ಕರ್ನಾಟಕ

karnataka

ETV Bharat / city

ಥೂ..! ಯಾಕಾದ್ರೂ ಮದುವೆ ಆಗ್ತಿದಿನೋ... ನವ ಜೋಡಿಗೆ ಲಾಕ್​ಡೌನ್​ ಸಂಕಷ್ಟ

'ಎಲ್ಲೆಲ್ಲೂ ಚೆಕಿಂಗ್​​​ಗೆ, ಗಾಡಿ ನಿಲ್ಲಿಸಿ ನನ್ನದೇ ಮದುವೆಗೆ ಮುಹೂರ್ತಕ್ಕೆ ಸರಿಯಾಗಿ ಸೇರಲು ಆಗುತ್ತಿಲ್ಲ. ಮದುವೆ ಮಾಡೋರಿಗಷ್ಟೇ ಗೊತ್ತು ಈ ಲಾಕ್‌ಡೌನ್ ಕಷ್ಟ. ಎಲ್ಲಿ ನೋಡಿದ್ರು ಚೆಕಿಂಗ್ ಚೆಕಿಂಗ್​​​. ಎಲ್ರಿಗೂ ಉತ್ತರ ಕೊಟ್ಟು ಸಾಕಾಯ್ತು. ಯಾಕಾದ್ರೂ ಮದುವೆ ಆಗ್ತಿದ್ದೀವಿ ಅನಿಸುತ್ತೆ. ಯಾಕ್ ಕೇಳ್ತೀರಾ ನಮ್ ಕಷ್ಟ' ಅಂತ ಪೊಲೀಸ್​ ತಪಾಸಣೆಯಲ್ಲಿದ್ದ ಮದುಮಗ ತನ್ನ ಕಥೆಯನ್ನ ಹೇಳಿದ ಪರಿ ಇದು.

lockdown-effect-on-marriage
ನವ ಜೋಡಿಗೆ ಲಾಕ್​ಡೌನ್​ ಸಂಕಷ್ಟ

By

Published : May 22, 2021, 6:25 PM IST

ಬೆಂಗಳೂರು: ಕೊರೊನಾ‌ಗೆ ಬ್ರೇಕ್ ಹಾಕಲು ರಾಜ್ಯ ಸರ್ಕಾರ ಕಟ್ಟುನಿಟ್ಟಿನ ಲಾಕ್‌‌ಡೌನ್ ಘೋಷಿಸಿದೆ. ಜೊತೆಗೆ ನಿನ್ನೆಯಷ್ಟೆ ಲಾಕ್‌ಡೌನ್ ದಿನಗಳನ್ನ ವಿಸ್ತರಿಸಿದೆ. ಆದ್ರೆ ಮದುವೆ ಸೀಸನ್‌ನಲ್ಲಿ ಲಾಕ್‌ಡೌನ್ ಘೋಷಣೆ ಮಾಡಿರುವುದು ನವ ವಧು-ವರರಿಗೆ ಸಂಕಷ್ಟ ಎದುರಾಗಿದೆ.

ಕೋವಿಡ್​ ಸೋಂಕಿಗೆ ಕಡಿವಾಣ ಹಾಕಲು ಸರ್ಕಾರ ಲಾಕ್​ಡೌನ್​ ಘೋಷಿಸಿದೆ. ಈ ಮಧ್ಯೆ ಮದುವೆ ಮಾಡಿಕೊಳ್ಳಲು ಅನುಮತಿ ನೀಡಿದ್ದು, ಮದುವೆಯಲ್ಲಿ 40 ಜನ ಭಾಗವಹಿಸಲು ಅವಕಾಶ ನೀಡಿದೆ. ಅಲ್ಲದೆ ಪಾಸ್​​ ಕೂಡಾ ಕಡ್ಡಾಯ ಮಾಡಿದೆ.

ನವ ಜೋಡಿಗೆ ಲಾಕ್​ಡೌನ್​ ಸಂಕಷ್ಟ

ಆದ್ರೆ ತುಂಬು ಸಂಸಾರದ ಜೊತೆ ಬಂಧು-ಬಳಗ ಸೇರಿ ಸಂತೋಷದಿಂದ ಆಚರಿಸಬಹುದಾದ ವಿವಾಹ ಮಹೋತ್ಸವ ಇಂದು ನಾಲ್ಕಾರು ಜನರ ಮಧ್ಯೆ ಸರಳವಾಗಿ ಮುಗಿಸುವಂತಾಗಿದೆ. ಅದ್ರಲ್ಲೂ, ಲಾಕ್​ಡೌನ್​ ವಧು ವರರ ಪಾಲಿಗೆ ಕಂಟಕಪ್ರಾಯವಾಗಿದ್ದು, ಮನೆಯಿಂದ ಛತ್ರ ಸೇರಿಕೊಳ್ಳಲು ವಧು ವರರು ಹರಸಾಹಸ ಮಾಡಬೇಕಾಗಿದೆ.

'ಎಲ್ಲೆಲ್ಲೂ ಚೆಕಿಂಗ್​​​ಗೆ, ಗಾಡಿ ನಿಲ್ಲಿಸಿ ನನ್ನದೇ ಮದುವೆಗೆ ಮುಹೂರ್ತಕ್ಕೆ ಸರಿಯಾಗಿ ಸೇರಲು ಆಗುತ್ತಿಲ್ಲ. ಮದುವೆ ಮಾಡೋರಿಗಷ್ಟೇ ಗೊತ್ತು ಈ ಲಾಕ್‌ಡೌನ್ ಕಷ್ಟ. ಎಲ್ಲಿ ನೋಡಿದ್ರು ಚೆಕಿಂಗ್ ಚೆಕಿಂಗ್​​​. ಎಲ್ರಿಗೂ ಉತ್ತರ ಕೊಟ್ಟು ಸಾಕಾಯ್ತು. ಯಾಕಾದ್ರೂ ಮದುವೆ ಆಗ್ತಿದ್ದೀವಿ ಅನಿಸುತ್ತೆ. ಯಾಕ್ ಕೇಳ್ತೀರಾ ನಮ್ ಕಷ್ಟ' ಅಂತ ಪೊಲೀಸ್​ ತಪಾಸಣೆಯಲ್ಲಿದ್ದ ಮದುಮಗ ತನ್ನ ಕಥೆಯನ್ನ ಹೇಳಿದ ಪರಿ ಇದು.

ಒಟ್ಟಾರೆಯಾಗಿ, ಅಂದುಕೊಂಡಿದ್ದು ಒಂದು ಆದ್ರೆ ಈ ಕೋವಿಡ್​ ತಂದಿಟ್ಟಿದ್ದು ಇನ್ನೊಂದು. ಒಂದನೇ ಅಲೆಯಲ್ಲಿ ಎಲ್ಲಾ ಮುಗೀತು ಅಂದುಕೊಂಡ್ರೆ ಎರಡನೇ ಅಲೆಗೆ ತಲೆ ತಿರುಗುವಂತೆ ಮಾಡಿದೆ.. ಇನ್ನೂ ಮುಂದೆ ಏನೇನು ಬಾಕಿ ಇದೆ ಅಂತ ಕಾಯ್ದು ನೋಡ್ಬೇಕು..

ABOUT THE AUTHOR

...view details