ಕರ್ನಾಟಕ

karnataka

ETV Bharat / city

ಹುಳಿಮಾವು ಕೆರೆ ಕೋಡಿ ಪ್ರಕರಣ:  ಬಿಬಿಎಂಪಿಗೆ ಲೋಕಾಯುಕ್ತ ನೋಟಿಸ್ - hulimavu lake broken news

ಹುಳಿಮಾವು ಕೆರೆ ಕೋಡಿ ಒಡೆದ ಘಟನೆ ಸಂಬಂಧ ಕ್ರಮ ಕೈಗೊಂಡ ವರದಿ ನೀಡಲು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಕಮಿಷನರ್​, ಬಿಡಬ್ಲ್ಯೂಎಸ್ಎಸ್​ಬಿ, ಮೆಡಿಕಲ್ ಆಫೀಸರ್ ಬಿಬಿಎಂಪಿ, ಸೆಕ್ರೆಟರಿ ಆಫ್ ಪೊಲ್ಯೂಷನ್ ಕಂಟ್ರೋಲ್ ಬೋರ್ಡ್ ಹಾಗೂ ನಮ್ಮ ಬೆಂಗಳೂರು ಫೌಂಡೇಷನ್​ಗೆ ಲೋಕಾಯುಕ್ತ 2 ವಾರಗಳ ಗಡುವು ನೀಡಿದೆ.

ಹುಳಿಮಾವು ಕೆರೆ ಕೋಡಿ ಒಡೆದ ಪ್ರಕರಣ hulimavu lake broken news
ಹುಳಿಮಾವು ಕೆರೆ ಕೋಡಿ ಒಡೆದ ಪ್ರಕರಣ: ಡಿಸೆಂಬರ್ 10ರ ಒಳಗೆ ಸಂಪೂರ್ಣ ವರದಿಗೆ ಲೋಕಾಯುಕ್ತ ನೋಟಿಸ್

By

Published : Nov 27, 2019, 10:27 AM IST


ಬೆಂಗಳೂರು:ಹುಳಿಮಾವು ಕೆರೆ ಕೋಡಿ ಒಡೆದ ಪರಿಣಾಮ ನೂರಾರು ಮನೆಗಳು ಜಲಾವೃತಗೊಂಡಿದ್ದವು. ಈ ಸಂಬಂಧ ಲೋಕಾಯುಕ್ತರು ಡಿಸೆಂಬರ್ 10ರೊಳಗೆ ವರದಿ ನೀಡುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ಕೊಟ್ಟಿದ್ದಾರೆ.

ಹುಳಿಮಾವು ಕೆರೆ ಕೋಡಿ ಒಡೆದ ಪ್ರಕರಣ: ಡಿಸೆಂಬರ್ 10ರ ಒಳಗೆ ಸಂಪೂರ್ಣ ವರದಿಗೆ ಲೋಕಾಯುಕ್ತ ನೋಟಿಸ್

ಹುಳಿಮಾವು ಕೆರೆ ಪುನರುಜ್ಜೀವನಕ್ಕಾಗಿ ದೊರೆಸ್ವಾಮಿಯವರ ನೇತ್ವತ್ವದಲ್ಲಿ ಸಲ್ಲಿಸಿದ್ದ ದೂರಿನ ಅನುಸಾರ ಕೆರೆಯನ್ನು ಲೋಕಾಯುಕ್ತರು ಪರಿಶೀಲಿಸಿದ್ದರು. ಘಟನೆ ಸಂಬಂಧ ಕ್ರಮ ಕೈಗೊಂಡು ವರದಿ ನೀಡಲು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಕಮಿಷನರ್​, ಬಿಡಬ್ಲ್ಯೂಎಸ್ಎಸ್​ಬಿ, ಮೆಡಿಕಲ್ ಆಫೀಸರ್ ಬಿಬಿಎಂಪಿ, ಸೆಕ್ರೆಟರಿ ಆಫ್ ಪೊಲ್ಯೂಷನ್ ಕಂಟ್ರೋಲ್ ಬೋರ್ಡ್ ಹಾಗೂ ನಮ್ಮ ಬೆಂಗಳೂರು ಫೌಂಡೇಶನ್​ಗೆ 2 ವಾರಗಳ ಗಡುವು ನೀಡಿದ್ದಾರೆ.

ಹುಳಿಮಾವು ಕೆರೆ ಕೋಡಿ ಒಡೆದ ಪ್ರಕರಣ: ಡಿಸೆಂಬರ್ 10ರ ಒಳಗೆ ಸಂಪೂರ್ಣ ವರದಿಗೆ ಲೋಕಾಯುಕ್ತ ನೋಟಿಸ್

ಅಲ್ಲದೇ, ಸುತ್ತಮುತ್ತಲಿನ ಪ್ರದೇಶಗಳಲ್ಲಿ ಯಾವುದೇ ರೀತಿಯ ಸಾಂಕ್ರಾಮಿಕ ರೋಗ ಹರಡದಂತೆ ಕ್ರಮ ವಹಿಸಬೇಕು. ಸಂತ್ರಸ್ತರಿಗೆ ಬೇಕಾದ ಅಗತ್ಯ ವಸ್ತುಗಳನ್ನು ಆದಷ್ಟು ಬೇಗ ಪೂರೈಸಿ ಅದರ ಸಂಪೂರ್ಣ ವಿವರಗಳನ್ನು ಲೋಕಾಯುಕ್ತರಿಗೆ ಸಲ್ಲಿಸಬೇಕು ಎಂದು ನೋಟಿಸ್​ನಲ್ಲಿ ತಿಳಿಸಲಾಗಿದೆ. ಈ ಕೆರೆಯ ಸಂಪೂರ್ಣ ಜವಾಬ್ದಾರಿಯನ್ನ ಆನೇಕಲ್ ತಹಶೀಲ್ದಾರ್ ಮತ್ತು ಎಡಿಎಲ್​ಆರ್ ಮೊದಲೇ ಸೂಚಿಸಿದ್ದು,ಫೆಬ್ರವರಿ 1ರ ಒಳಗೆ ಈ ಕೆರೆಯ ಸುತ್ತಮುತ್ತಲಿನ ಸಂಪೂರ್ಣ ಸರ್ವೆ ಕಾರ್ಯ ಮಾಡಿ, ಒತ್ತುವರಿಯಾಗಿರುವ ಜಾಗವನ್ನು ವಶಪಡಿಸಿಕೊಳ್ಳಲು ಸೂಚಿಸಿದೆ.

ABOUT THE AUTHOR

...view details