ಕರ್ನಾಟಕ

karnataka

ETV Bharat / city

ಕುಡುಕ ಗಂಡನ ಕತ್ತು ಸೀಳಿದ ಪತ್ನಿಗೆ ಜೀವಾವಧಿ ಶಿಕ್ಷೆ - ಕೊಲೆಗೈದ ಪತ್ನಿ

ನೇಪಾಳದಿಂದ ವಲಸೆ ಬಂದಿದ್ದ ದಂಪತಿ. ಪತಿಯ ಕುಡಿತದ ಕಾಟಕ್ಕೆ ಬೇಸತ್ತು ಕೊಲೆಗೈದ ಪತ್ನಿ. ಬಳಿಕ ತನಿಖೆ ದಿಕ್ಕು ತಪ್ಪಿಸಲು ಹೈಡ್ರಾಮಾ. ಕೊನೆಗೂ ಸಿಕ್ಕಿಬಿದ್ದ ಕೊಲೆಗಾತಿಗೆ ಜೀವಾವಧಿ ಶಿಕ್ಷೆ.

ದಂಪತಿ ಕೆಲಸ ಮಾಡುತ್ತಿದ್ದ ಸ್ಥಳ

By

Published : Apr 4, 2019, 7:21 AM IST

ದೊಡ್ಡಬಳ್ಳಾಪುರ : ಕುಡಿತದ ದಾಸನಾಗಿದ್ದ ಗಂಡನ ಕತ್ತು ಸೀಳಿ ಕೊಲೆಗೈದಿದ್ದಪತ್ನಿಗೆ ಜೀವಾವಧಿ ಶಿಕ್ಷೆಯಾಗಿದೆ.

ಪೂರ್ಣಿಮಾ ಅಲಿಯಾಸ್ಪೂನಿ ಬೋರಾ ಶಿಕ್ಷೆಗೊಳಗಾದ ಮಹಿಳೆ. 2018ರ ಮೇ. 25ರಂದುದೊಡ್ಡಬಳ್ಳಾಪುರದ ಶ್ರವಣೂರು ಗ್ರಾಮದ ಹೊರವಲಯದ ಕೋಳಿ ಫಾರಂನಲ್ಲಿಗಂಡ ಬಿಮಲ್ ಬೊಹರನನ್ನೇ ಪೂರ್ಣಿಮಾ ಕೊಲೆ ಮಾಡಿದ್ದಳು. ಬಳಿಕಯಾರೋ ಅಪರಿಚಿತರು ತನ್ನ ಗಂಡನನ್ನ ಕೊಲೆ ಮಾಡಿರೋದಾಗಿ ಹೇಳಿ ತನಿಖೆಯ ದಿಕ್ಕು ತಪ್ಪಿಸುವ ಯತ್ನ ನಡೆಸಿದ್ದಳು.ಆದರೆ ಪ್ರಕರಣ ದಾಖಲಿಸಿ ತನಿಖೆಗಿಳಿದ ದೊಡ್ಡಬೆಳವಂಗಲ ಪೊಲೀಸರು,ಪ್ರಕರಣ ಬೇಧಿಸಿ ಕೊಲೆಗಾತಿಯ ಪತ್ತೆ ಮಾಡಿದ್ದಾರೆ.

ದಂಪತಿ ಕೆಲಸ ಮಾಡುತ್ತಿದ್ದ ಸ್ಥಳ

4ನೇ ಅಪರ ಜಿಲ್ಲಾ ಸತ್ರ ನ್ಯಾಯಾಲಯ ಈ ಸಂಬಂಧ ವಿಚಾರಣೆ ನಡೆಸಿ ಆರೋಪಿಗೆ ಜೀವಾವಧಿ ಶಿಕ್ಷೆ ಮತ್ತು ಎರಡು ಸಾವಿರ ದಂಡ ಹಾಗೂ ಸಾಕ್ಷಿ ನಾಶಕ್ಕೆ 6 ತಿಂಗಳು ಸಾದಾ ಸಜೆ, 1 ಸಾವಿರ ರೂ. ದಂಡ ವಿಧಿಸಿದೆ.

ಕೊಲೆಗೆ ಕಾರಣವಾಯ್ತು ಗಂಡನ ಕುಡಿತ:

ಬೆಂಗಳೂರು ಗ್ರಾಮಾಂತರ ಜಿಲ್ಲೆ ದೊಡ್ಡಬಳ್ಳಾಪುರ ತಾಲೂಕಿನ ಶ್ರವಣೂರು ಹೊರವಲಯದ ಕೋಳಿಫಾರಂನಲ್ಲಿ ಕೆಲಸ ಅರಸಿನೇಪಾಳದಿಂದ ಈ ದಂಪತಿ ಬಂದಿದ್ದರು.ಕಳೆದ ಎರಡು ವರ್ಷಗಳಿಂದ ಇಬ್ಬರು ಮಕ್ಕಳೊಂದಿಗೆ ಕೋಳಿ ಫಾರಂನಲ್ಲಿಯೇ ಕೆಲಸ ಮಾಡ್ಕೊಂಡ್ ವಾಸವಾಗಿದ್ದರು. ಕುಡಿತದ ದಾಸನಾಗಿದ್ದ ಗಂಡ ಬಿಮಾಲ್ ಬೋರಾ ವರ್ತನೆಗೆ ಹೆಂಡತಿ ಪೂನಿ ಬೋರಾ ರೋಸಿ ಹೋಗಿದ್ಳು. ಕುಡುಕ ಗಂಡನ ಕಾಟಕ್ಕೆ ಬೇಸತ್ತು ಪತಿ ಕತ್ತು ಸೀಳಿ ಹತ್ಯೆಗೈದಿದ್ದಳು. ಬಳಿಕಕೊಲೆಗೊಂದು ಚೆಂದದ ಕಥೆ ಹೆಣೆದಿದ್ದಳು. ತನಿಖೆ ನಡೆಸಿದಾಗ ಪತ್ನಿಯೇ ಕೊಲೆಗಾರ್ತಿ ಅನ್ನೋ ವಿಷಯ ಪೊಲೀಸರಿಗೆ ಗೊತ್ತಾಗಿತ್ತು.

ABOUT THE AUTHOR

...view details