ಬೆಂಗಳೂರು:ಸಿಗರೇಟ್, ಪಾನ್ ಮಸಾಲಾದಂತಹ ವಸ್ತುಗಳನ್ನ ಮಾರಾಟ ಮಾಡಿದರೆ ಅಂಗಡಿಯ ಪರವಾನಗಿ ರದ್ದು ಮಾಡಲಾಗುವುದು ಎಂದು ಬಿಬಿಎಂಪಿ ಆಯುಕ್ತ ಬಿ.ಹೆಚ್.ಅನಿಲ್ ಕುಮಾರ್ ಎಚ್ಚರಿಕೆ ನೀಡಿದ್ದಾರೆ.
ಬೀಡಿ, ಸಿಗರೇಟ್ ಮಾರಾಟ ಮಾಡಿದರೆ ಅಂಗಡಿ ಪರವಾನಗಿ ರದ್ದು: ಬಿಬಿಎಂಪಿ ಆಯುಕ್ತ - ಅಂಗಡಿಗಳಿಗೆ ದಂಡವನ್ನು ಪಾಲಿಕೆ ವಿಧಿಸಿದೆ
ಬಿಬಿಎಂಪಿ ಆಯುಕ್ತ ಬಿ.ಹೆಚ್.ಅನಿಲ್ ಕುಮಾರ್ ಟ್ವೀಟ್ ಮಾಡಿ, ಇನ್ನು ಮುಂದೆ ಸಿಗರೇಟ್, ಪಾನ್ ಮಸಾಲಾದಂತಹ ವಸ್ತುಗಳನ್ನ ಮಾರಾಟ ಮಾಡಿದರೆ ಅಂಗಡಿಯ ಪರವಾನಗಿ ರದ್ದು ಮಾಡಲಾಗುವುದು ಎಂದಿದ್ದಾರೆ.
ಬೀಡಿ ಸಿಗರೇಟ್ ಮಾರಾಟ ಮಾಡಿದರೆ ಪರವಾನಗಿ ರದ್ದು: ಬಿಬಿಎಂಪಿ ಆಯುಕ್ತರ ಆದೇಶ..!
ಹಲವೆಡೆ ದಿನಸಿ ಅಂಗಡಿಗಳಲ್ಲಿ ಸಿಗರೇಟು, ಬೀಡಿ ಹಾಗೂ ಪಾನ್ ಮಸಾಲಗಳನ್ನ ದುಪ್ಪಟ್ಟು ಬೆಲೆಗೆ ಮಾರಾಟ ಮಾಡುತ್ತಿರುವುದು ಪಾಲಿಕೆ ಗಮನಕ್ಕೆ ಬಂದಿದ್ದು, ಕೆಲ ಅಂಗಡಿಗಳಿಗೆ ದಂಡವನ್ನು ಪಾಲಿಕೆ ವಿಧಿಸಿದೆ.