ಕರ್ನಾಟಕ

karnataka

ETV Bharat / city

''ಬೆಂಗಳೂರನ್ನೇ ನಂಬ್ಕೊಂಡು ಬಂದಿದೀವಿ, ರಾತ್ರಿ ಫುಡ್​ ಡೆಲಿವರಿಗೆ ಅವಕಾಶ ಕೊಡಿ''

ಲಾಕ್​ಡೌನ್​ನಿಂದ ಸಾಕಷ್ಟು ತೊಂದರೆಯಾಗಿದ್ದು, ರಾತ್ರಿ ವೇಳೆಯೂ ಫುಡ್ ಡೆಲಿವರಿಗೆ ಅವಕಾಶ ನೀಡಬೇಕೆಂದು ಆನ್​ಲೈನ್​ ಫುಡ್​ ಡೆಲಿವರಿ ಬಾಯ್ಸ್​ ಮನವಿ ಮಾಡಿದ್ದಾರೆ.

delivery boys
ಆನ್​ಲೈನ್​ ಫುಡ್​ ಡೆಲಿವರಿ ಬಾಯ್ಸ್​

By

Published : Jul 15, 2020, 2:10 PM IST

ಬೆಂಗಳೂರು: ಸಿಲಿಕಾನ್​ ಸಿಟಿಯಲ್ಲಿ ಪ್ರತಿದಿನ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದೆ. ಹೀಗಾಗಿ ಸರ್ಕಾರ ಮತ್ತೆ ಲಾಕ್​​ಡೌನ್​ನಂತಹ ಕಠಿಣ ಕ್ರಮ ಕೈಗೊಂಡಿದೆ. ಆದರೂ ಆನ್​ಲೈನ್ ಡೆಲಿವರಿ ಬಾಯ್ಸ್​ಗೆ ಕೊರೊನಾ ಲಾಕ್​ಡೌನ್ ವೇಳೆ ಓಡಾಟಕ್ಕೆ ವಿನಾಯಿತಿ ನೀಡಲಾಗಿದೆ.

ಈಗ ರಾತ್ರಿ 8 ಗಂಟೆಯ ಮುಂಚೆ ಆನ್ ಲೈನ್ ಬುಕ್ ಮಾಡಿದ ಗ್ರಾಹಕರ ಮನೆಗೆ ಫುಡ್ ಡೆಲಿವರಿ ಮಾಡುವ ಕೆಲಸವನ್ನು ಮುಕ್ತಾಯ ಮಾಡಬೇಕೆಂದು ಆದೇಶ ಹೊರಡಿಸಲಾಗಿದೆ. ಈ ವೇಳೆ 'ಈಟಿವಿ ಭಾರತ' ಡೆಲಿವರಿ ಬಾಯ್ಸ್​ ಅನ್ನು ಮಾತನಾಡಿಸಿದಾಗ ಅವರು ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ.

ಆನ್​ಲೈನ್​ ಫುಡ್​ ಡೆಲಿವರಿ ಬಾಯ್ಸ್​

ಬಹುಪಾಲು ರಸ್ತೆಗಳನ್ನು ಬ್ಯಾರಿಕೇಡ್ ಹಾಕಿ ಮುಚ್ಚಿರುವ ಕಾರಣದಿಂದ ಬೇರೆ ಬೇರೆ ರಸ್ತೆಗಳ ಮೂಲಕ ಮನೆಗಳಿಗೆ ಫುಡ್​ ಡೆಲಿವರಿ ಮಾಡಬೇಕಾದ ಅನಿವಾರ್ಯತೆ ಡೆಲಿವರಿ ಬಾಯ್​ಗಳಿಗೆ ಎದುರಾಗಿದೆ.

ಡೆಲಿವರಿ ಬಾಯ್​​ಗಳಿಗೆ ಓಡಾಡಲು ಪಾಸ್ ನೀಡದ ಕಾರಣ ಫುಡ್ ಡೆಲಿವರಿ ಕಂಪನಿಯ ಉಡುಪು ಅಥವಾ ಬ್ಯಾಗ್​ಗಳ ಮೂಲಕ ಸಂಚರಿಸಬೇಕಿದೆ. ಮೊದಲಿನಷ್ಟು ಫುಡ್​ ಆರ್ಡರ್ ಬರದ ಕಾರಣ ಕೆಲಸವೂ ಅಷ್ಟೇನೂ ಇಲ್ಲವೆಂದು ಡೆಲಿವರಿ ಬಾಯ್ಸ್​ ಅಲವತ್ತುಕೊಂಡಿದ್ದಾರೆ.

ಸಾಮಾನ್ಯವಾಗಿ ಫುಡ್ ಡೆಲಿವರಿ ಹೆಚ್ಚಾಗಿ ರಾತ್ರಿ 8 ರಿಂದಲೇ ಆರಂಭವಾಗುತ್ತದೆ. ಆದ್ರೆ ಸರ್ಕಾರದ ನಿಯಮದ ಪ್ರಕಾರ 8 ಗಂಟೆಯ ಮೇಲೆ ಯಾವುದೇ ಆರ್ಡರ್ ಮಾಡುವಂತಿಲ್ಲ. ಇದರಿಂದ ಕೆಲಸವೂ ಇಲ್ಲದೇ ಆದಾಯವೂ ಬರುತ್ತಿಲ್ಲ. ನಾವು ಬೆಂಗಳೂರನ್ನೇ ನಂಬಿಕೊಂಡಿದ್ದು ಬಂದಿದ್ದು, ದಯವಿಟ್ಟು ರಾತ್ರಿಯೂ ಫುಡ್ ಡೆಲಿವರಿಗೆ ಅವಕಾಶ ಮಾಡಿಕೊಡಿ ಎಂದು ಡೆಲಿವರಿ ಬಾಯ್ಸ್​ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.

ABOUT THE AUTHOR

...view details