ಕರ್ನಾಟಕ

karnataka

ETV Bharat / city

ಡಿ.18ರಂದು ಬೃಹತ್ ಲೋಕ ಅದಾಲತ್: ಸೇವೆ ಬಳಸಿಕೊಳ್ಳಲು ಮನವಿ

ಲೋಕ ಅದಾಲತ್​ನಲ್ಲಿ ಹೆಚ್ಚಿನ ಪ್ರಕರಣಗಳನ್ನು ಇತ್ಯರ್ಥಪಡಿಸುವ ಸಂಬಂಧ ಕೆಎಸ್ಎಲ್ಎಸ್ಎ ಕಾರ್ಯನಿರ್ವಾಹಕ ಅಧ್ಯಕ್ಷರಾದ ನ್ಯಾಯಮೂರ್ತಿ ಬಿ.ವೀರಪ್ಪ ಈಗಾಗಲೇ ಹಲವು ಇಲಾಖೆ ಮತ್ತು ಪ್ರಾಧಿಕಾರಗಳ ಜೊತೆ ಚರ್ಚಿಸಿದ್ದಾರೆ.

By

Published : Dec 8, 2021, 8:12 AM IST

Loka adalat  in  Karnataka courts  from KSLSA
ಡಿ.18ರಂದು ಬೃಹತ್ ಲೋಕ ಅದಾಲತ್ : ಸೇವೆ ಬಳಸಿಕೊಳ್ಳಲು ಕೆಎಸ್ಎಲ್ಎಸ್ಎ ಮನವಿ

ಬೆಂಗಳೂರು:ಕರ್ನಾಟಕ ರಾಜ್ಯ ಕಾನೂನು ಸೇವಾ ಪ್ರಾಧಿಕಾರ ಇದೇ ಡಿಸೆಂಬರ್ 18ರಂದು ರಾಜ್ಯದ ಎಲ್ಲಾ ನ್ಯಾಯಾಲಯಗಳಲ್ಲಿ ವರ್ಷದ ಕೊನೆಯ ಲೋಕ ಅದಾಲತ್ ಏರ್ಪಡಿಸಿದ್ದು, ಈ ಸೇವೆ ಬಳಸಿಕೊಳ್ಳುವಂತೆ ವ್ಯಾಜ್ಯಗಳ ಪಕ್ಷಗಾರರಿಗೆ ಮನವಿ ಮಾಡಿದೆ.

ಲೋಕ ಅದಾಲತ್​​ನಲ್ಲಿ ಮೋಟಾರು ವಾಹನ ಪ್ರಕರಣಗಳು, ಅಮಲ್ಜಾರಿ ಪ್ರಕರಣಗಳು, ಪಾರ್ಟಿಷನ್ ಪ್ರಕರಣಗಳು, ಇತರೆ ಸಿವಿಲ್ ವ್ಯಾಜ್ಯಗಳು, ಎಜೆಕ್ಟ್​​ಮೆಂಟ್ ಪ್ರಕರಣಗಳು, ಭೂಸ್ವಾಧೀನ ಅಮಲ್ಜಾರಿ ಪ್ರಕರಣಗಳು, ಕ್ರಿಮಿನಲ್ ಕಾಂಪೌಂಡೇಬಲ್ ಪ್ರಕರಣಗಳನ್ನು ಬಗೆಹರಿಸಿಕೊಳ್ಳಲು ಅವಕಾಶ ನೀಡಲಾಗಿದೆ.

ಲೋಕ ಅದಾಲತ್​ನಲ್ಲಿ ಹೆಚ್ಚಿನ ಪ್ರಕರಣಗಳನ್ನು ಇತ್ಯರ್ಥಪಡಿಸುವ ಸಂಬಂಧ ಕೆಎಸ್ಎಲ್ಎಸ್ಎ ಕಾರ್ಯನಿರ್ವಾಹಕ ಅಧ್ಯಕ್ಷರಾದ ನ್ಯಾಯಮೂರ್ತಿ ಬಿ. ವೀರಪ್ಪ ಅವರು ಈಗಾಗಲೇ ಇನ್ಶ್ಯೂರೆನ್ಸ್ ಕಂಪನಿಗಳು, ಬಿಬಿಎಂಪಿ, ಬಿಡಬ್ಲ್ಯೂಎಸ್ಎಸ್ ಬಿ, ಕೆಪಿಟಿಸಿಎಲ್, ಬೆಸ್ಕಾಂ, ಕಂದಾಯ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳು ಹಾಗೂ ಪ್ರಾಧಿಕಾರಗಳ ಜತೆ ಸಭೆ ನಡೆಸಿದ್ದಾರೆ.

ಈ ಬಾರಿ ಗ್ರಾಹಕರ ವೇದಿಕೆ, ಸಾಲ ವಸೂಲಾತಿ ನ್ಯಾಯಮಂಡಳಿ, ಕಾಯಂ ಜನತಾ ನ್ಯಾಯಾಲಯದಲ್ಲಿನ ಪ್ರಕರಣಗಳನ್ನು ಕೂಡ ಈ ಬಾರಿಯ ಲೋಕ ಅದಾಲತ್‌ನಲ್ಲಿ ಇತ್ಯರ್ಥಪಡಿಸಲು ನಿರ್ಧರಿಸಲಾಗಿದೆ. ಆದ್ದರಿಂದ ವ್ಯಾಜ್ಯಗಳ ಪಕ್ಷಗಾರರು ಡಿ. 18ರವರೆಗೂ ತಮ್ಮ ಪ್ರಕರಣಗಳನ್ನು ಇತ್ಯರ್ಥಪಡಿಸಿಕೊಳ್ಳಲು ಅರ್ಜಿ ಸಲ್ಲಿಸಬಹುದಾಗಿದೆ ಎಂದು ಕೆಎಸ್ಎಲ್ಎಸ್ಎ ಕಾರ್ಯನಿರ್ವಾಹಕ ಅಧ್ಯಕ್ಷರಾದ ನ್ಯಾ. ಬಿ. ವೀರಪ್ಪ ತಿಳಿಸಿದ್ದಾರೆ.

ಇದನ್ನೂ ಓದಿ:ನನಗೆ ಕಾಂಗ್ರೆಸ್ ನಾಯಕರ ಸರ್ಟಿಫಿಕೇಟ್ ಬೇಕಿಲ್ಲ, ಜನರ ಸರ್ಟಿಫಿಕೇಟ್ ಸಾಕು : ಸಿಎಂ ಬೊಮ್ಮಾಯಿ

ABOUT THE AUTHOR

...view details