ಕರ್ನಾಟಕ

karnataka

ETV Bharat / city

ರಾಜ್ಯದಲ್ಲಿಂದು 1,280 ಕೊರೊನಾ ಕೇಸ್​ ಪತ್ತೆ: 13 ಮಂದಿ ಬಲಿ - corona latest updates

ರಾಜ್ಯದ ಕೊರೊನಾ ಸೋಂಕಿತರ ಸಾವಿನ ಪ್ರಮಾಣ ಶೇಕಡಾ 1.01ರಷ್ಟಿದ್ದು, ಈವರೆಗೆ 8,58,370 ಮಂದಿ ಗುಣಮುಖರಾಗಿದ್ದಾರೆ.

corona
ಕೊರೊನಾ

By

Published : Dec 8, 2020, 7:11 PM IST

ಬೆಂಗಳೂರು:ರಾಜ್ಯದಲ್ಲಿಂದು 1,280 ಜನರಿಗೆ ಕೊರೊನಾ ಸೋಂಕು ದೃಢಪಟ್ಟಿದ್ದು, ಈ ಮೂಲಕ ಸೋಂಕಿತರ ಸಂಖ್ಯೆ 8,95,284ಕ್ಕೆ ಏರಿಕೆಯಾಗಿದೆ. ಕೊರೊನಾಗೆ 13 ಸೋಂಕಿತರು ಮೃತರಾಗಿದ್ದು, ಈ ಮೂಲಕ ಸಾವಿನ ಸಂಖ್ಯೆ 11,880ಕ್ಕೆ ತಲುಪಿದೆ. 19 ಸೋಂಕಿತರು ಅನ್ಯ ಕಾರಣಕ್ಕೆ ಸಾವನ್ನಪ್ಪಿದ್ದಾರೆ. ರಾಜ್ಯದಲ್ಲಿ ಸೋಂಕಿತರ ಪ್ರಮಾಣ ಶೇಕಡಾ 1.44ರಷ್ಟಿದ್ದು, ಸಾವಿನ ಪ್ರಮಾಣ ಶೇಕಡಾ 1.01ರಷ್ಟಿದೆ.

ಇದನ್ನೂ ಓದಿ:ಲಂಡನ್‌: ಭಾರತೀಯ ಮೂಲದ ವ್ಯಕ್ತಿಗೆ ಮೊದಲ ಕೋವಿಡ್‌ ವ್ಯಾಕ್ಸಿನ್‌

ಕೊರೊನಾದಿಂದ 1,060 ಸೋಂಕಿತರು ಗುಣಮುಖರಾಗಿದ್ದು, ಈವರೆಗೆ 8,58,370 ಮಂದಿ ಡಿಸ್ಚಾರ್ಜ್ ಆಗಿದ್ದಾರೆ. 275 ಸೋಂಕಿತರಿಗೆ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.

ರಾಜ್ಯದಲ್ಲಿ ಸದ್ಯ 25,015 ಸಕ್ರಿಯ ಪ್ರಕರಣಗಳಿವೆ. ಕಳೆದ 7 ದಿನಗಳಲ್ಲಿ 25,429 ಜನರು ಹೋಂ ಕ್ವಾರಂಟೈನ್​ನಲ್ಲಿದ್ದು, ಸೋಂಕಿತರ ಪ್ರಾಥಮಿಕ ಸಂಪರ್ಕದಲ್ಲಿ 1,00,476 ಮಂದಿ, ದ್ವಿತೀಯ ಸಂಪರ್ಕದಲ್ಲಿ 1,11,246 ಮಂದಿಯಿದ್ದಾರೆ.

ABOUT THE AUTHOR

...view details