ಆನೇಕಲ್: ಚಾಲಕನ ಮೇಲೆ ಟೋಲ್ ಸಿಬ್ಬಂದಿ ಹಲ್ಲೆ ಮಾಡಿರುವುದನ್ನು ವಿರೋಧಿಸಿ ಅತ್ತಿಬೆಲೆ ಲಾರಿ ಮಾಲೀಕರ ಸಂಘದಿಂದ ಪ್ರತಿಭಟನೆ ನಡೆಸಲಾಯಿತು.
ಚಾಲಕನ ಮೇಲೆ ಟೋಲ್ ಸಿಬ್ಬಂದಿ ಹಲ್ಲೆ: ಲಾರಿ ಮಾಲೀಕರ ಸಂಘದಿಂದ ಪ್ರತಿಭಟನೆ
ಚಾಲಕನ ಮೇಲೆ ಟೋಲ್ ಸಿಬ್ಬಂದಿ ಹಲ್ಲೆ ಮಾಡಿರುವುದನ್ನು ವಿರೋಧಿಸಿ ಅತ್ತಿಬೆಲೆ ಲಾರಿ ಮಾಲೀಕರ ಸಂಘದಿಂದ ಶುಕ್ರವಾರ ಪ್ರತಿಭಟನೆ ನಡೆಸಲಾಯಿತು.
ಲಾರಿ ಮಾಲೀಕರ ಸಂಘದಿಂದ ಪ್ರತಿಭಟನೆ
ಚಾಲಕನನ್ನು ಥಳಿಸಿದ ಅತ್ತಿಬೆಲೆ ಟೋಲ್ ಸಿಬ್ಬಂದಿ: ದೃಶ್ಯ ಸಿಸಿಟಿವಿಯಲ್ಲಿ ಸೆರೆ
ಟೋಲ್ ಸಿಬ್ಬಂದಿ ಕೆಲವೊಮ್ಮೆಅಗತ್ಯಕ್ಕಿಂತ ಹೆಚ್ಚಾಗಿ ಚಾಲಕರಿಗೆ ದಬಾಯಿಸುವುದು ಮಾಮೂಲಿಯಾಗಿದ್ದು, ಇದು ಪದೇ ಪದೆ ಮರುಕಳಿಸುತ್ತಿದೆ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು. ನಿಯಮದಂತೆ ಹಳ್ಳಿಯಿಂದ ಏಳು ಕಿ.ಮೀ ದೂರದಲ್ಲಿ ಟೋಲ್ ಇರಬೇಕು ಎಂದು ತಿಳಿಸಿದ್ದರೂ ಅತ್ತಿಬೆಲೆ ಅಂಚಿನಲ್ಲಿ ಟೋಲ್ ಮಾಡಲಾಗಿದೆ. ಅಲ್ಲದೇ ಸಂಘ ಸಂಸ್ಥೆಗಳ ವಾಹನಗಳನ್ನೂ ಉಚಿತವಾಗಿ ಬಿಡುತ್ತಿಲ್ಲ. ಇದರಿಂದ ಸಹಜವಾಗಿಯೇ ಟೋಲ್ನಲ್ಲಿ ದಬ್ಬಾಳಿಕೆ ನಡೆಯುತ್ತಿದೆ ಎಂದು ಆರೋಪಿಸಿದರು.