ಬೆಂಗಳೂರು:ಲೋಕಾಯುಕ್ತ ನ್ಯಾಯಮೂರ್ತಿ ಪಿ.ವಿಶ್ವನಾಥ ಶೆಟ್ಟಿ ನಿವೃತ್ತಿ ಘೋಷಿಸಿದ್ದಾರೆ. ಬೆಂಗಳೂರಿನ ಲೋಕಾಯುಕ್ತ ಕಚೇರಿಯಲ್ಲಿ ಮಾಧ್ಯಮಗೋಷ್ಠಿ ನಡೆಸಿದ ಅವರು, ತಾವು ಹುದ್ದೆಯಿಂದ ಹಿಂದೆ ಸರಿಯುವುದಾಗಿ ತಿಳಿಸಿದ್ದಾರೆ.
ಸಂಸ್ಥೆಯನ್ನು ಬಲಪಡಿಸಲು ಸಹಕರಿಸಿದವರನ್ನು ಈ ಸಂದರ್ಭ ಸ್ಮರಿಸಿದ ವಿಶ್ವನಾಥ್ ಶೆಟ್ಟಿ, ಯಾವ ಕೆಲಸದಲ್ಲಿಯೂ ನನಗೆ ಒತ್ತಡ ಬಂದಿಲ್ಲ. ಎಲ್ಲ ಕೆಲಸವನ್ನು ತ್ವರಿತ ಹಾಗೂ ದಕ್ಷತೆಯಿಂದ ಮಾಡಿದ್ದೇನೆ. ಲೋಕಾಯುಕ್ತಕ್ಕೆ ಅಧಿಕಾರ ಮೊಟಕುಗೊಳಿಸಿದ ಬಗ್ಗೆ ಈ ಹುದ್ದೆ ಅಲಂಕರಿಸುವ ಮುಂಚೆಯೇ ಗೊತ್ತಿತ್ತು ಎಂದು ಹೇಳಿದ್ದಾರೆ. ತಮ್ಮ ಅವಧಿಯಲ್ಲಾದ ಕಾರ್ಯಗಳು, ಪ್ರಕರಣಗಳ ತನಿಖೆ, ವಿವಿಧ ಪ್ರಕರಣಗಳ ತನಿಖಾ ಹಂತಗಳ ಬಗ್ಗೆ ಪಿ.ವಿಶ್ವನಾಥ್ ಶೆಟ್ಟಿ ಮಾಹಿತಿ ಹಂಚಿಕೊಂಡರು.
ಪ್ರಕರಣಗಳನ್ನು ಭೇದಿಸಿದ ಬಗ್ಗೆ ಮಾತನಾಡಿದ ವಿಶ್ವನಾಥ್ ಶೆಟ್ಟಿ ಲೋಕಾಯುಕ್ತಕ್ಕೆ ಮೊದಲಿನಂತೆ ಹೆಚ್ಚಿನ ಅಧಿಕಾರ ನೀಡಿ:ಜನರ ಹಿತದೃಷ್ಟಿಯಿಂದ ರಾಜ್ಯದ ಲೋಕಾಯುಕ್ತಕ್ಕೆ ಮೊದಲಿನಂತೆ ಹೆಚ್ಚಿನ ಅಧಿಕಾರ ಬೇಕು ಎಂದು ಲೋಕಾಯುಕ್ತ ಸ್ಥಾನದಿಂದ ನಿವೃತ್ತಿಯಾಗುತ್ತಿರುವ ನ್ಯಾಯಮೂರ್ತಿ ವಿಶ್ವನಾಥ್ ಶೆಟ್ಟಿ ಆಗ್ರಹ ಮಾಡಿದ್ದಾರೆ.
