ಕರ್ನಾಟಕ

karnataka

ETV Bharat / city

ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಜೈಂಟ್ ಇನ್ನೋವೇಷನ್ ಸೆಂಟರ್ ಆರಂಭ

ವಿಮಾನ ನಿಲ್ದಾಣದಲ್ಲಿ ರೀಟೇಲ್, ಡೈನಿಂಗ್ ಮತ್ತು ಮನರಂಜನೆಯಲ್ಲಿ ಪ್ರಯಾಣಿಕರ ಅನುಭವ ಹೆಚ್ಚಿಸುವ ತಂತ್ರಜ್ಞಾನ ಪರಿಹಾರಗಳನ್ನು ಒದಗಿಸಲಿದೆ. ಬಿಐಎಎಲ್‌ನ ಕಾರ್ಯ ನಿರ್ವಹಣೆ ಹೆಚ್ಚು ದಕ್ಷತೆಯಿಂದ ಇರುವಂತೆ ನೋಡಿಕೊಳ್ಳಲಾಗುತ್ತದೆ. ಒಮ್ಮೆ ಅನುಷ್ಠಾನಗೊಳಿಸಿದ ನಂತರ ಈ ದಾಖಲೆಗಳನ್ನು ಭಾರತದ ಇತರ ವಿಮಾನ ನಿಲ್ದಾಣಗಳಿಗೆ ಹಾಗೂ ಜಾಗತಿಕವಾಗಿ ವಿಸ್ತರಿಸಬಹುದು..

Kempegowda International Airport
ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ

By

Published : Apr 9, 2022, 3:37 PM IST

ಬೆಂಗಳೂರು :ವೈಮಾನಿಕ ಕ್ಷೇತ್ರದಲ್ಲಿ ಹೊಸ ಆವಿಷ್ಕಾರಗಳನ್ನು ಅಭಿವೃದ್ದಿಪಡಿಸಲು ಬೆಂಗಳೂರು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ(ಬಿಐಎಎಲ್) ಹಾಗೂ ಅಮೆಜಾನ್ ವೆಬ್ ಸರ್ವೀಸ್ ಜಂಟಿಯಾಗಿ ಜೈಂಟ್ ಇನ್ನೋವೇಷನ್ ಸೆಂಟರ್ ಆರಂಭಿಸಲಿದೆ. ನಿಲ್ದಾಣವನ್ನು ಕ್ಲೌಡ್ ಕಂಪ್ಯೂಟಿಂಗ್ ಮತ್ತು ಡಿಜಿಟಲ್ ತಂತ್ರಜ್ಞಾನದ ಮೂಲಕ ಸಶಕ್ತವಾಗಿ ರೂಪಿಸಲಾಗುವುದು ಎಂದು ವಿಮಾನ ನಿಲ್ದಾಣದ ಸಿಇಒ ‌ಹಾಗೂ ಎಂಡಿ ಹರಿ ಮಾರರ್ ತಿಳಿಸಿದ್ದಾರೆ.

ಸ್ಟಾರ್ಟಪ್​ಗಳಿಗೆ ವೈಮಾನಿಕ ಕ್ಷೇತ್ರದಲ್ಲಿ ಆವಿಷ್ಕಾರ ಮಾಡುವ ಉತ್ತೇಜನ ನೀಡುವುದು, ಸ್ಮಾರ್ಟ್ ಮೂಲಸೌಕರ್ಯ, ಯುಟಿಲಿಟೀಸ್ ಮತ್ತು ಗ್ರಾಹಕರು ತ್ವರಿತವಾಗಿ ಅಮೆಜಾನ್ ವೆಬ್ ಸರ್ವೀಸಸ್ ತಂತ್ರಜ್ಞಾನಗಳ ಕೊಡುಗೆಗಳ ಮೂಲಕ ಮೊಬಿಲಿಟಿ (ಸಂಚಾರ) ಹಾಗೂ ತ್ವರಿತ ಆವಿಷ್ಕರಣೆಗೆ ತಾಂತ್ರಿಕ ಪ್ಲಾಟ್ ಫಾರಂ ಒದಗಿಸುವುದು ಕೇಂದ್ರದ ಪ್ರಮುಖ ಉದ್ದೇಶ.

ಇದು ಚೀನಾದ ಹೊರಗೆ ಅಮೆಜಾನ್ ವೆಬ್ ಸರ್ವೀಸಸ್ ಅನ್ನು ಸ್ಥಾಪಿಸುತ್ತಿರುವ ಮೊದಲ ಅವಿಷ್ಕಾರ ಕೇಂದ್ರ. ಜೊತೆಗೆ ವೈಮಾನಿಕ ಅಭಿವೃದ್ಧಿಗೆಂದೇ ಮೀಸಲಾದ ಮೊದಲ ಜೆಐಸಿ. ಪ್ರಸಕ್ತ ವರ್ಷ ಕಾರ್ಯಾರಂಭ ಮಾಡುವ ನಿರೀಕ್ಷೆಯಿದೆ. ವಿಮಾನ ನಿಲ್ದಾಣದಲ್ಲಿ ಡಿಜಿಟಲ್ ಆವಿಷ್ಕಾರವನ್ನು ಮುನ್ನಡೆಸಲು ಆದ್ಯತೆ ನೀಡಿದ್ದು, ಪ್ರಯಾಣಿಕರ ಅನುಭವ ಉನ್ನತೀಕರಣ ಮತ್ತು ಸಮುದಾಯದಲ್ಲಿ ಸಕಾರಾತ್ಮಕ ಪರಿಣಾಮ ಬೀರುವ ಕೆಲಸ ಮಾಡುತ್ತದೆ.

