ಬೆಂಗಳೂರು: ಅನಾರೋಗ್ಯದಿಂದಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಸ್ಯಾಂಡಲ್ವುಡ್ ಹಿರಿಯ ನಟ ರಾಜೇಶ್ ಇಂದು ಮುಂಜಾನೆ 2.30ರ ಸುಮಾರಿಗೆ ಕೊನೆಯುಸಿರೆಳೆದಿದ್ದಾರೆ. ರವೀಂದ್ರ ಕಲಾಕ್ಷೇತ್ರದಲ್ಲಿ ರಾಜೇಶ್ ಅವರ ಪಾರ್ಥಿವ ಶರೀರದ ಅಂತಿಮ ದರ್ಶನಕ್ಕೆ ವ್ಯವಸ್ಥೆ ಕಲ್ಪಿಸಲಾಗಿದೆ. 11 ಗಂಟೆಯಿಂದ ಅಂತಿಮ ದರ್ಶನಕ್ಕೆ ಸಾರ್ವಜನಿಕರಿಗೆ ಅವಕಾಶ ಮಾಡಿಕೊಡಲಾಗುವುದು.
ಕುಟುಂಬಸ್ಥರಿಂದ ಅಂತಿಮ ವಿಧಿ ವಿಧಾನಗಳು ನೆರವೇರಿದ್ದು, ರವೀಂದ್ರ ಕಲಾಕ್ಷೇತ್ರದತ್ತ ಪಾರ್ಥೀವ ಶರೀರವನ್ನು ಕೊಂಡೊಯ್ಯಲಾಗುತ್ತಿದೆ. ಸಾರ್ವಜಕರಿಗೆ ಮೂರು ಗಂಟೆಗಳ ಕಾಲ ಅಂತಿಮ ದರ್ಶನಕ್ಕೆ ಅವಕಾಶ ಮಾಡಿಕೊಟ್ಟು, ನಂತರ ಮೇಡಿ ಅಗ್ರಹಾರದ ಚಿತಾಗಾರದಲ್ಲಿ ಅಂತ್ಯಸಂಸ್ಕಾರ ನೆರವೇರಿಸಲಾಗುವುದು.
ಮೃತ ರಾಜೇಶ್ ಅವರ ಅಳಿಯ ಮತ್ತು ನಟ ಅರ್ಜುನ್ ಸರ್ಜಾ ಮಾತನಾಡಿರುವುದು.. ಮೃತ ರಾಜೇಶ್ ಅವರ ಅಳಿಯ ಮತ್ತು ನಟ ಅರ್ಜುನ್ ಸರ್ಜಾ ಮಾತನಾಡಿ, ಈ ದಿನ ದುಃಖಕರವಾದ ದಿನ. ಕನ್ನಡ ಚಿತ್ರರಂಗದಲ್ಲಿ 50 ವರ್ಷಕ್ಕೂ ಹೆಚ್ಚು ಇದ್ದವರು. ಡಾ.ರಾಜ್‌ಕುಮಾರ್ ಅವರ ಪಂಕ್ತಿಯವರು. ಆದರಿಂದು ಅವರು ನಮ್ಮನ್ನು ಅಗಲಿದ್ದಾರೆ, ಮನಸ್ಸಿಗೆ ಕಷ್ಟವಾಗ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಇದನ್ನೂ ಓದಿ:ಸ್ಯಾಂಡಲ್ವುಡ್ ಹಿರಿಯ ನಟ ರಾಜೇಶ್ ಇನ್ನಿಲ್ಲ
ಅನಾರೋಗ್ಯ ಸಮಸ್ಯೆಯಿಂದ 10 ದಿನಗಳಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಮೊದಲಿಗೆ ಪ್ರೋ ಕೋವಿಡ್ ಆಮೇಲೆ ಸಿಕೆಡಿ ಸಮಸ್ಯೆ ಆಗಿತ್ತು. ತುಂಬಾ ಸುಸ್ತು ಅಂತ ಆಸ್ಪತ್ರೆಗೆ ದಾಖಲಿಸಿದ್ದೆವು. ಅವರನ್ನು ಉಳಿಸಿಕೊಳ್ಳಲು ಬಹಳ ಪ್ರಯತ್ನ ಪಟ್ಟಿದ್ದು, ಆಗಲಿಲ್ಲ ಎಂದು ಹೇಳಿದರು.
ರವೀಂದ್ರ ಕಲಾಕ್ಷೇತ್ರದಲ್ಲಿ ಪಾರ್ಥಿವ ಶರೀರದ ಅಂತಿಮ ದರ್ಶನಕ್ಕೆ ವ್ಯವಸ್ಥೆ