ಬೆಂಗಳೂರು: ಕೊರೊನಾ ಮಹಾಮಾರಿ ತಡೆಯಲು ಲಾಕ್ ಡೌನ್ ಮಾಡಲಾಗಿದ್ದು, ಸದ್ಯ ಕೊಂಚ ಮಟ್ಟಿಗೆ ಸಡಿಲಿಕೆ ನೀಡಲಾಗಿದೆ.
ಬೆಂಗಳೂರಿನಲ್ಲಿ ಲಾಕ್ ಡೌನ್ ಸಡಿಲಿಕೆ, ನಿಷೇಧಾಜ್ಞೆ ಮುಂದುವರಿಕೆ: ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ - 144 ಸೆಕ್ಷನ್ ಮುಂದುವರಿಕೆ
ಬೆಂಗಳೂರು ನಗರದಲ್ಲಿ ಲಾಕ್ ಡೌನ್ ಅನ್ನು ಕೊಂಚ ಮಟ್ಟಿಗೆ ಸಡಿಲಿಕೆಗೊಳಿಸಿದ್ದರೂ, ನಿಷೇಧಾಜ್ಞೆ ಮುಂದುವರೆಯಲಿದೆ.

ನಗರದಲ್ಲಿ ಲಾಕ್ ಡೌನ್ ಸಡಿಲಿಕೆ, 144 ಸೆಕ್ಷನ್ ಮುಂದುವರಿಕೆ: ಭಾಸ್ಕರ್ ರಾವ್
ಹೀಗಾಗಿ ಇಂದಿನಿಂದ ಮತ್ತೆ ವಾಹನ ಓಡಾಟ ಹಾಗೂ ಜನರ ಓಡಾಟ ಶುರುವಾಗಿದ್ದು, ಸಹಜ ಸ್ಥಿತಿಯತ್ತ ಜನ ಜೀವನ ಸಾಗುತ್ತಿದೆ. ಆದರೆ ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್, ಮೇ 31 ರ ವರೆಗೆ ನಿಷೇಧಾಜ್ಞೆ ಜಾರಿಯಲ್ಲಿರುತ್ತದೆ ಎಂದು ಆದೇಶ ನೀಡಿದ್ದಾರೆ.
ಹೀಗಾಗಿ ಜನ ಗುಂಪು ಸೇರುವಂತಿಲ್ಲ. ಪೊಲೀಸರ ನಿಯಮಗಳನ್ನ ಅಲ್ಲಗಳೆಯುವಂತಿಲ್ಲ ಎಂದು ಸೂಚಿಸಿದ್ದಾರೆ.