದಾರೆ.‌

ದೇಶದೆಲ್ಲೆಡೆ ಕೊರೊನಾ ಸೋಂಕಿನ ಪರಿಣಾಮ ಲಾರಿ ಮಾಲೀಕರು ಭಾರಿ ಆರ್ಥಿಕ ನಷ್ಟವನ್ನು ಅನುಭವಿಸುತ್ತಿದ್ದಾರೆ. ಸ್ವಲ್ಪಮಟ್ಟಿಗೆ ಚೇತರಿಸಿಕೊಳ್ಳಲು ಕನಿಷ್ಠ 1 ವರ್ಷವಾದರೂ ಬೇಕು ಎಂಬುದು ಲಾರಿ ಮಾಲೀಕರ ಮಾತು.

ಕೋವಿಡ್‌ನಂತಹ ಸಂದರ್ಭದಲ್ಲೂ ಸಾರ್ವಜನಿಕರಿಗೆ ಅಗತ್ಯ ವಸ್ತುಗಳ ಕೊರತೆಯಾಗದಂತೆ ಎಚ್ಚರ ವಹಿಸಿ ಕೊರೊನಾ ವಾರಿಯರ್ಸ್ ರೀತಿಯಲ್ಲೇ ಸಾಗಾಣಿಕೆ ಉದ್ಯಮವು ತನ್ನ ಕರ್ತವ್ಯ ನಿರ್ವಹಿಸಿದೆ. ಈ ಬಗ್ಗೆ ಈಗಾಗಲೇ ರಾಜ್ಯ ಸರ್ಕಾರಕ್ಕೆ ಸಂಘಟನೆ ಮನವಿಯೊಂದನ್ನು ಸಲ್ಲಿಸಿದ್ದು, ಈ ಕುರಿತು ಯಾವುದೇ ಕ್ರಮ ತೆಗೆದುಕೊಂಡಿಲ್ಲ. ಎಲ್ಲೆಡೆಯೂ ವಿನಾಕಾರಣ ಶುಲ್ಕ ವಿಧಿಸುತ್ತಾ, ಸಾಗಣೆದಾರರನ್ನು ಶೋಷಣೆ ಮಾಡಲಾಗುತ್ತಿದೆ ಎಂದು ಲಾರಿ ಮಾಲೀಕರು ಆರೋಪಿಸಿದ್ದಾರೆ.

ಸರ್ಕಾರಕ್ಕೆ ಲಾರಿ ಮಾಲೀಕರ ಎಚ್ಚರಿಕೆ

ಹೀಗಾಗಿ, ವಿವಿಧ ಬೇಡಿಕೆಗಳ ಈಡೇರಿಕೆ ಆಗ್ರಹಿಸಿ ಮುಷ್ಕರ ನಡೆಸಲು ಲಾರಿ ಮಾಲೀಕರು ಮುಂದಾಗಿದ್ದಾರೆ.‌ ಸೆಪ್ಟೆಂಬರ್​ವರೆಗೆ ತೆರಿಗೆ ವಿನಾಯಿತಿ ನೀಡುವಂತೆ ಲಾರಿ ಮಾಲೀಕರು ಒತ್ತಾಯಿಸಿದ್ದು, ರಾಜ್ಯ ಹೆದ್ದಾರಿಗಳಲ್ಲಿ 2021ವರೆಗೂ ಹೆದ್ದಾರಿ ಟೋಲ್ ರದ್ದು ಮಾಡಬೇಕು. ಲಾರಿ ಚಾಲಕರಿಗೆ ಹೆಲ್ತ್ ಇನ್ಶೂರೆನ್ಸ್ ಜಾರಿ ಮಾಡಬೇಕೆಂದು ಆಗ್ರಹಿಸಿದ್ದಾರೆ.

ಆಗಸ್ಟ್ 3 ರವರೆಗೆ ಸರ್ಕಾರಕ್ಕೆ ಡೆಡ್​ಲೈನ್ ನೀಡುತ್ತೇವೆ.‌ ಬೇಡಿಕೆ ಈಡೇರಿಕೆ ಮಾಡಿಲ್ಲವಾದರೆ ರಾಜ್ಯಾದ್ಯಂತ ಲಾರಿ ಸಂಚಾರ ಸಂಪೂರ್ಣ ಬಂದ್ ಮಾಡಲಾಗುತ್ತದೆ.‌ ಸರ್ಕಾರ ಬೇಡಿಕೆ ಈಡೇರಿಸಿಲ್ಲ ಅಂದರೆ ಅಗತ್ಯ ವಸ್ತುಗಳ ಸರಬರಾಜು ಮಾಡುವ ಲಾರಿಗಳು ಬಂದ್ ಆಗಲಿದೆ. ಹೀಗಾಗಿ ಅನಿರ್ಧಿಷ್ಟಾವಧಿ ಮುಷ್ಕರ ಮಾಡುವುದಾಗಿ ರಾಜ್ಯ ಲಾರಿ ಮಾಲೀಕರ ಸಂಘದ ಅಧ್ಯಕ್ಷ ಜಿ ಆರ್ ಷಣ್ಮುಗಪ್ಪ ಎಚ್ಚರಿಸಿದ್ದಾರೆ. ಆಗಸ್ಟ್ 10 ರಿಂದ ಸಂಪೂರ್ಣ ಲಾರಿ ಸಂಚಾರ ಬಂದ್‌ ಮಾಡಿ, ಅನಿರ್ಧಿಷ್ಟಾವಧಿ ಮುಷ್ಕರಕ್ಕೆ ನಿರ್ಧಾರ ಮಾಡಲಾಗಿದೆ.‌

ABOUT THE AUTHOR

...view details