ಕರ್ನಾಟಕ

karnataka

ETV Bharat / city

ಸಾಲಮನ್ನಾ ಯೋಜನೆಯಡಿ ಬಾಕಿ ರೈತರ ಸಾಲ ಮನ್ನಾ ಹಣ ಬಿಡುಗಡೆ ಮಾಡಿದ‌ ರಾಜ್ಯ ಸರ್ಕಾರ - ಎಸ್​.ಟಿ.ಸೋಮಶೇಖರ್ ಪತ್ರಿಕಾಹೇಳಿಕೆ

ಸಹಕಾರ ಬ್ಯಾಂಕುಗಳಲ್ಲಿ ರೈತರು ಪಡೆದಿದ್ದ 1 ಲಕ್ಷದವರೆಗಿನ ಸಾಲಮನ್ನಾ ಯೋಜನೆಯಡಿ ಬಾಕಿ ಉಳಿದಿದ್ದ 57,229 ರೈತರ ಸಾಲ ಮನ್ನಾ ಹಣವನ್ನು ರಾಜ್ಯ ಸರ್ಕಾರ ಬಿಡುಗಡೆ ಮಾಡಿದೆ

st somashekar
ಎಸ್​ಟಿ ಸೋಮಶೇಖರ್​

By

Published : Mar 12, 2021, 10:57 PM IST

ಬೆಂಗಳೂರು: ಹಿಂದಿನ ಮೈತ್ರಿ ಸರ್ಕಾರದ ವೇಳೆ ಸಹಕಾರ ಬ್ಯಾಂಕುಗಳಲ್ಲಿ ರೈತರು ಪಡೆದಿದ್ದ 1 ಲಕ್ಷದವರೆಗಿನ ಸಾಲಮನ್ನಾ ಯೋಜನೆಯಡಿ ಬಾಕಿ ಉಳಿದಿದ್ದ 57,229 ರೈತರ ಸಾಲ ಮನ್ನಾ ಹಣವನ್ನು ರಾಜ್ಯ ಸರ್ಕಾರ ಬಿಡುಗಡೆ ಮಾಡಿದೆ. 295 ಕೋಟಿ ರೂ. ಸಾಲಮನ್ನಾ ಬಾಕಿ ಹಣ ಬಿಡುಗಡೆ ಮಾಡಿ ರೈತರಿಗೆ ಬಿಗ್ ರಿಲೀಫ್ ನೀಡಿದೆ.

ಪತ್ರಿಕಾ ಪ್ರಕಟಣೆ

ರಾಜ್ಯದ ರೈತರು ಸಹಕಾರ ಸಂಘ ಅಥವಾ ಬ್ಯಾಂಕುಗಳಿಂದ ಅಲ್ಪಾವಧಿ ಬೆಳೆ ಸಾಲ ಪಡೆದು ದಿನಾಂಕ 10.07.2018ಕ್ಕೆ ಹೊಂದಿರುವ ಹೊರಬಾಕಿಯಲ್ಲಿ ಗರಿಷ್ಟ 1 ಲಕ್ಷ ರೂಪಾಯಿವರೆಗಿನ ಸಾಲದ ಮೊತ್ತವನ್ನು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಬಿಡುಗಡೆಗೊಳಿಸಿದ್ದಾರೆ.

ದಿನಾಂಕ 06.03.2021ರ ಸರ್ಕಾರದ ಆದೇಶದಲ್ಲಿ ಬಾಕಿ ಇರುವ 57,229 ರೈತರಿಗೆ ಅನುದಾನ ಅಡುಗಡೆ ಮಾಡಲು ಆಯವ್ಯಯದಲ್ಲಿ ಲಭ್ಯವಿದ್ದ 260.41 ಕೋಟಿ ರೂಪಾಯಿಗಳನ್ನು ಬಿಡುಗಡೆ ಮಾಡಿ ಅಪೆಕ್ಸ್ ಬ್ಯಾಂಕಿನಲ್ಲಿ ಲಭ್ಯವಿರುವ 34.73 ಕೋಟಿ ರೂಪಾಯಿಗಳನ್ನು ಉಪಯೋಗಿಸಿಕೊಳ್ಳಲು ಅನುಮತಿ ನೀಡಲಾಗಿದೆ.