ಕಸ್ಟಮ್ಸ್ ಪರಿಹಾರಗಳನ್ನು ನೀಡುವಂತಹ ಕ್ಲೌಡ್ ಕಂಪ್ಯೂಟಿಂಗ್, ಬ್ಲಾಕ್‌ಚೈನ್, ಇಂಟರ್‌ನೆಟ್ ಆಫ್ ಥಿಂಗ್ಸ್(ಐಒಟಿ), ಅನಾಲಿಟಿಕ್ಸ್, ಮೆಷಿನ್ ಲರ್ನಿಂಗ್(ಎಂಎಲ್), ಆರ್ಟಿಫಿಷಿಯಲ್ ಇಂಟೆಲಿಜೆನ್ಸ್(ಐ), ರೊಬೊಟಿಕ್ಸ್ ಮತ್ತು ಆಗ್ಮೆಂಟೆಡ್ ಮತ್ತು ವರ್ಚುಯಲ್ ರಿಯಾಲಿಟಿ(ಎಆರ್/ವಿಆರ್) ತಂತ್ರಜ್ಞಾನ ಸಂಯೋಜನೆಯಲ್ಲಿದೆ.

ವಿಮಾನ ನಿಲ್ದಾಣದಲ್ಲಿ ರೀಟೇಲ್, ಡೈನಿಂಗ್ ಮತ್ತು ಮನರಂಜನೆಯಲ್ಲಿ ಪ್ರಯಾಣಿಕರ ಅನುಭವ ಹೆಚ್ಚಿಸುವ ತಂತ್ರಜ್ಞಾನ ಪರಿಹಾರಗಳನ್ನು ಒದಗಿಸಲಿದೆ. ಬಿಐಎಎಲ್‌ನ ಕಾರ್ಯ ನಿರ್ವಹಣೆ ಹೆಚ್ಚು ದಕ್ಷತೆಯಿಂದ ಇರುವಂತೆ ನೋಡಿಕೊಳ್ಳಲಾಗುತ್ತದೆ. ಒಮ್ಮೆ ಅನುಷ್ಠಾನಗೊಳಿಸಿದ ನಂತರ ಈ ದಾಖಲೆಗಳನ್ನು ಭಾರತದ ಇತರ ವಿಮಾನ ನಿಲ್ದಾಣಗಳಿಗೆ ಹಾಗೂ ಜಾಗತಿಕವಾಗಿ ವಿಸ್ತರಿಸಬಹುದು.

ಆಧುನಿಕ ವೈಮಾನಿಕ ಪ್ರಯಾಣ ಸಾಂಕ್ರಾಮಿಕದ ಸಂಕಷ್ಟಕ್ಕೆ ಸಿಲುಕಿದೆ. ಬಿಐಎಎಲ್‌ನೊಂದಿಗೆ ನಾವು ಕೆಲಸ ಮಾಡುವ ಮೂಲಕ ಅವರಿಗೆ ಡಿಜಿಟಲ್ ತಂತ್ರಜ್ಞಾನದ ಹೊಸ ಸಾಧ್ಯತೆಗಳನ್ನು ಆವಿಷ್ಕರಿಸಲು, ಪ್ರಯಾಣಿಕರಿಗೆ ಉನ್ನತೀಕರಿಸಿದ ಅನುಭವಗಳನ್ನು ನೀಡಲು ಮತ್ತು ಡಿಜಿಟಲೈಸ್ಡ್ ಮತ್ತು ಸ್ಮಾರ್ಟ್ ಏರ್‌ಪೋರ್ಟ್ ಗುರಿಯನ್ನು ಸ್ಥಾಪಿಸಲು ಜೆಐಸಿ ಸಹಾಯ ಮಾಡುತ್ತದೆ ಎಂದು ಅಮೆಜಾನ್ ವೆಬ್ ಸರ್ವೀಸಸ್ ಇಂಡಿಯಾ ಮತ್ತು ದಕ್ಷಿಣ ಏಷ್ಯಾದ ಪಬ್ಲಿಕ್ ಸೆಕ್ಟರ್-ಎಐಎಸ್‌ಪಿಎಲ್ ಅಧ್ಯಕ್ಷ ರಾಹುಲ್ ಶರ್ಮಾ ಹೇಳಿದರು.

ಇದನ್ನೂ ಓದಿ:ಟೇಕ್​ ಆಫ್​ ಆಗಿದ್ದ ವಿಮಾನದಲ್ಲಿ ತಾಂತ್ರಿಕ ದೋಷ: ತುರ್ತು ಭೂಸ್ಪರ್ಶ

ABOUT THE AUTHOR

...view details