ಕರ್ನಾಟಕ

karnataka

ETV Bharat / city

ರೈತರನ್ನ ಮನವೊಲಿಕೆಗೆ ಕೇಂದ್ರ ಸಚಿವರಿಂದ ಭಾವನಾತ್ಮಕ ಪತ್ರ.. ಕೃಷಿ ಕಾನೂನುಗಳ ಕುರಿತು ತೋಮರ್ ಸ್ಪಷ್ಟನೆ!! - ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್​ ತೋಮರ್​​​ ರಿಂದ ರೈತರಿಗೆ ಪತ್ರ

ಹೊಲಕ್ಕೆ ನೀರು ಒದಗಿಸಲು ತಡರಾತ್ರಿಯಲ್ಲಿ ಎಚ್ಚರಗೊಂಡು, ನೀರು ಉಣಿಸುವ ಕಟ್ಟೆ ಒಡೆದಾಗ ಅದನ್ನು ಮುಚ್ಚಲು ಓಡುವುದು, ಅಕಾಲಿಕ ಮಳೆಯ ಭಯ, ಸಮಯೋಚಿತ ಮಳೆಯ ಸಂತೋಷ. ಇವೆಲ್ಲವೂ ನನ್ನ ಜೀವನದ ಭಾಗವಾಗಿದೆ. ಸುಗ್ಗಿಯ ನಂತರ ಅದನ್ನು ಮಾರಾಟ ಮಾಡಲು ವಾರಗಳವರೆಗೆ ಕಾಯುವುದನ್ನು ನಾನು ನೋಡಿದ್ದೇನೆ..

letter-from-union-agriculture-minister-narendra-singh-tomar-to-farmers
ನರೇಂದ್ರ ಸಿಂಗ್ ತೋಮರ್

By

Published : Dec 20, 2020, 3:34 PM IST

ಬೆಂಗಳೂರು :ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ ರೈತರಿಗೆ ಸುದೀರ್ಘ ಪತ್ರ ಬರೆದು ಹೊಸ ಕೃಷಿ ಕಾನೂನುಗಳ ಬಗ್ಗೆ ಕೆಲ ಸ್ಪಷ್ಟೀಕರಣ‌ಗಳನ್ನು ನೀಡಿದ್ದಾರೆ. ರೈತರಿಗೆ ಬರೆದ ತಮ್ಮ ಪತ್ರದಲ್ಲಿ ಐತಿಹಾಸಿಕ ಕೃಷಿ ಸುಧಾರಣೆಗಳಿಗೆ ಸಂಬಂಧಿಸಿದಂತೆ ಕಳೆದ ಕೆಲವು ದಿನಗಳಿಂದ ನಾನು ನಿಮ್ಮೊಂದಿಗೆ ನಿರಂತರ ಸಂಪರ್ಕದಲ್ಲಿದ್ದೇನೆ. ಈ ಹಿಂದೆ ನಾನು ಅನೇಕ ರಾಜ್ಯಗಳ ರೈತ ಸಂಘಟನೆಗಳೊಂದಿಗೆ ಮಾತುಕತೆ ನಡೆಸಿದ್ದೇನೆ.

ಕೇಂದ್ರ ಕೃಷಿ ಸಚಿವ ರಿಂದ ರೈತರಿಗೆ ಪತ್ರ

ಅನೇಕ ರೈತ ಸಂಘಟನೆಗಳು ಈ ಕೃಷಿ ಸುಧಾರಣೆಗಳನ್ನು ಸ್ವಾಗತಿಸಿವೆ, ಅವರು ತುಂಬಾ ಸಂತೋಷಪಟ್ಟಿದ್ದಾರೆ. ರೈತರಲ್ಲಿ ಹೊಸ ಭರವಸೆ ಹುಟ್ಟಿಕೊಂಡಿದೆ. ದೇಶದ ವಿವಿಧ ಪ್ರದೇಶಗಳ ರೈತರು ಹೊಸ ಕೃಷಿ ಕಾನೂನುಗಳ ಲಾಭ ಪಡೆಯಲು ಪ್ರಾರಂಭಿಸಿದ ಉದಾಹರಣೆಗಳೂ ಇವೆ. ಆದರೆ, ಈ ಕೃಷಿ ಸುಧಾರಣೆಗಳ ಇನ್ನೊಂದು ಭಾಗವೆಂದರೆ ಕೆಲವು ರೈತ ಸಂಘಟನೆಗಳು ಅವುಗಳ ಬಗ್ಗೆ ಭ್ರಮೆ ಹುಟ್ಟುಹಾಕಿವೆ ಎಂದು ಆರೋಪಿಸಿದ್ದಾರೆ.

