ಕರ್ನಾಟಕ

karnataka

ETV Bharat / city

ವಾರದ ಲಾಕ್​ಡೌನ್​ಗೆ ಸಹಕರಿಸುವಂತೆ 6 ಭಾಷೆಗಳಲ್ಲಿ ಪೊಲೀಸರ ಮನವಿ - Bangalore lockdown

ಮನೆಯಲ್ಲೇ ಇರಿ, ಕ್ಷೇಮವಾಗಿರಿ. ಬೆಂಗಳೂರು ಲಾಕ್​ಡೌನ್ ಯಶಸ್ವಿ ಮಾಡಿ ಪೊಲೀಸ್ ಇಲಾಖೆ ಜೊತೆ ಸಹಕಾರ ನೀಡಿ ಎಂದು ಕನ್ನಡ, ತೆಲುಗು, ತಮಿಳು, ಮಲಯಾಳಂ, ಹಿಂದಿ ಹಾಗೂ ಇಂಗ್ಲಿಷ್ ಭಾಷೆಗಳಲ್ಲಿ ಬೆಂಗಳೂರು ಪೊಲೀಸರು ಮನವಿ ಮಾಡಿದ್ದಾರೆ.

Bangalore
6 ಭಾಷೆಗಳಲ್ಲಿ ಪೊಲೀಸರ ಮನವಿ

By

Published : Jul 14, 2020, 8:37 PM IST

ಬೆಂಗಳೂರು: ಕೊರೊನಾ‌‌ ಮಹಾಮಾರಿ ಇರುವ ಹಿನ್ನೆಲೆಯಲ್ಲಿ ಇಂದು ರಾತ್ರಿಯಿಂದ ಸಿಲಿಕಾನ್ ಸಿಟಿ ಸಂಪೂರ್ಣವಾಗಿ ಸ್ತಬ್ಧವಾಗಲಿದೆ. ಹೀಗಾಗಿ ಉತ್ತರ ವಿಭಾಗ ಪೊಲೀಸರು ವಿನೂತನ ಪ್ರಯೋಗ‌ ಮಾಡಿ ಜನರಲ್ಲಿ ‌ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ವಿಡಿಯೋ ಮುಖಾಂತರ ಲಾಕ್​ಡೌನ್ ಕುರಿತು ಸಂದೇಶ ರವಾನೆ ಮಾಡಿದ್ದಾರೆ.

6 ಭಾಷೆಗಳಲ್ಲಿ ಪೊಲೀಸರ ಮನವಿ

ವಿಡಿಯೋ ಮುಖಾಂತರ ಉತ್ತರ ವಿಭಾಗ ಡಿಸಿಪಿ ಶಶಿಕುಮಾರ್ ಹಾಗೂ ಎಸಿಪಿಗಳು ಮಾತನಾಡಿ, ಇಂದು ರಾತ್ರಿ 8 ಗಂಟೆಯಿಂದ 22ರ ಮುಂಜಾನೆ 5 ಗಂಟೆಯವರೆಗೆ ಬೆಂಗಳೂರು ಹಾಗೂ ಬೆಂಗಳೂರು ಗ್ರಾಮಾಂತರ ಸಂಪೂರ್ಣವಾಗಿ ಸ್ತಬ್ಧವಾಗಲಿದೆ.

ಹೀಗಾಗಿ ಎಲ್ಲಾ ಸಿಲಿಕಾನ್ ಸಿಟಿ ಜನ ವಿನಾಕಾರಣ ಮನೆ ಹೊರಗಡೆ ಹಾಗೂ ವಾಹನಗಳಲ್ಲಿ ಸುತ್ತಾಡದೆ ಮನೆಯಲ್ಲಿ ಇರಬೇಕು. ಒಂದು ವೇಳೆ ತೀರಾ ಅನಿವಾರ್ಯವಿದ್ದಲ್ಲಿ ಮಾತ್ರ ಹೊರ ಬಂದು, ಸರ್ಕಾರ ಹಾಗೂ ಪೊಲೀಸ್ ಇಲಾಖೆ ನೀಡಿರುವ ಸೂಚನೆ ಪಾಲಿಸಿ. ಲಾಕ್​ಡೌನ್ ಯಶಸ್ವಿ ಮಾಡಿ. ಮನೆಯಲ್ಲೇ ಇರಿ, ಕ್ಷೇಮವಾಗಿರಿ. ಪೊಲೀಸ್ ಇಲಾಖೆ ಜೊತೆ ಸಹಕಾರ ನೀಡಿ ಎಂದು ಕನ್ನಡ, ತೆಲುಗು, ತಮಿಳು, ಮಲಯಾಳಂ, ಹಿಂದಿ ಹಾಗೂ ಇಂಗ್ಲಿಷ್ ಭಾಷೆಯಲ್ಲಿ ಮನವಿ ಮಾಡಿದ್ದಾರೆ.

ABOUT THE AUTHOR

...view details