ಕರ್ನಾಟಕ

karnataka

ETV Bharat / city

ಕೆಲಸ ಮಾಡ್ತಿದ್ದ ಕಂಪನಿಯಲ್ಲೇ ಕಳ್ಳತನ,ನೌಕರನ ಬಂಧನ: 25 ಲ್ಯಾಪ್​ಟಾಪ್​ ಪೊಲೀಸರ ವಶ

ಕಂಪನಿಯಲ್ಲೇ ಕೆಲಸ ಮಾಡ್ತಿದ್ದ ದಿನಗೂಲಿ ನೌಕರನೋರ್ವ ಅನೇಕ ಲ್ಯಾಪ್​ಟಾಪ್​​ ಕಳ್ಳತನ ಮಾಡಿರುವ ಪ್ರಕರಣ ಬೆಂಗಳೂರಿನಲ್ಲಿ ನಡೆದಿದ್ದು, ಆರೋಪಿಯ ಬಂಧನ ಮಾಡಲಾಗಿದೆ.

Laptop theft arrest
Laptop theft arrest

By

Published : Dec 18, 2021, 3:04 AM IST

ಬೆಂಗಳೂರು:ಲ್ಯಾಪ್​​​​ ಟಾಪ್​ ಕಂಪನಿಯಲ್ಲಿ ದಿನಗೂಲಿ ನೌಕರನಾಗಿ ಕೆಲಸ ಮಾಡ್ತಿದ್ದ ವ್ಯಕ್ತಿಯೋರ್ವನನ್ನ ಬಂಧನ ಮಾಡುವಲ್ಲಿ ಕಾಮಾಕ್ಷಿಪಾಳ್ಯ ಠಾಣೆಯ ಪೊಲೀಸರು ಯಶಸ್ವಿಯಾಗಿದ್ದಾರೆ. ಬಂಧಿತನಿಂದ 6.25 ಲಕ್ಷ ರೂ. ಮೌಲ್ಯದ 25 ಲ್ಯಾಪ್​ಟಾಪ್​ಗಳನ್ನ ವಶಕ್ಕೆ ಪಡೆದುಕೊಳ್ಳಲಾಗಿದೆ.

ಲಗ್ಗರೆಯಲ್ಲಿ ವಾಸವಾಗಿದ್ದ ಮಹಾರಾಷ್ಟ್ರ ಮೂಲದ ಸುಮೀತ್ ಸಿಂಗ್(30) ಬಂಧಿತ ಆರೋಪಿಯಾಗಿದ್ದಾನೆ. ಅಂಗಡಿ ಹಾಗೂ ಗೋದಾಮುಗಳಲ್ಲಿ ಇದ್ದ ಲ್ಯಾಪ್​ಟಾಪ್​​​​ ಕಳ್ಳತನ ಮಾಡಿರುವ ಆರೋಪ ಈತನ ಮೇಲಿದೆ.

25 ಲ್ಯಾಪ್​ಟಾಪ್​ ಪೊಲೀಸರ ವಶ

ಕಂಪನಿಯಲ್ಲಿನ ಸಿಸಿಟಿವಿ ವಿಕ್ಷಣೆ ಮಾಡಿದಾಗ ಕಂಪನಿಯಲ್ಲಿ ಕೆಲಸ ಮಾಡ್ತಿದ್ದ ಸಮೀತ್​​​ ಲ್ಯಾಪ್​ ಟಾಪ್​​ ಕಳ್ಳತನ ಮಾಡಿಕೊಂಡು ಹೋಗುತ್ತಿರುವುದು ಕಂಡು ಬಂದಿದೆ.

ಕಂಪನಿಯಲ್ಲಿ ಲ್ಯಾಪ್​ಟಾಪ್​ ಕಳ್ಳತನವಾಗಿರುವ ಕುರಿತು ಕಾಮಾಕ್ಷಿಪಾಳ್ಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲು ಮಾಡಲಾಗಿತ್ತು. ಪ್ರಕರಣ ದಾಖಲು ಮಾಡಿಕೊಂಡ ಪೊಲೀಸರು ತನಿಖೆ ಆರಂಭಿಸಿದ್ದರು.ಇನ್ಸ್​ಪೆಕ್ಟರ್​ ಪ್ರಶಾಂತ್ ಹಾಗೂ ಸಿಬ್ಬಂದಿ ಆರೋಪಿಯ ಮಾಹಿತಿ ಕಲೆ ಹಾಕಿ ಬಂಧಿಸಿ, ಹೆಚ್ಚಿನ ವಿಚಾರಣೆಗೊಳಪಡಿಸಿದ್ದಾರೆ.

ಇದನ್ನೂ ಓದಿರಿ:ಬೆಳಗಾವಿ: ಅಧಿವೇಶನದ ಡ್ಯೂಟಿಗೆ ಬಂದ ವಾಹನಗಳ ಮೇಲೆ ಕಲ್ಲು ತೂರಾಟ.. ಪೊಲೀಸರಿಂದ ಲಾಠಿ ಚಾರ್ಜ್​

ಆರೋಪಿ ಕಂಪನಿಯಲ್ಲಿ ದಿನಗೂಲಿ ನೌಕರನಾಗಿ ಕೆಲಸ ಮಾಡಿಕೊಂಡಿದ್ದು, ಕಳೆದ ಮೂರು ತಿಂಗಳಿಂದ ಮಾಲೀಕರಿಗೆ ಗೊತ್ತಾಗದಂತೆ ಲ್ಯಾಪ್​ಟಾಪ್​ ಕಳತನ ಮಾಡಿ, ಸ್ನೇಹಿತರಿಗೆ ಕಡಿಮೆ ಬೆಲೆಗೆ ಮಾರಾಟ ಮಾಡಿದ್ದಾನೆ. ಹಲವು ಲ್ಯಾಪ್​ಟಾಪ್​ ಆತನ ರೂಮ್​ನಲ್ಲೇ ಇಟ್ಟುಕೊಂಡಿದ್ದನು ಎಂದು ಹೇಳಿದ್ದಾರೆ. ಆರೋಪಿ ನೀಡಿದ ಮಾಹಿತಿ ಮೇರೆಗೆ 6.25 ಲಕ್ಷ ರೂ ಬೆಲೆಯ 25 ಲ್ಯಾಪ್​ಟಾಪ್​ ವಶಪಡಿಸಿಕೊಳ್ಳುವಲ್ಲಿ ಕಾಮಾಕ್ಷಿಪಾಳ್ಯ ಠಾಣೆಯ ಪೊಲೀಸ್ ಸಿಬ್ಬಂದಿ ಯಶಸ್ವಿಯಾಗಿದ್ದಾರೆ.

ABOUT THE AUTHOR

...view details