ಕೇಂದ್ರ ಕೃಷಿ ಸಚಿವ ರಿಂದ ರೈತರಿಗೆ ಪತ್ರ

ದೇಶದ ಕೃಷಿ ಸಚಿವರಾಗಿ, ಪ್ರತಿಯೊಬ್ಬ ರೈತನ ಗೊಂದಲ ತೆಗೆದು ಹಾಕುವುದು, ಪ್ರತಿಯೊಬ್ಬ ರೈತನ ಕಾಳಜಿ ಮಾಡುವುದು ನನ್ನ ಕರ್ತವ್ಯ. ದೆಹಲಿ ಮತ್ತು ಸುತ್ತಮುತ್ತಲಿನ ಪ್ರದೇಶದ ಸರ್ಕಾರ ಮತ್ತು ರೈತರ ನಡುವೆ ನಡೆಯುತ್ತಿರುವ ಪಿತೂರಿಯ ಸತ್ಯ ಮತ್ತು ನಿಜ ಸ್ಥಿತಿಯನ್ನು ನಿಮ್ಮ ಮುಂದೆ ಇಡುವುದು ನನ್ನ ಜವಾಬ್ದಾರಿ. ನಾನು ರೈತರ ಕುಟುಂಬದಿಂದ ಬಂದವನು, ಕೃಷಿಯ ಸೂಕ್ಷ್ಮ ವ್ಯತ್ಯಾಸಗಳು ಮತ್ತು ಕೃಷಿಯ ಸವಾಲುಗಳನ್ನು ಪರಿಗಣಿಸಿ ನಾನು ಬೆಳೆದಿದ್ದೇನೆ.

ಕೇಂದ್ರ ಕೃಷಿ ಸಚಿವ ರಿಂದ ರೈತರಿಗೆ ಪತ್ರ

ಹೊಲಕ್ಕೆ ನೀರು ಒದಗಿಸಲು ತಡರಾತ್ರಿಯಲ್ಲಿ ಎಚ್ಚರಗೊಂಡು, ನೀರು ಉಣಿಸುವ ಕಟ್ಟೆ ಒಡೆದಾಗ ಅದನ್ನು ಮುಚ್ಚಲು ಓಡುವುದು, ಅಕಾಲಿಕ ಮಳೆಯ ಭಯ, ಸಮಯೋಚಿತ ಮಳೆಯ ಸಂತೋಷ - ಇವೆಲ್ಲವೂ ನನ್ನ ಜೀವನದ ಭಾಗವಾಗಿದೆ. ಸುಗ್ಗಿಯ ನಂತರ ಅದನ್ನು ಮಾರಾಟ ಮಾಡಲು ವಾರಗಳವರೆಗೆ ಕಾಯುವುದನ್ನು ನಾನು ನೋಡಿದ್ದೇನೆ. ಈ ಪರಿಸ್ಥಿತಿಗಳು ಮತ್ತು ಸನ್ನಿವೇಶಗಳಲ್ಲಿಯೂ ಸಹ, ದೇಶದ ರೈತ ದೇಶಕ್ಕೆ ಹೆಚ್ಚು ಹೆಚ್ಚು ಆಹಾರ ಉತ್ಪಾದಿಸಲು ಪ್ರಯತ್ನಿಸುತ್ತಾನೆ ಎಂದು ವಿವರಿಸಿದ್ದಾರೆ.