ಭ್ರಷ್ಟಾಚಾರ ನಿಗ್ರಹ ದಳ ಸರ್ಕಾರದ ಅಧೀನದಲ್ಲಿರುವ ಸಂಸ್ಥೆ. ಆದರೆ, ಸ್ವಾಯತ್ತ ಸಂಸ್ಥೆಯಾದ ಲೋಕಾಯುಕ್ತಕ್ಕೆ ಹೆಚ್ಚಿನ ಅಧಿಕಾರ ಕೊಟ್ಟರೆ ಸೂಕ್ತ. ಲೋಕಾಯುಕ್ತ ನ್ಯಾಯಮೂರ್ತಿಯಾಗಿ ಪ್ರಕರಣಗಳ ಇತ್ಯರ್ಥ ಮತ್ತು ದಕ್ಷತೆಯಿಂದ ಕೆಲಸ ಮಾಡಲು ಪ್ರಯತ್ನಿಸಿರುವ ಬಗ್ಗೆ ಸಮಾಧಾನವಿದೆ. ನನ್ನ ಅವಧಿಯಲ್ಲಿ ಯಾವುದೇ ಒತ್ತಡ ಬಂದಿಲ್ಲ. ಭ್ರಷ್ಟಾಚಾರ ನಿಗ್ರಹ ದಳ(ಎಸಿಬಿ) ರಚನೆಯಾದ ನಂತರ ಲೋಕಾಯುಕ್ತ ಅಧಿಕಾರ ಕುಂಠಿತವಾಗಿದೆ. ಆದಾಯಕ್ಕಿಂತ ಹೆಚ್ಚು ಸಂಪತ್ತು(ಅಸ್ತಿ) ಹೊಂದಿರುವ, ಲಂಚ ಸ್ವೀಕರಿಸುವಾಗ ದಾಳಿ ಮಾಡುವ ಅಧಿಕಾರ ಇತ್ತು. ಅದು ಸಹ ಕುಠಿತವಾಗಿದೆ. ಈ ಸಂಬಂಧ ರಿಟ್ ಅರ್ಜಿ ಹೈಕೋರ್ಟ್‌ನಲ್ಲಿದ್ದು, ಅದಿನ್ನೂ ಇತ್ಯರ್ಥವಾಗಿಲ್ಲ ಎಂಬುದು ಬೇಸರದ ಸಂಗತಿ ಎಂದು ಹೇಳಿದರು.
ಲೋಕಾಯುಕ್ತರ ಅಧಿಕಾರದ ಬಗ್ಗೆ ಮಾತು ಇಲ್ಲೊಮ್ಮೆ ನೋಡಿ: ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ
ಪ್ರಾಸಿಕ್ಯೂಶನ್ ಸಂಬಂಧಿಸಿದಂತೆ ಶಿಫಾರಸ್ಸು ಮಾಡಲಾದ 26 ಪ್ರಕರಣಗಳು ತಿರಸ್ಕೃತ:ಪ್ರಾಸಿಕ್ಯೂಶನ್ ಸಂಬಂಧಿಸಿದಂತೆ ಶಿಫಾರಸ್ಸು ಮಾಡಲಾದ 26 ಪ್ರಕರಣಗಳು ತಿರಸ್ಕೃತವಾಗಿದೆ. 10 ಕ್ಕೆ ಪ್ರತಿಕ್ರಿಯೆ ಬಂದಿಲ್ಲ. ನಗರ ಪಾಲಿಕೆಗಳ ಸದಸ್ಯರ ವಿರುದ್ಧ ಆರೋಪಗಳು ಕಂಡು ಬಂದಾಗ ಅವರನ್ನು ಸದಸ್ಯತ್ವ, ಅಧ್ಯಕ್ಷ ಅಥವಾ ಉಪಾಧ್ಯಕ್ಷ ಸ್ಥಾನದಿಂದ ಮತ್ತು ಮುಂದಿನ 6 ವರ್ಷಗಳ ಅವಧಿಗೆ ಸದಸ್ಯತ್ವ ಸ್ಥಾನಕ್ಕೆ ಸ್ಪರ್ಧಿಸದಂತೆ ಅನರ್ಹಗೊಳಿಸಲು ಕರ್ನಾಟಕ ನಗರ ಪಾಲಿಕೆಗಳ ಕಾಯ್ದೆ 1964 ಮತ್ತು ನಾನಗರ ಪಾಲಿಕೆಗಳ ಕಾಯ್ದೆ 1974ಕ್ಕೆ ತಿದ್ದುಪಡಿ ತರಲು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದರು.
ಲೋಕಾಯುಕ್ತರನ್ನು ನೇಮಕ ಮಾಡುವಾಗ ಹೆಚ್ಚಿನ ಜಾಗೃತಿ ಅವಶ್ಯಕ ಎಂದ ಲೋಕಾಯುಕ್ತ ನ್ಯಾಯಮೂರ್ತಿ ವಿಶ್ವನಾಥ್ ಶೆಟ್ಟಿ ಖಾಲಿ ಹುದ್ದೆಗಳ ಭರ್ತಿಗೆ ಕ್ರಮ:ಲೋಕಾಯುಕ್ತರಾಗಿ ಅಧಿಕಾರ ವಹಿಸಿಕೊಂಡ ನಂತರ ಖಾಲಿ ಹುದ್ದೆಗಳ ಭರ್ತಿಗೆ ಕ್ರಮ ಕೈಗೊಳ್ಳಲಾಗಿದೆ. 2017ರ ಜನವರಿ 28ರಿಂದ ಲೋಕಾಯುಕ್ತ ಮತ್ತು ಉಪ ಲೋಕಾಯುಕ್ತರ ವ್ಯಾಪ್ತಿಯಲ್ಲಿ ಇದ್ದ 20,199 ಪ್ರಕರಣಗಳ ಪೈಕಿ 3,677 ಪ್ರಕರಣಗಳು ಇತ್ಯರ್ಥವಾಗಿದೆ. 15 ವರ್ಷಗಳಿಗಿಂತಲೂ ಹೆಚ್ಚು ಕಾಲದಿಂದ ಇದ್ದ ಪ್ರಕರಣಗಳನ್ನು ವಿಲೇವಾರಿಗೆ ವಿಚಾರಣಾಧಿಕಾರಿಗಳ ಸಂಖ್ಯೆಯನ್ನು ಹೆಚ್ಚಿಸಲಾಯಿತು. ಪ್ರಸ್ತುತ 2003 ಪ್ರಕರಣಗಳು, 2430 ವಿಚಾರ ಪಕರಣಗಳು ಬಾಕಿ ಇದೆ. 7202 ದೂರು ಪ್ರಕರಣಗಳು 115 ವಿಚಾರಣಾ ಪ್ರಕರಣವನ್ನು ವಿಲೇವಾರಿ ಮಾಡಲಾಗಿದೆ. 304 ಸ್ವಯಂ ಪ್ರೇರಿತ ಪ್ರಕರಣ ದಾಖಲು ಮಾಡಿ ಸಾರ್ವಜನಿಕರ ಕುಂದುಕೊರತೆ ನಿವಾರಣೆ ಮಾಡಲಾಗಿದೆ ಎಂದು ಮಾಹಿತಿ ನೀಡಿದರು.
