ಕರ್ನಾಟಕ

karnataka

ETV Bharat / city

ವೃತ್ತಿಪರ ಕೋರ್ಸ್​ಗಳ ಪ್ರವೇಶಕ್ಕೆ ಕೊನೆಯ ಸುತ್ತಿನ ಸೀಟು ಹಂಚಿಕೆ

ಎರಡನೇ ಸುತ್ತಿನಲ್ಲಿ ಹಂಚಿಕೆಯಾಗದೇ ಉಳಿದ ಮತ್ತು ಹಿಂದಿರುಗಿಸಿರುವ ಸೀಟುಗಳ ಭರ್ತಿಗೆ ಅಂತಿಮ ಸುತ್ತಿನ ಸೀಟು ಹಂಚಿಕೆ ನಡೆಸಲು ಸರ್ಕಾರ ನಿರ್ಧರಿಸಿದೆ.

ಸೀಟು ಹಂಚಿಕೆ
ಸೀಟು ಹಂಚಿಕೆ

By

Published : Jan 5, 2021, 10:32 PM IST

ಬೆಂಗಳೂರು :ವೃತ್ತಿಪರ ಕೋರ್ಸ್‌ಗಳ ಪ್ರವೇಶಕ್ಕೆ ಜನವರಿ 15ರವರೆಗೆ ಅಖಿಲ ಭಾರತೀಯ ತಾಂತ್ರಿಕ ಪರಿಷತ್ತು ಅವಕಾಶ ನೀಡಿದ್ದರಿಂದ ಹಂಚಿಕೆಯಾಗದೇ ಉಳಿದ ಸೀಟುಗಳಿಗೆ ಅಂತಿಮ ಸುತ್ತಿನ ಸೀಟು ಹಂಚಿಕೆ ನಡೆಸಲು ಸರ್ಕಾರ ನಿರ್ಧರಿಸಿದೆ.

ಎರಡನೇ ಸುತ್ತಿನಲ್ಲಿ ಹಂಚಿಕೆಯಾಗದೇ ಉಳಿದ ಮತ್ತು ಹಿಂದಿರುಗಿಸಿರುವ ಸೀಟುಗಳ ಭರ್ತಿಗೆ ಅಂತಿಮ ಸುತ್ತಿನ ಹಂಚಿಕೆ ನಡೆಸಲಿದೆ. ಕೊನೆಯ ಸುತ್ತಿನ ಸೀಟು ಹಂಚಿಕೆ ವೇಳಾಪಟ್ಟಿಯನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ವೆಬ್‌ಸೈಟ್ https://cetonline.karnataka.gov.in/kea/ ನಲ್ಲಿ ಸದ್ಯದಲ್ಲೇ ಪ್ರಕಟಿಸಲಾಗುತ್ತದೆ ಎಂದು ಪ್ರಾಧಿಕಾರ ಪ್ರಕಟಣೆಯಲ್ಲಿ ತಿಳಿಸಿದೆ.

ಈ ಹಿನ್ನೆಲೆ ಎರಡನೇ ಮುಂದುವರಿದ ಸುತ್ತಿನಲ್ಲಿ ಸೀಟು ಹಂಚಿಕೆಯಾದ ಅಭ್ಯರ್ಥಿಗಳಿಗೆ ಮಾತ್ರ ಸೀಟು ರದ್ದುಪಡಿಸಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ. ಸೀಟು ರದ್ದು ಪಡಿಸಿಕೊಳ್ಳಲು ಅಪೇಕ್ಷಿಸುವ ಅಭ್ಯರ್ಥಿಗಳು ಜ.6ರಿಂದ ಜ.8ರ ಸಂಜೆ 5.30ರೊಳಗೆ 5 ಸಾವಿರ ರೂ. ದಂಡವನ್ನು ಡಿಡಿ ಮೂಲಕ ಸಲ್ಲಿಸಿ ಸೀಟನ್ನು ರದ್ದುಪಡಿಸಿಕೊಳ್ಳಬಹುದಾಗಿದೆ.

ಒಂದೊಮ್ಮೆ ಎರಡನೇ ಮುಂದುವರಿದ ಸುತ್ತಿನ ಸೀಟನ್ನು ಕೊನೆಯ ಸುತ್ತಿನ ಸೀಟು ಹಂಚಿಕೆಯ ನಂತರ ಅಭ್ಯರ್ಥಿಗಳು ರದ್ದುಪಡಿಸಿಕೊಂಡಲ್ಲಿ, ಅಂತಹ ಅಭ್ಯರ್ಥಿಗಳು ಮೊದಲ ವರ್ಷದ ಶುಲ್ಕದ ಜತೆಗೆ ಐದು ಪಟ್ಟು ದಂಡ ಶುಲ್ಕವನ್ನು ಪಾವತಿಸಬೇಕು ಎಂದು ಪ್ರಾಧಿಕಾರ ತಿಳಿಸಿದೆ.

ಎರಡನೇ ಮುಂದುವರಿದ ಸುತ್ತಿನಲ್ಲಿ ಪಡೆದ ಸೀಟನ್ನು ರದ್ದಪಡಿಸುವ ಮತ್ತು ಕೊನೆಯ ಸುತ್ತಿಗೆ ಸಂಬಂಧಿಸಿದ ಸಂಪೂರ್ಣ ಮಾಹಿತಿ ಪ್ರಾಧಿಕಾರದ ವೆಬ್‌ಸೈಟ್‌ನಲ್ಲಿ ಲಭ್ಯವಿದೆ.

ABOUT THE AUTHOR

...view details