ಬೆಂಗಳೂರು: ಮನೆ ಮುಂದೆ ನಿಲ್ಲಿಸಿದ್ದ ಲಾರಿಯನ್ನೇ ಕದ್ದ ಖತರ್ನಾಕ್ ಖದೀಮನನ್ನು ಬಂಧಿಸುವಲ್ಲಿ ಕಾಮಾಕ್ಷಿಪಾಳ್ಯ ಠಾಣೆ ಪೊಲೀಸರು ಯಶಸ್ವಿಯಾಗಿದ್ದಾರೆ. ಕಾಮಾಕ್ಷಿಪಾಳ್ಯದ ಕೊಟ್ಟಿಗೆಪಾಳ್ಯ ನಿವಾಸಿಯಾಗಿರುವ ಮಾರುತಿ ಎಂಬುವರು ನೀಡಿದ ದೂರಿನ ಮೇರೆಗೆ, ಪೊಲೀಸರು ಪ್ರಕರಣ ಸಂಬಂಧ ಮಜರ್ ಅಹಮದ್ ಎಂಬಾತನನ್ನು ಬಂಧಿಸಿದ್ದಾರೆ. ಮಾರುತಿ ಅವರು ಮಾರ್ಚ್ 15ರಂದು ಮನೆ ಮುಂದೆ ಈಚರ್ ವಾಹನ ಪಾರ್ಕ್ ಮಾಡಿದ್ದರು. ಈ ಮಾಹಿತಿ ಅರಿತಿದ್ದ ಆರೋಪಿಯು ನಕಲಿ ಕೀ ಬಳಸಿ ಲಾರಿ ಕಳ್ಳತನ ಮಾಡಿದ್ದ.
ಬೆಂಗಳೂರಿನಲ್ಲಿ ಕಳ್ಳತನವಾಗಿದ್ದ ಲಾರಿ ಮಂಡ್ಯ ಗ್ಯಾರೇಜ್ನಲ್ಲಿ ಪತ್ತೆ! - lorry theft news
ಬೆಂಗಳೂರಿನಲ್ಲಿ ಕಳ್ಳತನವಾಗಿದ್ದ ಲಾರಿ ಮಂಡ್ಯ ಗ್ಯಾರೇಜ್ನಲ್ಲಿ ಪತ್ತೆಯಾಗಿದೆ. ಈ ಸಂಬಂಧ ಮಜರ್ ಅಹಮದ್ ಎಂಬಾತನನ್ನು ಕಾಮಾಕ್ಷಿಪಾಳ್ಯ ಪೊಲೀಸರು ಬಂಧಿಸಿದ್ದಾರೆ..
ಇದನ್ನೂ ಓದಿ:ಜೈಲಿನಲ್ಲಿ ದೋಸ್ತಿ: ಹೊರಗಡೆ ಬಂದು ಮತ್ತೆ ಕಳ್ಳತನಕ್ಕೆ ಕೈ ಹಾಕಿದ ಖದೀಮರ ಬಂಧನ
ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು ತನಿಖೆ ಕೈಗೊಂಡಿದ್ದರು. ಜಿಪಿಎಸ್ ಆಧಾರದ ಮೇರೆಗೆ ಮಂಡ್ಯದ ಗ್ಯಾರೇಜ್ವೊಂದರಲ್ಲಿ ವಾಹನ ಇರುವಿಕೆಯನ್ನು ಪತ್ತೆ ಹಚ್ಚಿದ್ದರು. ಬಳಿಕ ಕಾರ್ಯಾಚರಣೆ ನಡೆಸಿ ವಾಹನ ಪತ್ತೆ ಹಚ್ಚಿ ಆರೋಪಿಯನ್ನು ಬಂಧಿಸಿದ್ದಾರೆ. ಕೆಎ 16, ಬಿ 0783 ನಂಬರ್ನ ಈಚರ್ ವಾಹನ ಸ್ಥಿತಿ ಕಂಡು ಮಾಲೀಕ ಮಾರುತಿ ಶಾಕ್ ಆಗಿದ್ದಾರೆ. ಗ್ಯಾರೇಜ್ನಲ್ಲಿ ಈಚರ್ ವಾಹನವನ್ನು ಸಂಪೂರ್ಣ ಕಟ್ ಮಾಡಲಾಗಿತ್ತು. ಡೋರ್, ಸ್ಟೇರಿಂಗ್ ಸೇರಿದಂತೆ ಪ್ರಮುಖ ಭಾಗಗಳನ್ಜು ಬಿಚ್ಚಿರುವುದನ್ನು ಕಂಡು ಲಾರಿ ಮಾಲೀಕ ಮರುಕ ವ್ಯಕ್ತಪಡಿಸಿದ್ದಾರೆ.