ಬೆಂಗಳೂರು: ಡ್ರಗ್ಸ್ ಪ್ರಕರಣದಲ್ಲಿ ಬಂಧಿತರಾದ ಎಲ್ಲ ಆರೋಪಿಗಳಿಗೆ ಜಾಮೀನು ನೀಡಿ ಎಂದು ಮೊಹಮ್ಮದ್ ಜೈಷ್ ಇ ಉಗ್ರ ಸಂಘಟನೆಯ ಹೆಸರಿನಲ್ಲಿ ಅನಾಮಧೇಯನೊಬ್ಬ ಸಿಟಿ ಸಿವಿಲ್ ಕೋರ್ಟ್ ನ್ಯಾಯಾಧೀಶರಿಗೆ ಪತ್ರ ಬರೆದಿದ್ದಾರೆ.
ಡ್ರಗ್ಸ್ ಕೇಸ್ನ ಎಲ್ಲಾ ಆಪಾದಿತರಿಗೆ ಜಾಮೀನು ನೀಡಿ: ಉಗ್ರ ಸಂಘಟನೆ ಹೆಸರಲ್ಲಿ ಜಡ್ಜ್ಗೆ ಪತ್ರ - Letter to judge in the name of militant
ಕೊಲೆ, ಡಕಾಯಿತಿ, ಬೆದರಿಕೆ, ಹತ್ಯೆಗೆ ಯತ್ನ ಪ್ರಕರಣದ ಎಲ್ಲ ಆರೋಪಿಗಳನ್ನು ಬಿಡುಗಡೆ ಮಾಡಬೇಕು. ನಿಮಗೆ ಹಣ ಬೇಕೆ. ನಿಮಗೆ ಏನು ಬೇಕು ಕೇಳಿ. ಕೇಸ್ ವಿರುದ್ಧ ಹೋದರೆ ನಿಮ್ಮ ಕಾರ್ಗೆ ಬಾಂಬ್ ಇಟ್ಟು ನಿಮ್ಮನ್ನು ಬ್ಲಾಸ್ಟ್ ಮಾಡುತ್ತೇವೆ ಎಂದು ಮೊಹಮ್ಮದ್ ಜೈಷ್ ಇ ಉಗ್ರ ಸಂಘಟನೆ ಹೆಸರು ಉಲ್ಲೇಖಿಸಿ ಸಿಟಿ ಸಿವಿಲ್ ಕೋರ್ಟ್ ನ್ಯಾಯಾಧೀಶರಿಗೆ ಪತ್ರ ಬರೆಯಲಾಗಿದೆ.
ಕೋರ್ಟ್
ಕೊಲೆ, ಡಕಾಯಿತಿ, ಬೆದರಿಕೆ, ಹತ್ಯೆಗೆ ಯತ್ನ ಪ್ರಕರಣದ ಎಲ್ಲ ಆರೋಪಿಗಳನ್ನು ಬಿಡುಗಡೆ ಮಾಡಬೇಕು. ನಿಮಗೆ ಹಣ ಬೇಕೆ. ನಿಮಗೆ ಏನು ಬೇಕು ಕೇಳಿ. ಕೇಸ್ ವಿರುದ್ಧ ಹೋದರೆ ನಿಮ್ಮ ಕಾರ್ಗೆ ಬಾಂಬ್ ಇಟ್ಟು ನಿಮ್ಮನ್ನು ಬ್ಲಾಸ್ಟ್ ಮಾಡುತ್ತೇವೆ ಎಂದು ಮೊಹಮ್ಮದ್ ಜೈಷ್ ಇ ಉಗ್ರ ಸಂಘಟನೆ ಹೆಸರು ಉಲ್ಲೇಖಿಸಿ ಪತ್ರ ಬರೆಯಲಾಗಿದೆ.
ಇದರಲ್ಲಿ ಮುಖ್ಯವಾಗಿ 33ನೇ ಸಿಟಿ ಸಿವಿಲ್ ಕೋರ್ಟ್ನ ನ್ಯಾಯಾಧೀಶ ಸೀನಪ್ಪ, ನಗರ ಪೊಲೀಸ್ ಆಯುಕ್ತ ಕಮಲ್ ಪಂಥ್ ಹಾಗೂ ಸಿಸಿಬಿ ಜಂಟಿ ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್ ಅವರಿಗೆ ಪತ್ರ ಬರೆದಿದ್ದಾರೆ.