ಲೋಕಾಯುಕ್ತ ಸಂಸ್ಥೆಯ ಅಧಿಕಾರ ಕುಂಠಿತವಾಗಿದೆ ಬಹಳಷ್ಟು ಪಾರದರ್ಶಕತೆ:ಹೊರಗುತ್ತಿಗೆ ನೌಕರರ ಇಎಸ್ಐ, ಪಿಎಫ್ ಸೌಲಭ್ಯಗಳನ್ನು ಒದಗಿಸಲು ಕ್ರಮ ಕೈಗೊಳ್ಳಲಾಗಿದೆ. 2015ನೇ ಇಸವಿಯಿಂದ ರಾಜ್ಯದಲ್ಲಿ ಕಾಣೆಯಾದ ಮಕ್ಕಳ ಮತ್ತೆ ಮತ್ತು ಪುನರ್ವಸತಿಗೆ ಮಾಡಿದ ಶಿಫಾರಸಿನಲ್ಲಿ ಬಹಳಷ್ಟು ಪ್ರಗತಿ ಸಾಧಿಸಲಾಗಿದೆ. ಸಂಸ್ಥೆಯ ಕಾರ್ಯನಿರ್ವಹಣೆಯಲ್ಲಿ ಬಹಳಷ್ಟು ಪಾರದರ್ಶಕತೆ ತಂದಿದ್ದೇವೆ. ಸಮಗ್ರ ಮಾಹಿತಿ ವೆಬ್ಸೈಟ್ ಸಾಮಾಜಿಕ ಜಾಲತಾಣದ ಮೂಲಕ ನೀಡಲಾಗುತ್ತಿದೆ. ಕೆರೆಗಳ ಅಭಿವೃದ್ಧಿಗೆ ನಿರಂತರ ಕ್ರಮ ಮೇಲ್ವಿಚಾರಣೆ ಮಾಡಲಾಗುತ್ತಿದೆ. ಸರ್ಕಾರಿ ನೌಕರರು ಕೊನೆಯ ಕಾರ್ಯಾವಧಿಯಲ್ಲಿ ದುರ್ನಡತೆಗಳನ್ನು ಮಾಡಿ ಶಿಸ್ತು ಕ್ರಮದಿಂದ ತಪ್ಪಿಸಿಕೊಳ್ಳುವ ಉದಾಹರಣೆಗಳನ್ನು ಪರಿಗಣಿಸಿ ಕರ್ನಾಟಕ ನಾಗರೀಕ ಸೇವಾ ನಿಯಮ 214ಕ್ಕೆ ತಿದ್ದುಪಡಿ ತರಲು ಸರ್ಕಾರಕ್ಕೆ ಪ್ರಸ್ತಾವನೆ ಕಳುಹಿಸಲಾಗಿದೆ. ಎರಡು ವರ್ಷಗಳ ಕೋವಿಡ್ ಅವಧಿಯಲ್ಲಿ ಗೃಹ ಕಚೇರಿಯಿಂದಲೇ ಕರ್ತವ್ಯ ನಿರ್ವಹಿಸಲಾಗಿದೆ ಎಂದು ಹೇಳಿದರು.
ಇದನ್ನೂ ಓದಿ:ವರಿಷ್ಠರು ಹೇಳಿದಾಗ ಸಂಪುಟ ವಿಸ್ತರಣೆ, ಪಕ್ಷ ಹೇಳಿದಾಗ ನಿಗಮ ಮಂಡಳಿ ನೇಮಕಾತಿ : ಸಿಎಂ ಬೊಮ್ಮಾಯಿ