ಬೆಂಗಳೂರು:ವೇಗದ ಚಾಲನೆ ಮೃತ್ಯುವಿಗೆ ಆಹ್ವಾನ ಎಂಬ ಗಾದೆ ಮರೆತಂತಿದ್ದ ಲಾರಿ ಚಾಲಕ ವೇಗವಾಗಿ ಲಾರಿ ಚಲಾಯಿಸಿ ಬೈಕ್ ಸವಾರನ ಸಾವಿಗೆ ಕಾರಣವಾದ ಘಟನೆ ನಗರದಲ್ಲಿ ನಡೆದಿದೆ.
ಫಾಸ್ಟ್ ಡ್ರೈವಿಂಗ್ : ಬೈಕ್ ಸವಾರನ ಬಲಿ ಪಡೆದ ಲಾರಿ ಚಾಲಕ - ಬೆಂಗಳೂರು ರಾಜಾಜಿನಗರ ಬೈಕ್ ಲಾರಿ ಅಪಘಾತ
ನಗರದಲ್ಲಿ ಗುಜರಾತ್ ಮೂಲದ ಸರಕು ತುಂಬಿಸಿಕೊಂಡು ವೇಗವಾಗಿ ಬರುತ್ತಿದ್ದ ಲಾರಿ ನಿಯಂತ್ರಣ ತಪ್ಪಿ ಬೈಕ್ಗೆ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ತೀವ್ರ ರಕ್ತಸ್ರಾವದಿಂದ ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ನಗರದಲ್ಲಿ ನಡೆದಿದೆ.
![ಫಾಸ್ಟ್ ಡ್ರೈವಿಂಗ್ : ಬೈಕ್ ಸವಾರನ ಬಲಿ ಪಡೆದ ಲಾರಿ ಚಾಲಕ lorry-and-bike-accident-in-rajajinagar-bangalore](https://etvbharatimages.akamaized.net/etvbharat/prod-images/768-512-6412903-thumbnail-3x2-accident.jpg)
ರಾಜಾಜಿನಗರ ಬೈಕ್ ಲಾರಿ ಅಪಘಾತ
ಬೈಕ್ ಸವಾರನ ಬಲಿ ಪಡೆದ ಲಾರಿ ಚಾಲಕ
ವೆಂಕಟೇಶ್ ಮೃತ ಬೈಕ್ ಸವಾರ. ರಾಜಾಜಿನಗರ ಸಂಚಾರಿ ಪೊಲೀಸ್ ಠಾಣಾ ವ್ಯಾಪ್ತಿಯ ಲಗ್ಗೆರೆ ಬ್ರಿಡ್ಜ್ ಬಳಿ ಈ ಘಟನೆ ಸಂಭವಿಸಿದೆ. ಗುಜರಾತ್ ಮೂಲದ ಸರಕು ತುಂಬಿಸಿಕೊಂಡು ವೇಗವಾಗಿ ಬರುತ್ತಿದ್ದ ಲಾರಿ ನಿಯಂತ್ರಣ ತಪ್ಪಿ ಬೈಕ್ಗೆ ಡಿಕ್ಕಿ ಹೊಡೆದಿದೆ. ಘಟನೆಯಲ್ಲಿ ಬೈಕ್ ಸವಾರ ತೀವ್ರ ರಕ್ತಸ್ರಾವದಿಂದ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ಘಟನೆ ಸಂಬಂಧ ಲಾರಿ ಚಾಲಕನನ್ನು ಸಂಚಾರಿ ಪೊಲೀಸರು ಬಂಧಿಸಿದ್ದಾರೆ.ರಾಜಾಜಿನಗರ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.