ಇದನ್ನೂ ಓದಿ:ಕರ್ನಾಟಕ ಹೈಕೋರ್ಟ್​ಗೆ ಹೆಚ್ಚುವರಿ ನ್ಯಾಯಮೂರ್ತಿ ನೇಮಿಸಿದ ರಾಷ್ಟ್ರಪತಿ

ಒಟ್ಟಾರೆ 295.14 ಲಕ್ಷ ರೂಪಾಯಿಗಳನ್ನು ಬಿಡುಗಡೆ ಮಾಡಿ ಸಾಲ ಮನ್ನಾ ಯೋಜನೆಯಲ್ಲಿ ಇದೇ ಆರ್ಥಿಕ ವರ್ಷದಲ್ಲಿ ಮುಕ್ತಾಯಗೊಳಿಸಲು ಬ್ಯಾಂಕಿನ ಮುಖ್ಯ ಕಾರ್ಯ ನಿರ್ವಹಣಾಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಸಹಕಾರ ಸಚಿವ ಎಸ್.ಟಿ ಸೋಮಶೇಖರ್ ಪತ್ರಿಕಾ ಹೇಳಿಕೆ ಮೂಲಕ ತಿಳಿಸಿದ್ದಾರೆ.

ಸರ್ಕಾರ ಆಯವ್ಯಯದಲ್ಲಿ ಸದ್ಯ ಬಿಡುಗಡೆ ಮಾಡಿರುವ 260.41 ಕೋಟಿ ರೂಪಾಯಿಗಳ ಜೊತೆಯಲ್ಲಿ 1 ಲಕ್ಷ ರೂಪಾಯಿಗಳ ಸಾಲಮನ್ನಾ ಯೋಜನೆಯಲ್ಲಿ ಜಮಾ ಆಗಿರುವ ಬಡ್ಡಿ ಮತ್ತು ಸಹಕಾರ ಸಂಘಗಳು ಪಾವತಿಸಿರುವ ಮೊತ್ತ 23.78 ಕೋಟಿ ರೂ. ಮತ್ತು 50,000 ರೂಪಾಯಿಗಳ ಸಾಲಮನ್ನಾ ಯೋಜನೆಯಲ್ಲಿ ಸಹಕಾರ ಸಂಘಗಳು ಜಮಾ ಠೇವಣಿ ಇರಿಸಿದ್ದ ಮೊತ್ತ 10.95 ಕೋಟಿ ರೂಪಾಯಿಗಳನ್ನು ಅವಧಿಪೂರ್ವ ಪಕ್ವಗೊಳಿಸಿ 57,229 ರೈತರ ಉಳಿತಾಯ ಖಾತೆಗಳಿಗೆ 295.14 ಕೋಟಿ ರೂಪಾಯಿಗಳನ್ನು NEFT ಮೂಲಕ ಕೂಡಲೇ ಬಿಡುಗಡೆ ಮಾಡಲು ಸೂಚಿಸಲಾಗಿದೆ.

ಕರ್ನಾಟಕ ರಾಜ್ಯ ಸಹಕಾರ ಅಪೆಕ್ಸ್ ಬ್ಯಾಂಕಿನಲ್ಲಿ ಸಾಲಮನ್ನಾ ಯೋಜನೆಯಲ್ಲಿ ಉಳಿಯುವ ಮೊತ್ತವನ್ನು ಬಡ್ಡಿಯೊಂದಿಗೆ 15 ದಿನಗಳ ಅವಧಿಗೆ ಠೇವಣಿ ನವೀಕರಿಸಲು ಸೂಚಿಸಲಾಗಿದೆ ಎಂದು ಸಚಿವರು ಮಾಹಿತಿ ನೀಡಿದ್ದಾರೆ.

ABOUT THE AUTHOR

...view details