ಕೇಂದ್ರ ಕೃಷಿ ಸಚಿವ ರಿಂದ ರೈತರಿಗೆ ಪತ್ರ

ಹೊಸ ಕಾನೂನು ಜಾರಿಗೆ ಬಂದ ನಂತರ, ಈ ಬಾರಿ ಎಂಎಸ್‌ಪಿ ಮೇಲಿನ ಸರ್ಕಾರಿ ಖರೀದಿಯ ಹಿಂದಿನ ಎಲ್ಲಾ ದಾಖಲೆಗಳನ್ನು ಸಹ ಮುರಿಯಲಾಗಿದೆ ಎಂಬುದು ಕೃಷಿ ಸಚಿವರಾಗಿ ನನಗೆ ಬಹಳ ತೃಪ್ತಿಯ ವಿಷಯ. ನಮ್ಮ ಸರ್ಕಾರವು ಎಂಎಸ್‌ಪಿಯಲ್ಲಿ ಹೊಸ ಖರೀದಿ ದಾಖಲೆಗಳನ್ನು ರಚಿಸುತ್ತಿರುವ, ಖರೀದಿ ಕೇಂದ್ರಗಳ ಸಂಖ್ಯೆ ಹೆಚ್ಚಿಸುತ್ತಿರುವ ಸಮಯದಲ್ಲಿ ಎಂಎಸ್‌ಪಿ ಮುಚ್ಚಲಾಗುವುದು ಎಂದು ಕೆಲವರು ರೈತರಿಗೆ ಸುಳ್ಳು ಹೇಳುತ್ತಿದ್ದಾರೆ ಎಂದು ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಕೇಂದ್ರ ಕೃಷಿ ಸಚಿವ ರಿಂದ ರೈತರಿಗೆ ಪತ್ರ

ರಾಜಕೀಯ ಹಿತಾಸಕ್ತಿಯಿಂದ ಪ್ರೇರೇಪಿಸಲ್ಪಟ್ಟ ಕೆಲ ಜನರು ಹರಡುತ್ತಿರುವ ಈ ಗಾಳಿ ಸುಳ್ಳನ್ನು ಗುರುತಿಸಿ ಅದನ್ನು ಸಂಪೂರ್ಣ ತಿರಸ್ಕರಿಸಬೇಕೆಂದು ರೈತರನ್ನು ಕೋರಿದ್ದಾರೆ. ಕೃಷಿ ಸುಧಾರಣೆ ಕಾಯ್ದೆ ಮೇಲೆ ಹಲವು ಸುಳ್ಳುಗಳನ್ನು ಹೇಳಲಾಗುತ್ತಿದೆ. ಎಂಎಸ್​ಪಿ ವ್ಯವಸ್ಥೆಯನ್ನು ಕೊನೆಗೊಳಿಸಲಾಗುತ್ತಿದೆ. ಎಪಿಎಂಸಿ ಮಂಡಿಗಳನ್ನು ಮುಚ್ಚಲಾಗುತ್ತಿದೆ. ರೈತರ ಭೂಮಿ ಅಪಾಯದಲ್ಲಿದೆ ಎಂಬ ಸುಳ್ಳು ಹೇಳಲಾಗುತ್ತಿದೆ ಎಂದು ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಕೇಂದ್ರ ಕೃಷಿ ಸಚಿವ ರಿಂದ ರೈತರಿಗೆ ಪತ್ರ

ಗುತ್ತಿಗೆದಾರರು ರೈತನ ಯಾವುದೇ ಹಣ ಬಾಕಿಯಿದ್ದಲ್ಲಿ ರೈತನ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳಬಹುದು. ಗುತ್ತಿಗೆ ಕೃಷಿಯ ಸಂದರ್ಭದಲ್ಲಿ ರೈತರಿಗೆ ಯಾವುದೇ ಬೆಲೆ ಖಾತ್ರಿ ಇಲ್ಲ. ರೈತರಿಗೆ ಕೊಡಬೇಕಾದ ಕೃಷಿ ಬೆಲೆ ಕೊಡಲಾಗುವುದಿಲ್ಲ ಎಂಬ ಸುಳ್ಳುಗಳನ್ನು ಹರಿ ಬಿಡಲಾಗುತ್ತಿದೆ ಎಂದು ಆರೋಪಿಸಿದ್ದಾರೆ.

ABOUT THE AUTHOR

...view details